ಮೂಳೂರು ಅಲ್ ಇಹ್ಸಾನ್ ಸ್ಕೂಲ್‌ಗೆ ಉತ್ತಮ ಫಲಿತಾಂಶ; ಹುದಾ ಅಮೀನಾಗೆ 598 ಅಂಕ
Monday, May 8, 2023
ಉಡುಪಿ: ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಇದರ ಅಧೀನ ಸಂಸ್ಥೆಯಾಗಿರುವ ಮೂಳೂರು ಅಲ್ ಇಹ್ಸಾನ್ ಆಂಗ್ಲ ಮಾಧ್ಯಮ ಶಾಲೆಯು ಈ ಬಾರಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದಾಖಲಿಸಿದೆ.
SSLC ಪರೀಕ್ಷೆಗೆ ಒಟ್ಟು 127 ಮಂದಿ ವಿದ್ಯಾರ್ಥಿಗಳು ಕೂತಿದ್ದು, ಅದರಲ್ಲಿ 35 ಮಂದಿ ಉನ್ನತ ಶ್ರೇಣಿ, 74 ಮಂದಿ ಪ್ರಥಮ ದರ್ಜೆ, 11 ಮಂದಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿನಿ ಹುದಾ ಅಮೀನಾ 598(ಶೇ.95.68) ಅಂಕ ಗಳಿಸುವ ಮೂಲಕ ಶಾಲೆಗೆ ಪ್ರಥಮ ಸ್ಥಾನಿಯಾಗಿ ಮೂಡಿಬಂದಿದ್ದಾರೆ.
ಅದೇ ರೀತಿ ಆಯೀಷಾತುಲ್ ಅಝ್ಮಿಯಾ 597(ಶೇ.95.52), ಹಫೀಲ್ ಮುಸದ್ದೀಕ್ ರಮ್ಝಿ 595(ಶೇ.95.20) ಅಂಕ ಪಡೆದಿದ್ದಾರೆ. ಉತ್ತಮ ಫಲಿತಾಂಶಕ್ಕಾಗಿ ಶಾಲಾ ಆಡಳಿತ ಮಂಡಳಿ ವಿದ್ಯಾರ್ಥಿ, ಶಿಕ್ಷಕರು ಹಾಗೂ ಶಿಕ್ಷಕರೇತರ ಸಿಬ್ಬಂದಿಗಳನ್ನು ಅಭಿನಂದಿಸಿದೆ.