
ಕಳತ್ತೂರು ಕುಕ್ಕುಂಜೆಯಲ್ಲಿ ಮತಯಾಚಿಸಿದ ಗುರ್ಮೆ ಸುರೇಶ್ ಶೆಟ್ಟಿ; ಪಡುಬಿದ್ರೆ ನಡ್ಸಲ್ ಶ್ರೀ ಅಧಿಶಕ್ತಿ ದೇವಸ್ಥಾನಕ್ಕೆ ಭೇಟಿ
ಕಾಪು ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿರುವ ಗುರ್ಮೆ ಸುರೇಶ್ ಶೆಟ್ಟಿಯವರು ಶುಕ್ರವಾರ ಪಡುಬಿದ್ರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ನಡ್ಸಲ್ ಶ್ರೀ ಅಧಿಶಕ್ತಿ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಪಡಿಬಿದ್ರೆ ಬಿಜೆಪಿ ಜಿಲ್ಲಾ ಅಧ್ಯಕ್ಷರು ಶಶಿಕಾಂತ್,ಬ್ರಹ್ಮ ಕಲಶ ಅಧ್ಯಕ್ಷರು ಸೀನ ಪೂಜಾರಿ, ಅಭ್ಯರ್ಥಿ ಪ್ರಮುಖ್ ಅನಿಲ್ ಕುಮಾರ್, ಪಂಚಾಯತ್ ಸದಸ್ಯರು ರವಿ ಶೆಟ್ಟಿ,ಹಾಗೂ ಪಕ್ಷದ ಕಾರ್ಯಕರ್ತರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ಬಳಿಕ ಕಳತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಕ್ಕುಂಜೆ ಪ್ರದೇಶದಲ್ಲಿ ಮಾತಾಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಶಕ್ತಿಕೇಂದ್ರ ಅಧ್ಯಕ್ಷರಾದ ಸುರೇಶ್ ದೇವಾಡಿಗ, ಗ್ರಾಮ ಪಂಚಾಯತ್ ಸದಸ್ಯರಾದ ಗಣೇಶ್ ಶೆಟ್ಟಿ,ಅಭ್ಯರ್ಥಿ ಪ್ರಮುಖ್ ಅನಿಲ್ ಕುಮಾರ್,ಭೂತ್ ಅಧ್ಯಕ್ಷರು ಪ್ರಭಾಕರ್ ಶೆಟ್ಟಿ, ಶಶಿರಾಜ್ ಪಯ್ಯಾರ್, ಹಾಗೂ ಪಕ್ಷದ ಪ್ರಮುಖರು ನಿತ್ಯಾನಂದ ಶೆಟ್ಟಿ, ದಯಾನಂದ ಶೆಟ್ಟಿ, ಸುಭಾಸ್ ಶೆಟ್ಟಿ,ಬಬ್ಬು ಸ್ವಾಮಿ ದೇವಸ್ಥಾನದ ಗುರಿಕಾರು ಹಾಗೂ ಬೆಳಪು ಭೂತ್ ಅಧ್ಯಕರು ಶಂಕರ್ ಬೆಳಪು, ಹಾಗೂ ಪಕ್ಷದ ಕಾರ್ಯಕರ್ತರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.