ನನ್ನ ಗೆಲುವಿಗೆ ಬೆಂಬಲಿಸಿ; ಕಳತ್ತೂರು ವ್ಯಾಪ್ತಿಯ ಪಯ್ಯಾರ್, ಸೂರ್ಯ ನಗರದಲ್ಲಿ ಮಾತಾಯಾಚನೆ ಮಾಡಿದ ಗುರ್ಮೆ ಸುರೇಶ್ ಶೆಟ್ಟಿ
Friday, May 5, 2023
ಕಾಪು: ಕಾಪು ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿಯವರು ಇಂದು ಕಳತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಯ್ಯರ್ ಸೂರ್ಯ ನಗರ ಪ್ರದೇಶದಲ್ಲಿ ಮಾತಾಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗುರ್ಮೆ ಸುರೇಶ್ ಶೆಟ್ಟಿ, ಮೊದಲು ಮನೆಯಲ್ಲಿ ಗೆಲ್ಲಲಿ, ನಂತರ ಊರು ಗೆಲ್ಲಲಿ, ಊರು ಗೆದ್ದರೆ ಜಗತ್ತೇ ಗೆದ್ದಂತೆ. ನೀವು ನನ್ನ ಜೊತೆ ಕೈ ಜೋಡಿಸಿ ನನ್ನನು ಗೆಲ್ಲಿಸ ಬೇಕಾಗಿ ಎಂದು ವಿನಂತಿ ಮಾಡಿದರು.
ಈ ಸಂದರ್ಭದಲ್ಲಿ ಶಕ್ತಿಕೇಂದ್ರ ಅಧ್ಯಕ್ಷರಾದ ಸುರೇಶ್ ದೇವಾಡಿಗ, ಗ್ರಾಮ ಪಂಚಾಯತ್ ಸದಸ್ಯರಾದ ಗಣೇಶ್ ಶೆಟ್ಟಿ,ಅಭ್ಯರ್ಥಿ ಪ್ರಮುಖ್ ಅನಿಲ್ ಕುಮಾರ್,ಭೂತ್ ಅಧ್ಯಕ್ಷರು ಪ್ರಭಾಕರ್ ಶೆಟ್ಟಿ, ಶಶಿರಾಜ್ ಪಯ್ಯಾರ್, ಹಾಗೂ ಪಕ್ಷದ ಪ್ರಮುಖರು ನಿತ್ಯಾನಂದ ಶೆಟ್ಟಿ, ದಯಾನಂದ ಶೆಟ್ಟಿ, ಸುಭಾಸ್ ಶೆಟ್ಟಿ,ಬಬ್ಬು ಸ್ವಾಮಿ ದೇವಸ್ಥಾನದ ಗುರಿಕಾರು ಹಾಗೂ ಬೆಳಪು ಭೂತ್ ಅಧ್ಯಕರು ಶಂಕರ್ ಬೆಳಪು, ಹಾಗೂ ಪಕ್ಷದ ಕಾರ್ಯಕರ್ತರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.