ಕಾಪು ಕ್ಷೇತ್ರ ಅಭಿವೃದ್ಧಿಗಾಗಿ ಕೆಲಸ ಮಾಡುವೆ, ನಿಮ್ಮ ಬೆಂಬಲ ನನ್ನ ಮೇಲೆ ಇರಲಿ: ಕುಕ್ಕೆಹಳ್ಳಿಯ ಶ್ರೀ ನಿಧಿ ಕ್ಯಾಶ್ಯೂಸ್ ಗೆ ಭೇಟಿ ನೀಡಿ ಮಾತಾಯಾಚಿಸಿದ ಗುರ್ಮೆ ಸುರೇಶ್ ಶೆಟ್ಟಿ
ಕಾಪು: ಕಾಪು ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿರುವ ಗುರ್ಮೆ ಸುರೇಶ್ ಶೆಟ್ಟಿಯವರು ಇಂದು ಕುಕ್ಕೆಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಶ್ರೀ ನಿಧಿ ಕ್ಯಾಶ್ಯೂಸ್ ಗೆ ಭೇಟಿ ನೀಡಿ ಮಾತಾಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಲಾಲಾಜಿ ಮೆಂಡನ್ ರವರು ಈಗಾಗಲೇ ಹಲವಾರು ಬೀಜ ಕಾರ್ಖಾನೆ ಗೆ ಭೇಟಿ ಕೊಟ್ಟು ಮಾತಾಯಾಚನೆ ನಡೆಸಿದ್ದೇವೆ, ಎಲ್ಲಾ ಕಡೆ ಉತ್ತಮ ಬೆಂಬಲ ಸಿಕ್ಕಿದೆ, ನನ್ನ ಅಧಿಕಾರ ಅವಧಿಯಲ್ಲಿ ಕಾಪು ಕ್ಷೇತ್ರಕ್ಕಾಗಿ ತುಂಬಾ ಶ್ರಮಿಸಿದ್ದೇನೆ. ಇನ್ನು ಆ ಜವಾಬ್ದಾರಿಯನ್ನು ಗುರ್ಮೆ ಸುರೇಶ್ ಶೆಟ್ಟಿಯವರು ನಿಭಾಯಿಸಿಲಿದ್ದಾರೆ ಎಂದು ತಿಳಿಸಿದರು.
ನಂತರ ಮಾತಾಡಿದ ಗುರ್ಮೆ ಶೆಟ್ಟಿ ಯವರು ಲಾಲಾಜಿ ಮೆಂಡನ್ ರವರ ಮಾರ್ಗದರ್ಶನದಲ್ಲಿ ನಾನು ಕಾಪು ಕ್ಷೇತ್ರ ಅಭಿವೃದ್ಧಿಗಾಗಿ ಕೆಲಸ ಮಾಡುತೇನೆ. ನಿಮ್ಮ ಬೆಂಬಲ ನನ್ನ ಮೇಲೆ ಇರಲಿ ಎಂದು ಕೇಳಿ ಕೊಂಡರು.
ಈ ಸಂದರ್ಭದಲ್ಲಿ,ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಉಪೇಂದ್ರ ನಾಯಕ್,ಜಿಲ್ಲಾ ಬಿಜೆಪಿ ಉಪಾಧ್ಯಕ್ಷರು ಶ್ರೀಶ ನಾಯಕ್,ಜಿಲ್ಲಾ ಸಹ ವಕ್ತಾರ ಪ್ರತಾಪ್ ಶೆಟ್ಟಿ, ಬಡಗಬೆಟ್ಟು ಮಹಾಶಕ್ತಿ ಕೇಂದ್ರ ಅಧ್ಯಕ್ಷರು ಸಂದೀಪ್ ಶೆಟ್ಟಿ,ಪಂಚಾಯತ್ ಅಧ್ಯಕ್ಷರು ಪುರಂದರ ಕೋಟ್ಯಾನ್, ಪಂಚಾಯತ್ ಉಪಾಧ್ಯಕ್ಷರು ಹೇಮಲತಾ ಶೆಟ್ಟಿ,ಬಿಜೆಪಿ ಪ್ರಮುಖರು ಸಂತೋಷ್ ಬೊಲ್ಜೆ, ಪ್ರಸಾದ್ ಹೆಗ್ಡೆ, ಶಂಕರ್ ಸಾಲ್ಯಾನ್, ಶಿಲ್ಪಾ ಸಾಲ್ಯಾನ್, ಕೃಷ್ಣ ನಾಯಕ್, ನವೀನ್ ಕುಲಾಲ್, ಸುನಿತಾ ನಾಯಕ್ ,ಪ್ರವೀಣ್ ಪೂಜಾರಿ,ಹಿರೇಬೆಟ್ಟು,ಹಿರಿಯಡ್ಕ ಪಂಚಾಯತ್ ಸದಸ್ಯರು ಹರೀಶ್ ಸಾಲ್ಯಾನ್ ಹಾಗೂ ಪಕ್ಷದ ಕಾರ್ಯಕರ್ತರು ಬಿಜೆಪಿ ಪ್ರಮುಖರು ಉಪಸ್ಥಿತರಿದ್ದರು.