ದಕ್ಷಿಣ ಕನ್ನಡ ಜಿಲ್ಲೆಯ 8 ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಲ್ಲಿ ಅರಳಿದ ಕಮಲ: 2 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಕೈ ಹಿಡಿದ ಮತದಾರ; 5ನೇ ಬಾರಿಗೆ ಗೆಲುವಿನ ನಗೆ ಬೀರಿದ ಯು.ಟಿ.ಖಾದರ್
Saturday, May 13, 2023
ಮಂಗಳೂರು: ಈ ಬಾರಿಯ ವಿಧಾನಸಭೆಯ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ದಕ್ಷಿಣ ಕನ್ನಡ ಜಿಲ್ಲೆಯ 8 ಕ್ಷೇತ್ರಗಳ ಪೈಕಿ 2 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು 6 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ
ಕಾಂಗ್ರೆಸ್‌ನ ಯು.ಟಿ.ಖಾದರ್ ಮಂಗಳೂರು ಕ್ಷೇತ್ರದಲ್ಲಿ ಮತ್ತು ಅಶೋಕ್ ಕುಮಾರ್ ರೈ ಪುತ್ತೂರು ಕ್ಷೇತ್ರದಲ್ಲಿ ಜಯಗಳಿಸಿದ್ದಾರೆ.
ಬಿಜೆಪಿಯ ವೇದವ್ಯಾಸ ಕಾಮತ್ (ಮಂಗಳೂರು ದಕ್ಷಿಣ), ಡಾ.ಭರತ್ ಶೆಟ್ಟಿ (ಮಂಗಳೂರು ಉತ್ತರ), ಉಮಾನಾಥ ಕೋಟ್ಯಾನ್ (ಮೂಡುಬಿದಿರೆ), ರಾಜೇಶ್ ನಾಯ್ಕ್ (ಬಂಟ್ವಾಳ), ಹರೀಶ್ ಪೂಂಜಾ (ಬೆಳ್ತಂಗಡಿ), ಭಾಗೀರಥಿ ಮುರುಳ್ಯ (ಸುಳ್ಯ) ಗೆಲುವು ಸಾಧಿಸಿದ್ದಾರೆ.
ಯು.ಟಿ.ಖಾದರ್ ಸತತ 5 ಬಾರಿ, ವೇದವ್ಯಾಸ ಕಾಮತ್, ಡಾ.ಭರತ್ ಶೆಟ್ಟಿ, ಉಮನಾಥ ಕೋಟ್ಯಾನ್, ರಾಜೇಶ್ ನಾಯ್ಕ್ ಹಾಗೂ ಹರೀಶ್ ಪೂಂಜಾ ಸತತ 2ನೇ ಬಾರಿ ಜಯ ಗಳಿಸಿದ್ದರೆ, ಭಾಗೀರಥಿ ಮುರುಳ್ಯ ಮತ್ತು ಅಶೋಕ್ ಕುಮಾರ್ ರೈ ಮೊದಲ ಯತ್ನದಲ್ಲೇ ಗೆಲುವಿನ ನಗೆ ಬೀರಿದ್ದಾರೆ.