ದೇಶದ ಸಮಗ್ರ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಉತ್ತಮ ಕೊಡುಗೆಯನ್ನು ನೀಡಿದೆ: ಪೆರ್ಡೂರಿನಲ್ಲಿ ಬಿಜೆಪಿಯ ಭರ್ಜರಿ ಚುನಾವಣಾ ಪ್ರಚಾರ: ಮತಯಾಚನೆ ನಡೆಸಿದ ಗುರ್ಮೆ ಸುರೇಶ ಶೆಟ್ಟಿ
ಕಾಪು: ಕಾಪು ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿರುವ ಗುರ್ಮೆ ಸುರೇಶ್ ಶೆಟ್ಟಿಯವರು ಇಂದು 1 ನೇ ಪೆರ್ಡೂರ್ ಗ್ರಾಮ ಪಂಚಾಯತ್ ಪೆರ್ಡೂರು ಇಲ್ಲಿ ಭರ್ಜರಿ ಮತಯಾಚನೆ ನೇರವೇರಿತು.
ಈ ಸಂಧರ್ಭದಲ್ಲಿ ನೆರೆದಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ವಿಧಾನ ಪರಿಷತ್ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ನಿಕ್ ರವರು ದೇಶದ ಸಮಗ್ರ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಉತ್ತಮ ಕೊಡುಗೆಯನ್ನು ನೀಡಿದೆ.ಇನ್ನಷ್ಟು ಅಭಿವೃದ್ಧಿಗಳು ಬಿಜೆಪಿ ಸರ್ಕಾರದಿಂದ ನಡೆಯಲಿದೆ. ಕಾಪು ಕ್ಷೇತ್ರದಲ್ಲಿ ಗುರ್ಮೆ ಸುರೇಶ್ ಶೆಟ್ಟಿ ಯವರಿಗೆ ಮತ ನೀಡಿ ಅವರಿಗೆ ಬೆಂಬಲ ನೀಡಬೇಕಾಗಿ ತಿಳಿಸಿದರು.
ನಂತರ ಮಾತನಾಡಿದ ಕಾಪು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಲಾಲಾಜಿ ಮೆಂಡನ್ ರವರು ಬಿಜೆಪಿ ಸರ್ಕಾರ ಕಾಪು ಕ್ಷೇತ್ರಕ್ಕೆ ಹಲವಾರು ಅಭಿವೃದ್ಧಿಕಾರ್ಯಗಳನ್ನು ಮಾಡಿದೆ. ಶೈಕ್ಷಣಿಕ ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಗುರುತಿಸಿ ಕೊಂಡಿರುವ ಸಮಾಜ ಸೇವಕ ಗುರ್ಮೆ ಸುರೇಶ್ ಶೆಟ್ಟಿ ಯವರಿಗೆ ನನ್ನ ಸಂಪೂರ್ಣ ಬೆಂಬಲ ಇದೆ ಅವರನ್ನು ಗೆಲ್ಲಿಸುವ ಜವಾಬ್ದಾರಿಯನ್ನು ನಾವು ನೀವೆಲ್ಲರೂ ಸೇರಿ ನಿಭಾಯಿಸೋಣ ಎಂದು ತಿಳಿಸಿದರು.
ನಂತರ ಮಾತನಾಡಿದ ಗುರ್ಮೆ ಸುರೇಶ್ ಶೆಟ್ಟಿ ಯವರು ಕೇಂದ್ರ ಮತ್ತು ರಾಜ್ಯ ಬಿಜೆಪಿ ಡಬಲ್ ಇಂಜಿನ್ ಸರ್ಕಾರವು ಕಾಪು ವಿಧಾನಸಭಾ ಕ್ಷೇತ್ರ ದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದು ಸಾವಿರಾರು ಕೋಟಿ ಅನುದಾನಗಳನ್ನ ನೀಡಿ ಅಭಿವೃದ್ಧಿ ಯೋಜನೆಗಳನ್ನು ಕಾರ್ಯ ರೂಪಕೆ ತಂದಿದೆ.ಬಿಜೆಪಿ ಪಕ್ಷದ ಸಿದ್ದಾoತ, ರಾಷ್ಟ್ರಿಯ ವಾದ, ರಾಷ್ಟ್ರ ಪರ ಚಿಂತನೆಗಳು ಹಾಗೂ ಹಿರಿಯರು ಇಟ್ಟ ವಿಶ್ವಾಸಗಳನ್ನು ಯಾವುದೇ ದಕ್ಕೆ ಬಾರದ ರೀತಿಯಲ್ಲಿ ನೋಡಿಕೊಂಡು ಕಾಪುವಿನ ಹೆಸರನ್ನು ಉಳಿಸುವ ಬೆಳೆಸುವ ಕೆಲಸವನ್ನು ಮಾಡುತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರು ವೀಣಾ ಶೆಟ್ಟಿ,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಗೀತಾoಜಲಿ ಸುವರ್ಣ, ಉಡುಪಿ ಬಿಜೆಪಿ ಜಿಲ್ಲಾ ಅಧ್ಯಕ್ಷರು ಸುರೇಶ್ ನಾಯಕ್, ನವದೆಹಲಿ ಮಾಜಿ ರಾಷ್ಟ್ರೀಯ ಮಹಿಳಾ ಹಕ್ಕುಗಳ ಆಯೋಗ ದ ಶ್ಯಾಮಲಾ ಕುಂದರ್, ಕಾಪು ವಿಧಾನ ಸಭಾ ಕ್ಷೇತ್ರ ದ ಚುನಾವಣಾ ಉಸ್ತುವಾರಿ ಸುಲೋಚನಾ ಭಟ್ ಬಂಟ್ವಾಳ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಶಿಲ್ಪಾ ಜಿ ಸುವರ್ಣ, 1ನೇ ಪೆರ್ಡೂರ್ ಗ್ರಾಮ ಪಂಚಾಯತ್ ಅಧ್ಯಕ್ಷರು ಶ್ರೀ ದೇವು ಪೂಜಾರಿ,ಕಾಪು ಕ್ಷೇತ್ರ ಮಹಿಳಾ ಮಂಡಳಿ ಅಧ್ಯಕ್ಷರು ಸುಮಾ ಶೆಟ್ಟಿ, ಬೈರಂಪಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಎಸ್ ಜಿಯಾನಂದ್ ಹೆಗ್ಡೆ,ಹಾಗೂ ಪಕ್ಷದ ಕಾರ್ಯಕರ್ತರು, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.