ಕಾರ್ಕಳದಲ್ಲಿ ಯೋಗಿ ಆದಿತ್ಯನಾಥ್ ಸಾರಥ್ಯದಲ್ಲಿ ಬೃಹತ್ ರೋಡ್ ಶೋ; ಸುನಿಲ್ ಕುಮಾರ್ ಪರ ಮತಯಾಚಿಸಿದ ಯುಪಿ ಸಿಎಂ;  ಸಹಸ್ರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಭಾಗಿ

ಕಾರ್ಕಳದಲ್ಲಿ ಯೋಗಿ ಆದಿತ್ಯನಾಥ್ ಸಾರಥ್ಯದಲ್ಲಿ ಬೃಹತ್ ರೋಡ್ ಶೋ; ಸುನಿಲ್ ಕುಮಾರ್ ಪರ ಮತಯಾಚಿಸಿದ ಯುಪಿ ಸಿಎಂ; ಸಹಸ್ರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಭಾಗಿ


ಕಾರ್ಕಳ: ಚುನಾವಣೆಯ ಹಿನ್ನೆಲೆಯಲ್ಲಿ ಶನಿವಾರ ಕಾರ್ಕಳ ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ಪರ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಾರಥ್ಯದಲ್ಲಿ ಬೃಹತ್ ರೋಡ್  ಶೋ ನಡೆಯಿತು.
















'ಕಾರ್ಕಳ ಕ್ಷೇತ್ರದ ಎಲ್ಲ ಬಂಧು-ಮಿತ್ರರಿಗೆ ನನ್ನ ನಮಸ್ಕಾರಗಳು' ಎಂದು ಕನ್ನಡಲ್ಲೇ ತನ್ನ ಭಾಷಣವನ್ನು ಆರಂಭಿಸಿದ ಯೋಗಿ ಆದಿತ್ಯನಾಥ್, ನಮ್ಮ ಸಂಸ್ಕೃತಿ, ಧರ್ಮವನ್ನು ಉಳಿಸುವ ನಿಟ್ಟಿನಲ್ಲಿ ಈ ಬಾರಿಯೂ ರಾಜ್ಯದಲ್ಲಿ ಬಿಜೆಪಿ ಸರಕಾರವನ್ನು ಮತ್ತೆ ಆಡಳಿತಕ್ಕೆ ತರಲು ರಾಷ್ಟ್ರಭಕ್ತರೆಲ್ಲರೂ ಒಂದುಗೂಡಬೇಕಿದೆ. ಈ ನಿಟ್ಟಿನಲ್ಲಿ ಕಾರ್ಕಳದಲ್ಲಿ ಸುನಿಲ್ ಕುಮಾರ್ ಅವರನ್ನು ಪ್ರಚಂಡ ಬಹುಮತದ ಮೂಲಕ ಗೆಲ್ಲಿಸಬೇಕಾಗಿರವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಈ ಬಾರಿ ಬಿಜೆಪಿಯ ಡಬಲ್ ಇಂಜಿನ್ ಸರಕಾರ ಬರುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದ ಆದಿತ್ಯನಾಥ್, ಈ ಬಾರಿ ಕಾಂಗ್ರೆಸ್-ಬಿಜೆಪಿ ಪಕ್ಷವನ್ನು ಸೋಲಿಯುವ ಮೂಲಕ ತಕ್ಕ ಉತ್ತರ ವರಿಗೆ ನೀಡಬೇಕಿದೆ ಎಂದರು.






ಮೋದಿ ಅವರ ನಾಯಕತ್ವದಲ್ಲಿ ಭಾರತವು ಇಂದು ಜಗತ್ತಿನಲ್ಲಿಯೇ ಶಕ್ತಿಶಾಲಿ ದೇಶವಾಗಿ ಹೊರಹೊಮ್ಮುತ್ತಿದೆ. ದೇಶದ ಅಭಿವೃದ್ಧಿ ಎಂದೆಂದೂ ಕಾಣದರಿಯದ ರೀತಿಯಲ್ಲಿ ಆಗುತ್ತಿದೆ. ರಾಜ್ಯದಲ್ಲಿ ಬಿಜೆಪಿ ಮತ್ತೆ ಸರಕಾರ ರಚಿಸುವಂತೆ ಮಾಡಿ ಎಂದು ಜನರಲ್ಲಿ ಮನವಿ ಮಾಡಿಕೊಂಡರು.

ಯೋಗಿ ಆದಿತ್ಯನಾಥ್ ಅವರ ಸಾರಥ್ಯದಲ್ಲಿ ನಡೆದ ಬೃಹತ್ ರೋಡ್ ಶೋ ಕಾರ್ಕಳದ ಅನಂತಶಯನ ವೃತ್ತದಿಂದ ನಗರದ ಮುಖ್ಯರಸ್ತೆಯಲ್ಲಿ ಸಾಗಿ ಶ್ರೀ ವೆಂಕಟರಮಣ ದೇವಸ್ಥಾನದ ವರೆಗೆ ಸಾಗಿ ಬಂತು. ಈ ರೋಡ್ ಶೋದಲ್ಲಿ ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್,  ಸಹಸ್ರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.

Ads on article

Advertise in articles 1

advertising articles 2

Advertise under the article