ಕೆಲವೇ ಸಮಯದಲ್ಲಿ ಮೋದಿ ನೇತೃತ್ವದಲ್ಲಿ ನಮ್ಮ ದೇಶವು ವಿಶ್ವ ಗುರು ಅಗಲಿದೆ: ಹಿರಿಯಡ್ಕದ ಮಹಾಲಸ ಕ್ಯಾಶ್ಯೂ ಫ್ಯಾಕ್ಟರಿ, ಬಾಲಾಜಿ ಆಯಿಲ್ ಮಿಲ್ ಗೆ ಭೇಟಿ ನೀಡಿ ಮಾತಾಯಾಚಿಸಿದ ಗುರ್ಮೆ ಸುರೇಶ್ ಶೆಟ್ಟಿ
ಕಾಪು: ಕಾಪು ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿರುವ ಗುರ್ಮೆ ಸುರೇಶ್ ಶೆಟ್ಟಿಯವರು ಇಂದು ಬೊಮ್ಮರ ಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಹಾಲಸ ಕ್ಯಾಶ್ಯೂ ಫ್ಯಾಕ್ಟರಿ ಹಿರಿಯಡ್ಕ ಗೆ ಭೇಟಿ ನೀಡಿ ಮಾತಾಯಾಚನೆ ಮಾಡಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಶ್ರೀ ಲಾಲಾಜಿ ಮೆಂಡನ್ ರವರು ಬಿಜೆಪಿ ಪಕ್ಷವು ಕಾಪು ಕ್ಷೇತ್ರ ದ ಅಭಿವೃದ್ಧಿ ಗೆ ಹಲವಾರು ಯೋಜನೆಗಳನ್ನು ಕಾರ್ಯ ರೂಪಕ್ಕೆ ತಂದಿದೆ, ನನ್ನ ಅಧಿಕಾರ ಅವಧಿಯಲ್ಲಿ ಬಿಜೆಪಿ ಯ ಕೊಡುಗೆ ಅಪಾರ ಈ ಭಾರಿಯು ಬಿಜೆಪಿ ಸರ್ಕಾರ ಇನ್ನಷ್ಟು ಅಭಿವೃದ್ಧಿ ಗಳನ್ನು ಮಾಡಲಿದೆ ಎಂದು ತಿಳಿಸಿದರು.
ನಂತರ ಮಾತನಾಡಿದ ಗುರ್ಮೆ ಸುರೇಶ್ ಶೆಟ್ಟಿ ಯವರು,ಕಾಪು ಕ್ಷೇತ್ರ ದ ಜನರ ಸೇವಗೆ ಹಾಗೂ ಕಾಪು ಕ್ಷೇತ್ರ ದ ಏಳಿಗೆಗಾಗಿ ನಾನು ಹಗಲಿರುಳು ಶ್ರಮಿಸುತ್ತೆನೆ, ಮತದಾನ ನಮ್ಮೆಲರ ಹಕ್ಕು ಹಾಗಾಗಿ ನಿಮ್ಮ ಅಮೂಲ್ಯವಾದ ಮತವನ್ನು ನನಗೆ ನೀಡಿ ಬೆಂಬಲಿಸ ಬೇಕಾಗಿ ಕೇಳಿ ಕೊಂಡರು.
ಈ ಸಂದರ್ಭದಲ್ಲಿ,ಮಾಲಕರದ ರೋಹಿತ್ ದಾಸ್ ಪೈ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಉಪೇಂದ್ರ ನಾಯಕ್,ಜಿಲ್ಲಾ ಬಿಜೆಪಿ ಉಪಾಧ್ಯಕ್ಷರು ಶ್ರೀಶ ನಾಯಕ್,ಜಿಲ್ಲಾ ಸಹ ವಕ್ತಾರ ಪ್ರತಾಪ್ ಶೆಟ್ಟಿ,ಬಡಗಬೆಟ್ಟು ಮಹಾಶಕ್ತಿ ಕೇಂದ್ರ ಅಧ್ಯಕ್ಷರು ಸಂದೀಪ್ ಶೆಟ್ಟಿ,ಪಂಚಾಯತ್ ಅಧ್ಯಕ್ಷರು ಪುರಂದರ ಕೋಟ್ಯಾನ್, ಪಂಚಾಯತ್ ಉಪಾಧ್ಯಕ್ಷರು ಹೇಮಲತಾ ಶೆಟ್ಟಿ,ಬಿಜೆಪಿ ಪ್ರಮುಖರು ಸಂತೋಷ್ ಬೊಲ್ಜೆ, ಪ್ರಸಾದ್ ಹೆಗ್ಡೆ, ಶಂಕರ್ ಸಾಲ್ಯಾನ್,ಪ್ರವೀಣ್ ಪೂಜಾರಿ,ಹಿರೇಬೆಟ್ಟು,ಹಿರಿಯಡ್ಕ ಪಂಚಾಯತ್ ಸದಸ್ಯರು ಹರೀಶ್ ಸಾಲ್ಯಾನ್ ಹಾಗೂ ಪಕ್ಷದ ಕಾರ್ಯಕರ್ತರು ಬಿಜೆಪಿ ಪ್ರಮುಖರು ಉಪಸ್ಥಿತರಿದ್ದರು.
ದೇಶಕ್ಕೆ ಮೋದಿಯ ಕೊಡುಗೆ ಅಪಾರ
ಅನಂತರ ಹಿರಿಯಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಒಂತಿ ಬೆಟ್ಟು ಪ್ರದೇಶದ ಶ್ರೀ ಬಾಲಾಜಿ ಆಯಿಲ್ ಮಿಲ್ ಗೆ ಭೇಟಿ ನೀಡಿ ಮಾತಾಯಾಚನೆ ಮಾಡಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಗುರ್ಮೆ ಸುರೇಶ್ ಶೆಟ್ಟಿ ಯವರು ದೇಶದ ಅಭಿವೃದ್ಧಿಯಲ್ಲಿ ನರೇಂದ್ರ ಮೋದಿಜಿ ಯವರ ಕೊಡುಗೆ ಅಪಾರ, ಈಗಾಗಲೇ ನಮ್ಮ ದೇಶವು ಅಭಿವೃದ್ಧಿ ಕಾರ್ಯದಲ್ಲಿ ಮುಂಚೂಣಿಯಲ್ಲಿದೆ. ಇನ್ನು ಕೆಲವೇ ಸಮಯದಲ್ಲಿ ನಮ್ಮ ದೇಶವು ವಿಶ್ವ ಗುರು ಅಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ,ಕಾಪು ವಿಧಾನ ಸಭಾ ಕ್ಷೇತ್ರ ದ ಶಾಸಕರು ಶ್ರೀ ಲಾಲಾಜಿ ಮೆಂಡನ್ ರವರು, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಉಪೇಂದ್ರ ನಾಯಕ್,ಜಿಲ್ಲಾ ಬಿಜೆಪಿ ಉಪಾಧ್ಯಕ್ಷರು ಶ್ರೀಶ ನಾಯಕ್, ಜಿಲ್ಲಾ ಸಹ ವಕ್ತಾರ ಪ್ರತಾಪ್ ಶೆಟ್ಟಿ, ಬಡಗಬೆಟ್ಟು ಮಹಾಶಕ್ತಿ ಕೇಂದ್ರ ಅಧ್ಯಕ್ಷರು ಸಂದೀಪ್ ಶೆಟ್ಟಿ, ಪಂಚಾಯತ್ ಅಧ್ಯಕ್ಷರು ಪುರಂದರ ಕೋಟ್ಯಾನ್, ಪಂಚಾಯತ್ ಉಪಾಧ್ಯಕ್ಷರು ಹೇಮಲತಾ ಶೆಟ್ಟಿ,ಬಿಜೆಪಿ ಪ್ರಮುಖರು ಸಂತೋಷ್ ಬೊಲ್ಜೆ, ಪ್ರಸಾದ್ ಹೆಗ್ಡೆ, ಶಂಕರ್ ಸಾಲ್ಯಾನ್,ಪ್ರವೀಣ್ ಪೂಜಾರಿ ಹಿರೇಬೆಟ್ಟು ಹಿರಿಯಡ್ಕ ಪಂಚಾಯತ್ ಸದಸ್ಯರು ಹರೀಶ್ ಸಾಲ್ಯಾನ್ ಹಾಗೂ ಪಕ್ಷದ ಪ್ರಮುಖರು ಕಾರ್ಯಕರ್ತರು ಉಪಸ್ಥಿತರಿದ್ದರು.