ಹಿಂದೂ ಧಾರ್ಮಿಕ ಕೇಂದ್ರದ ಅಭಿವೃದ್ಧಿ ಕಾಂಗ್ರೆಸ್ಸಿಗೆ ಬೇಕಿಲ್ಲ, ಸಹಿಸಲೂ ಆಗುತಿಲ್ಲ: ಮಹಾವೀರ ಹೆಗ್ಡೆ
ಕಾರ್ಕಳ: ಕಾರ್ಕಳದ ಪುರಾತನ ದೇಗುಲ ಶ್ರೀ ಮಾರಿಯಮ್ಮ ಇಡೀ ಕಾರ್ಕಳ ಕ್ಷೇತ್ರದ ಭಕ್ತರಿಗೆ ಸಂಬಂದಿಸಿದ್ದು, ಸರ್ವ ಭಕ್ತರ ನೆರವಿನಿಂದ ಭಕ್ತರ ಆಶಯದಂತೆ, ಸರಕಾರದ ಸಹಕಾರ ಪಡೆದು ದೇವಿ ದೇಗುಲದ ಜೀರ್ಣೋದ್ಧಾರ ನಡೆಸಿ, ಬ್ರಹ್ಮಕಲಶ ವೈಭಯುತವಾಗಿ ನಡೆಸಿದರೆ ಇಷ್ಟು ದೊಡ್ಡ ದೇವಸ್ಥಾನ ಬೇಕಿತ್ತ? ವೈಭವ ಬೇಕಿತ್ತ ಎಂದೆಲ್ಲ ದೇವಸ್ಥಾನದ ಅಭಿವೃದ್ಧಿಯನ್ನೆೆ ಕಾಂಗ್ರೆೆಸ್ಸಿಗರು ಪ್ರಶ್ನೆೆ ಮಾಡುತ್ತಿದ್ದಾರೆ. ಹಿಂದೂ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಯನ್ನು ಕಾಂಗ್ರೆೆಸ್ಸಿಗೆ ಸಹಿಸಲಾಗುತ್ತಿಲ್ಲವೇ ಎಂದು ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ಪ್ರಶ್ನಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ಕಾಂಗ್ರೆೆಸ್ಸಿಗರ ಮನಸ್ಥಿತಿ ಹೇಗಿದೆ ಎಂದರೆ ಅಭಿವೃದ್ಧಿ ಆಗಿಲ್ಲ ಎಂದರೆ ಆಗಿಲ್ಲ ಎನ್ನುತ್ತಾಾರೆ. ಅಭಿವೃದ್ಧಿ ಮಾಡಿದಾಗ ಅದನ್ನು ಟೀಕಿಸುತ್ತಾಾರೆ. ಹಾಗಿದ್ದರೆ ಹಿಂದೂ ಧಾರ್ಮಿಕ ಕ್ಷೇತ್ರಗಳ ಬಗ್ಗೆೆ ಕಾಂಗ್ರೆೆಸ್ಸಿನ ಮನಸ್ಥಿತಿ ಏನು ಎನ್ನುವುದೇ ಅರ್ಥವಾಗುತಿಲ್ಲ. ಒಂದು ಕಡೆ ಹಿಂದೂ ದೇವಸ್ಥಾಾನಗಳ ಅಭಿವೃದ್ಧಿ ಸಹಿಸದೆ ಟೀಕಿಸುವವರು ತಮ್ಮದೇ ಪಕ್ಷದ ಕಾರ್ಕಳ ಕಾಂಗ್ರೆಸ್ ಅಭ್ಯರ್ಥಿ ಗುಟ್ಟಾಾಗಿ ಮಸೀದಿ ಕಟ್ಟಿ ಕೊಡುತ್ತೇವೆ ಎನ್ನುತ್ತ ತಿರುಗಾಡುತ್ತಿದ್ದಾರೆ ಎಂದರು.
ಮಾರಿಗುಡಿ ದೇವಸ್ಥಾನದ ಜೀರ್ಣೊದ್ಧಾರ, ಬ್ರಹ್ಮಕಲಶ ಸಂದರ್ಭ ಎಲ್ಲರೂ ಕೈ ಜೋಡಿಸಿದ್ದಾರೆ. ಅದರಲ್ಲಿ ನಮ್ಮ ಕಾರ್ಯಕರ್ತರು ಸೇರಿದ್ದರು. ಸಚಿವರು ನನ್ನಿಂದಲೆ ಆಗಿದೆ ಎಂದು ಎಲ್ಲಿ ಹೇಳಿದ್ದಾರೆ ಎಂದ ಅವರು ಕಾಂಗ್ರೆಸ್ ನವರಿಗೆ ಒಟ್ಟಾರೆ ಟೀಕಿಸಲು ವಿಷಯವಿಲ್ಲ ಅದಕ್ಕೆ ಇಂತಹ ವಿಚಾರಗಳನ್ನು ಎತ್ತುತ್ತಿದೆ ಎಂದರು. ಹಿಂದೂ ಅಶ್ಲೀಲ ಎನ್ನುವ ಪದ ಬಳಕೆ ಮಾಡುವ ಕಾಂಗ್ರೆೆಸ್ಸಿ
ಗರಿಗೆ ಹಿಂದೂ ಧಾರ್ಮಿಕ ಕೇಂದ್ರದ ಅಭಿವೃದ್ಧಿಯನ್ನು ಸಹಿಸಲು ಸಾಧ್ಯವಾಗುತಿಲ್ಲ, ಹಿಂದೂ ದೇಗುಲ ಅಭಿವೃದ್ಧಿ ಆಗುವುದು ಕಾಂಗ್ರೆೆಸ್ಸಿಗೆ ಬೇಕಿಲ್ಲ ಎಂದ ಅವರು ಮಂಗಳೂರು ಕುಕ್ಕರ್ ಬ್ಲಾಾಸ್ಟ್ ಆರೋಪಿಯನ್ನು ಅಮಾಯಕ ಎಂದು ಆ ಪಕ್ಷದ ಮುಖಂಡರೇ ಹೇಳುತ್ತಾಾರೆ. ಇನ್ನು ಧಾರ್ಮಿಕ ವಿಚಾರದಲ್ಲಿ ಅದೇ ಮಾನಸಿಕತೆಯುಳ್ಳ ಇಲ್ಲಿಯವರು ಟೀಕೆ ಮಾಡುವುದರಲ್ಲಿ ವಿಶೇಷವೇನಲ್ಲ..ಧಾರ್ಮಿಕ ವಿಚಾರ ಬಂದಾಗ ಪ್ರತಿಯೊಂದರಲ್ಲೂ ಹುಳುಕು ಹುಡುಕುವ ಕಾಂಗ್ರೆೆಸ್ಸಿಗರಿಗೆ ಹಿಂದೂ ಧಾರ್ಮಿಕ ಕ್ಷೇತ್ರಗಳ ವೈಭವ ಕಾಣುವುದಕ್ಕೆೆ, ಅರಗಿಸಿಕೊಳ್ಳಲು ಆಗುತಿಲ್ಲ ಎಂದು ದೂರಿದರು.