ಶುಕ್ರವಾರ ಮಿಂಚಿನ ಮತಪ್ರಚಾರ ನಡೆಸಿದ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ; ಮೂಡುಬೆಳ್ಳೆಯ ವಿವಿಧೆಡೆ ಮತಯಾಚನೆ
Saturday, May 6, 2023
ಕಾಪು ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿರುವ ಗುರ್ಮೆ ಸುರೇಶ್ ಶೆಟ್ಟಿಯವರು ಇಂದು ಮೂಡುಬೆಳ್ಳೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಭೇಟಿ ನೀಡಿ ಮಾತಾಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗುರ್ಮೆ ಸುರೇಶ್ ಶೆಟ್ಟಿಯವರು ಕಾರ್ಯಕರ್ತರ ಹುಮ್ಮಸ್ಸು, ಹಾಗೂ ಜನತೆಯ ಪ್ರೀತಿಯನ್ನು ನೋಡಿದಾಗ,ನನ್ನ ವಿಶ್ವಾಸ ಇಮ್ಮಡಿಯಾಗಿದೆ, ಜನತೆಯ ಹಿತಕ್ಕಾಗಿ ಹಗಲಿರುಳು ದುಡಿಯುತೇನೆ ಎಂಬ ಭರವಸೆ ಕೊಟ್ಟರು.
ಈ ಸಂದರ್ಭದಲ್ಲಿ,ಪಂಚಾಯತ್ ಅಧ್ಯಕ್ಷರು ಸುಧಾಕರ್ ಪೂಜಾರಿ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಜೆರಲ್ ಫೆರ್ನಾಂಡಿಸ್,ಪಂಚಾಯತ್ ಉಪಾಧ್ಯಕ್ಷರು ಸಂಧ್ಯಾ ಶೆಟ್ಟಿ,ಪಂಚಾಯತ್ ಸದಸ್ಯರಾದ ಶಶಿಧರ್ ವಾಗ್ಲೆ,ಗುರುರಾಜ್ ಭಟ್, ಅಭ್ಯರ್ಥಿ ಪ್ರಮುಖ್ ಅನಿಲ್ ಕುಮಾರ್,ಪಂಚಾಯತ್ ಹಾಗೂ ಪಕ್ಷದ ಕಾರ್ಯಕರ್ತರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.