ಶಿರ್ವ ಫೈಝುಲ್ ಇಸ್ಲಾಂ ಆಂಗ್ಲ ಮಾಧ್ಯಮ ಶಾಲೆಯ ಆಶ್ರಯದಲ್ಲಿ ಮೇ 15 ಹಾಗು 16ರಂದು ಕಾಪು ಮಜೂರಿನ R.K.ಹೋಮ್ ಸ್ಟೇಯಲ್ಲಿ 4ರಿಂದ 10ವರ್ಷದೊಳಗಿನ ಮಕ್ಕಳಿಗೆ SUMMER CAMP (ಬೇಸಿಗೆ ಶಿಬಿರ) ಆಯೋಜಿಸಲಾಗಿದೆ.
ಈ ಸಮ್ಮರ್ ಕ್ಯಾಂಪಿನಲ್ಲಿ ಯಾವುದೇ ಶಾಲೆಯ, ಯಾವುದೇ ಪ್ರದೇಶದ ಮಕ್ಕಳು ಭಾಗವಹಿಸಬಹುದಾಗಿದೆ. ಈ ಸಮ್ಮರ್ ಕ್ಯಾಂಪಿನಲ್ಲಿ ಆಟ, ಹಾಡು, ಚಿತ್ರಕಲೆ, ಗಣಿತದ ಚಟುವಟಿಕೆ, ಕಥೆ, ಅರೇಬಿಕ್, ದೀನಿಯತ್, ರಸಪ್ರಶ್ನೆ, ವಿನೋದವಳಿಗಳು ಇರಲಿದ್ದು, ಕೊನೆಯಲ್ಲಿ ವಿಜೇತರಾಗುವ ಮಕ್ಕಳಿಗೆ ಬಹುಮಾನ ನೀಡಿ ಗೌರವಿಸಲಾಗುವುದು.
ಈ ಸಮ್ಮರ್ ಕ್ಯಾಂಪಿನಲ್ಲಿ ಭಾಗವಹಿಸುವ ಪ್ರತಿಯೊಂದು ಮಕ್ಕಳಿಗೆ 100 ರೂ. ಪ್ರವೇಶ ಶುಲ್ಕವಿಧಿಸಲಾಗಿದ್ದು, ಮಜೂರು, ಮಲ್ಲರು, ಬೆಳಪು, ಉಚ್ಚಿಲ, ಕಾಪು ಭಾಗದ ಸುತ್ತಮುತ್ತಲಿರುವ ಮಕ್ಕಳನ್ನು ಪೋಷಕರು ಭಾಗವಹಿಸುವಂತೆ ಮಾಡಿ ಸದುಪಯೋಗಪಡಿಸಿಕೊಳ್ಳುವಂತೆ ಸಂಘಟಕರು ವಿನಂತಿಸಿಕೊಂಡಿದ್ದಾರೆ.
