ಮೊಗವೀರರ 'ಕಾಂಚನ್' ಕುಲನಾಮ ತಿರುಚಿ ತಪ್ಪು ಸಂದೇಶ ನೀಡುತ್ತಿರುವ ಬಿಜೆಪಿಗರು: ಎಚ್ಚರಿಕೆ ನೀಡಿದ ರಮೇಶ್ ಕಾಂಚನ್

ಮೊಗವೀರರ 'ಕಾಂಚನ್' ಕುಲನಾಮ ತಿರುಚಿ ತಪ್ಪು ಸಂದೇಶ ನೀಡುತ್ತಿರುವ ಬಿಜೆಪಿಗರು: ಎಚ್ಚರಿಕೆ ನೀಡಿದ ರಮೇಶ್ ಕಾಂಚನ್

ಕಾಂಚನ್ ಎನ್ನುವುದು ಕರಾವಳಿ ತಡಿಯ ಉಡುಪಿಯ ಶ್ರಮ ಜೀವಿಗಳಾದ ಮೊಗವೀರ ಸಮುದಾಯದ ಹೆಮ್ಮೆಯ ಕುಲನಾಮ. ಇಲ್ಲಿ ಕಾಂಚನ್ ಮೂಲ ಸ್ಥಾನ ಕೂಡ ‌ಹೊಂದಿದೆ. ಆದರೆ ನಮ್ಮ ಕುಲನಾಮವನ್ನು ಉಡುಪಿ ಬಿಜೆಪಿಯ ಬೆಂಬಲಿಗರು ಸೋಷಿಯಲ್ ಮೀಡಿಯಾದಲ್ಲಿ ವಿಕಾರವಾಗಿ ತಿರುಚಿ ಇಡೀ ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತಿದ್ದಾರೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಆಕ್ರೋಶ ಹೊರಹಾಕಿದ್ದಾರೆ.

ದಯವಿಟ್ಟು ಸಮಾಜ ಭಾಂಧವರು ವಿಚಲಿತರಾಗದೇ ಶಾಂತಿಯುತವಾಗಿ ಇರಬೇಕೆಂದು ಇಡೀ ಸಮಾಜದ ಪರವಾಗಿ ರಮೇಶ್ ಕಾಂಚನ್  ಅವರು ಪತ್ರಿಕಾ ಹೇಳಿಕೆಯಲ್ಲಿ ವಿನಂತಿಸಿ ಕೊಂಡಿದ್ದಾರೆ.

ಕೈ ಲಾಗದವರ‌ ಕೊನೆಯ‌ ಅಸ್ತ್ರ ಅಪಪ್ರಚಾರ. ಗೆಲ್ಲುವ ಅಮಲಿನಲ್ಲಿದ್ದ ಬಿಜೆಪಿ ನಾಯಕರು ಪ್ರಸಾದ್ ರಾಜ್ ಕಾಂಚನ್ ಗೆ ದೊರಕುತ್ತಾ ಇರುವ ಅಭೂತಪೂರ್ವ ಜನ‌ ಬೆಂಬಲ ಕಂಡು ಕಂಗಲಾಗಿದ್ದಾರೆ. ಯಾರನ್ನೂ ಟೀಕಿಸದೇ, ಕೇವಲ ಉಡುಪಿಯ ಪ್ರಗತಿ ಬಗ್ಗೆ ಮಾತಡುತ್ತಾ, ತನ್ನಲ್ಲಿದ್ದ ದೂರದೃಷ್ಟಿತ್ವ ಯೋಜನೆಗಳಿಂದ ಜನರನ್ನು ಪ್ರಸಾದ್ ಆಕರ್ಷಣೆ ಮಾಡುವದನ್ನು ಕಂಡ ಬಿಜೆಪಿಯ ಬುಡಕ್ಕೆ ಬೆಂಕಿ ಬಿದ್ದಿದೆ.

ಮೊನ್ನೆ ಮೊನ್ನೆವರೆಗೂ ದುರ್ಬಲ ಅಭ್ಯರ್ಥಿ ಎನ್ನುತ್ತಿದ್ದವರು ಇದೀಗ ಪ್ರಸಾದ್ ರಾಜ್ ಕಾಂಚನ್ ವಿರುದ್ದ ಬೇರೆ ಬೇರೆ ರೀತಿಯಲ್ಲಿ ನಾಲಿಗೆ ಹರಿ ಬಿಡಲು ಶುರು ಮಾಡಿದ್ದಾರೆ.ಇದೀಗ ಪ್ರಸಾದ್ ರಾಜ್ ಕಾಂಚನ್ ರ ಫೋಟೋಗಳನ್ನು ತಿರುಚಿ ಫೋಟೊಗಳನ್ನು ಎಡಿಟ್ ಮಾಡೋಕೆ‌ ಶುರು ಮಾಡಿ, ಸಾಮಾಜಿಕ ಜಾಲತಾಣ ದಲ್ಲಿ ಹಂಚಿ ಕೊಳ್ಳುತ್ತಿರುವುದನ್ನು ರಮೇಶ್ ರವರು ಕಟುವಾಗಿ ಖಂಡಿಸಿದ್ದಾರೆ.

ಸರ್ವ ಧರ್ಮಗಳನ್ನು ಗೌರವಿಸುವ ಪ್ರಸಾದ್ ಕಾಂಚನ್ ಯಾರೊಬ್ಬರನ್ನು‌ ನೋವಿಸಿಲ್ಲ ,ಯಾರ ಕುರಿತೂ ಟೀಕೆಯನ್ನೂ ಮಾಡಿಲ್ಲ.ಆದರೆ ಪ್ರಸಾದ್ ರಾಜ್ ಕಾಂಚನ್ ರನ್ನು, ಅವರ ಕುಲ ನಾಮ ವನ್ನು, ಸಮುದಾಯವನ್ನು ತೇಜೋವಧೆ ಮಾಡಲು ಮುಂದಾಗಿದ್ದಾರೆ.

ಬಿಜೆಪಿಯ ಹತಾಶ ಮನೊಸ್ಥಿತಿಯಿಂದ ಇಡೀ ಕಾಂಚನ್‌ ಸಮುದಾಯವನ್ನೇ ಅವಮಾನ ಮಾಡಿರುವುದು‌ ನೋವಿನ ಸಂಗತಿಯಾಗಿದೆ. ಮೊಗವೀರ ಕುಟುಂಬದ ಕಾಂಚನ್ ಮೂಲ ಕುಟುಂಬದ ಪ್ರಸಾದ್ ರ ಫೊಟೊ ತಿರುಚಿದ್ದು ಇಡೀ ಮೊಗವೀರ ಸಮುದಾಯಕ್ಕೆ ಅವಮಾನವಾಗಿದೆ.

ಉಚ್ಚಿಲ ಮಹಾಲಕ್ಷ್ಮೀ ದೇವಾಲಯದ ಅಭಿವೃದ್ದಿ ಸಮಿತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ತೆಂಕ ಬಡಾನಿಡಿಯೂರು ದೇವಾಲಯದ ನಿರ್ಮಾಣದ ಉಸ್ತುವಾರಿ ಮಾಡಿದ್ದ ಕಾಂಚನ್ ಓರ್ವ ಹನುಮ ಭಕ್ತ, ಮುಖ್ಯಪ್ರಾಣ ದೇವರ ಅರಾಧಕ.

ಒಬ್ಬ ಸಜ್ಜನ ಮೊಗವೀರ ಸಮುದಾಯದ ವ್ಯಕ್ತಿ. ರಾಜಕೀಯವಾಗಿ ಟೀಕೆಗಳನ್ನು ಸಹಿಸಿಕೊಳ್ಳಬಹುದು ಅದ್ರೆ ಮೋಗವೀರ ಸಮುದಾಯ ಕಾಂಚನ್ ಪದವನ್ನು ಅವಮಾನಿಸುವ ಮೂಲಕ ಮೋಗವೀರರ ಮನ ನೋವಿಸುವ ಕೆಲಸಕ್ಕೆ ಕೈ ಹಾಕಿದ್ದಕ್ಕೆ ಬಿಜೆಪಿ ಭಾರೀ ಬೆಲೆ ತೆರಬೇಕಾಗಿ ಬರಬಹುದು ಎಂಬ ಎಚ್ಚರಿಕೆಯನ್ನು‌ ರಮೇಶ್ ಕಾಂಚನ್ ನೀಡಿದ್ದಾರೆ.

Ads on article

Advertise in articles 1

advertising articles 2

Advertise under the article