ಜಿದ್ದಾಜಿದ್ದಿನ ಕಣವಾದ ಮಂಗಳೂರು ಉತ್ತರ; ಇನಾಯತ್ ಅಲಿ 'ಕೈ' ಹಿಡಿಯಲಿದ್ದಾರೆಯೇ  ಮತದಾರ

ಜಿದ್ದಾಜಿದ್ದಿನ ಕಣವಾದ ಮಂಗಳೂರು ಉತ್ತರ; ಇನಾಯತ್ ಅಲಿ 'ಕೈ' ಹಿಡಿಯಲಿದ್ದಾರೆಯೇ ಮತದಾರ

ಸುರತ್ಕಲ್: ರಾಜಕೀಯವಾಗಿ ಹಾಗೂ ಧಾರ್ಮಿಕವಾಗಿ ಬಹಳ ಸೂಕ್ಷ್ಮವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಪ್ರಮುಖ ವಿಧಾನಸಭೆ ಕ್ಷೇತ್ರಗಳಲ್ಲಿನ ಮಂಗಳೂರು ಉತ್ತರ ಕ್ಷೇತ್ರ, ಈ ಬಾರಿಯ ಚುನಾವಣೆಯ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದೆ.

ಇದಕ್ಕೆ ಕಾರಣ ಸಮಾಜಸೇವೆಯನ್ನೇ ಮೈಗೂಡಿಸಿಕೊಂಡಿರುವ ಇನಾಯತ್ ಅಲಿ ಎಂಬ ವ್ಯಕ್ತಿ. ಬಿಜೆಪಿ ಹಾಲಿ ಶಾಸಕ ಡಾ.ಭರತ್ ಶೆಟ್ಟಿಗೆ ಠಕ್ಕರ್ ನೀಡಲೆಂದೇ ಕಾಂಗ್ರೆಸ್ ಈ ಬಾರಿ ಇನಾಯತ್ ಅಲಿ ಎಂಬ ಸಚ್ಚಾರಿತ್ರ್ಯವಂತ, ಸರಳ ವ್ಯಕ್ತಿಯನ್ನು ಕಣಕ್ಕಿಳಿಸಿದೆ. 

ಕಳೆದ 7-8 ತಿಂಗಳಿನಿಂದ ಮಂಗಳೂರು ಉತ್ತರ ಕ್ಷೇತ್ರದಲ್ಲಿ ಹಗಲಿರುಳು ಪ್ರಚಾರ ನಡೆಸುವ ಮೂಲಕ ಅಭಿವೃದ್ಧಿಯ ಕನಸ ಕಾಣುತ್ತಿರುವ ಇನಾಯತ್ ಅಲಿ ಪರ ಈ ಬಾರಿ ಅಲೆ ಇದೆ ಎಂದು ಹೇಳುತಾರೆ ಈ ಭಾಗದ ಪ್ರಜ್ಞಾವಂತ ಮತದಾರರು.  

ಕಾಂಗ್ರೆಸ್'ನಲ್ಲಿ ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಜೆಡಿಎಸ್ ಸೇರಿರುವ ಮೊಯಿದಿನ್ ಬಾವಗೆ ಈ ಬಾರಿಯ ಚುನಾವಣೆಯಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲದ ಪಾತ್ರ ಎನ್ನುತ್ತಾರೆ ಮತದಾರರು.

ಬಿಗ್ ಫೈಟ್ ಇರುವುದು ಬಿಜೆಪಿಯ ಭರತ್ ಶೆಟ್ಟಿ ಹಾಗು ಕಾಂಗ್ರೆಸಿನ ಇನಾಯತ್ ಅಲಿ ಮಧ್ಯೆ. ಹಿಂದುತ್ವವನ್ನೇ ಹಿಡಿದುಕೊಂಡು ಭರತ್ ಶೆಟ್ಟಿ ಈ ಬಾರಿ ಚುನಾವಣೆಗಿಳಿದಿದ್ದರೆ, ಇತ್ತ ಅಭಿವೃದ್ಧಿಯೇ ನನ್ನ ಮೂಲ ಮಂತ್ರ ಎಂದು ಇನಾಯತ್ ಅಲಿ ಫೀಲ್ಡಿಗಿಳಿದಿದ್ದಾರೆ.

ಬಂದರು, ಪ್ರಮುಖ ಕೈಗಾರಿಕೆಗಳಾದ ಎಂಆರ್‌ಪಿಎಲ್‌, ಒಎನ್‌ಜಿಸಿ, ಎಂಸಿಎಫ್‌ ಹಾಗೂ ಪ್ರವಾಸೋದ್ಯಮ ತಾಣಗಳನ್ನೂ ಹೊಂದಿರುವ ಈ ಕ್ಷೇತ್ರದಲ್ಲಿ ಬಿಜೆಪಿ ವಿರುದ್ಧ ಆಡಳಿತ ವಿರೋಧಿ ಅಲೆ ಇದ್ದು, ಅಭಿವೃದ್ಧಿ ಕಾರ್ಯವೇ ನಡೆದಿಲ್ಲ ಎನ್ನುತ್ತಾರೆ ಇಲ್ಲಿನ ಮತದಾರರು.

ಈ ಭಾಗದಲ್ಲಿ ಅಬ್ಬರದ ಪ್ರಚಾರ ಕಾರ್ಯ ಮಾಡಿ ಮುಗಿಸಿರುವ ಇನಾಯತ್ ಅಲಿ, ಈ ಬಾರಿಯ ಗೆಲುವು ನಮ್ಮದೇ. ನಮ್ಮ ಗೆಲುವಿಗೆ ತಡೆಯೊಡ್ಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಆತ್ಮವಿಶ್ವಾಸದಲ್ಲಿ ಹೇಳುತ್ತಾರೆ.

ಈ ಬಾರಿ ಕಣದಲ್ಲಿರುವವರು 10 ಅಭ್ಯರ್ಥಿಗಳು...

-  ಡಾ| ಭರತ್‌ ಶೆಟ್ಟಿ ವೈ (ಬಿಜೆಪಿ)

-  ಇನಾಯತ್‌ ಅಲಿ (ಕಾಂಗ್ರೆಸ್‌)

-  ಮೊದಿನ್‌ ಬಾವ (ಜೆಡಿಎಸ್‌)

-  ಸಂದೀಪ್‌ ಪಿ.ಶೆಟ್ಟಿ (ಎಎಪಿ)

- ಧರ್ಮೇಂದ್ರ (ಅ.ಭಾ.ಹಿಂ.ಮಹಾಸಭಾ)

-  ಬಿ. ಪ್ರವೀಣ್‌ಚಂದ್ರ ರಾವ್‌ (ಎಚ್‌ಜೆಪಿ)(ಎಸ್‌)

-  ಪ್ರಶಾಂತ (ಉತ್ತಮ ಪ್ರಜಾಕೀಯ ಪಾರ್ಟಿ)

-  ಯಶೋದಾ (ಕರ್ನಾಟಕ ರಾಷ್ಟ್ರ ಸಮಿತಿ)

– ಮೆಕ್ಸಿಂ ಪಿಂಟೋ (ಪಕ್ಷೇತರ)

– ಎಚ್‌. ವಿನಯ ಆಚಾರ್ಯ (ಪಕ್ಷೇತರ)

Ads on article

Advertise in articles 1

advertising articles 2

Advertise under the article