ಪ್ರಮೋದ್ ಮಧ್ವರಾಜ್ ಯಾವ ಸೀಮೆ ಪ್ರಬಲ ನಾಯಕ? ಭ್ರಮೆಯಿಂದ ಹೊರಬನ್ನಿ: , ಕಾಂಗ್ರೆಸ್ ಮುಖಂಡ ಕೀರ್ತಿ ಶೆಟ್ಟಿ ಅಂಬಲಪಾಡಿ
ಉಡುಪಿ: ಉಡುಪಿವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ದುರ್ಬಲ ಅಭ್ಯರ್ಥಿ ಎಂದು ಬಣ್ಣಿಸುತ್ತಾ ತಾನು ಹಿಂದೆ ಕಾಂಗ್ರೆಸ್ ನಲ್ಲಿ ಪ್ರಬಲ ಅಭ್ಯರ್ಥಿ ಆಗಿದ್ದೆ ಎಂಬ ಹೇಳಿಕೆ ನೀಡಿದ ಬಿಜೆಪಿ ಮುಖಂಡ ಪ್ರಮೋದ್ ಯಾವ ಭ್ರಮೆ ಅಲ್ಲಿ ಬದುಕುತ್ತಾ ಇದ್ದಾರೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಕೀರ್ತಿ ಶೆಟ್ಟಿ ಅಂಬಲಪಾಡಿ ಪ್ರಶ್ನಿಸಿದ್ದಾರೆ.
ತನ್ನನ್ನು ತಾನು ಪ್ರಬಲ ಎಂದು ಹೇಳಿಕೊಳ್ಳುವ ವ್ಯಕ್ತಿ ತಾನು ಮಂತ್ರಿ ಆಗಿದ್ದಾಗ ಹೀನಾಯವಾಗಿ ಸೋತದ್ದು ಮರೆತು ಹೋಯಿತೇ , ಕಾರ್ಯ ನಿರ್ವಹಣೆಯಲ್ಲಿ ಕರ್ನಾಟಕದಲ್ಲೇ ನಂಬರ್ ಒಂದನೇ ಸ್ಥಾನದಲ್ಲಿದ್ದೆ ಎಂದು ಹೇಳಿಕೊಂಡು ತಿರುಗಾಡುತ್ತಾ ಇದ್ದ ಈ ಪ್ರಮೋದ್ ನಿಜವಾಗಿಯೂ ಪ್ರಬಲ ಆಗಿದ್ದರೆ ಸೋಲುತ್ತಿದ್ದರಾ ? ತನಗೆ ಇಷ್ಟೆಲ್ಲಾ ಸ್ಥಾನ ಮಾನವನ್ನು ನೀಡಿಬೆಳೆಸಿದ ಕಾಂಗ್ರೆಸ್ ಅನ್ನು ತಾನು ಬಿಟ್ಟು ಹೋಗುವಾಗ ಕನಿಷ್ಠ ಒಬ್ಬ ಕಾಂಗ್ರೆಸ್ ಕಾರ್ಯಕರ್ತರೂ ಇವರ ಹಿಂದೆ ಹೋಗಿಲ್ಲ, ಇವರು ಯಾವ ಸೀಮೆ ಪ್ರಬಲ ಎಂದೂ ಕೀರ್ತಿ ಶೆಟ್ಟಿಯವರು ಪ್ರಶ್ನಿಸಿದ್ದಾರೆ.
ಬಿಜೆಪಿಯಲ್ಲ ತನ್ನ ಅಸ್ತಿತ್ವವನ್ನು ತೋರಿಸಲು ಹೆಣಗಾಡುತ್ತಾ ಇರುವ ಈ ಪ್ರಮೋದ್ ಕಾಂಗ್ರೆಸ್ ವಿರುದ್ಧ ಏನಾದರೂ ಒಂದು ಟೀಕೆ ಮಾಡಬೇಕೆಂಬ ಉದ್ದೇಶಕ್ಕೆ ಏನೇನೋ ವಾಸ್ತವದಿಂದ ದೂರ ಇರುವ ಸಂಗತಿ ಮಾತಾಡುತ್ತಾ ಇದ್ದಾರೆ, ಈ ಬಾರಿಯ ಚುನಾವಣಾ ಫಲಿತಾಂಶ ಪ್ರಮೋದರ ಭ್ರಮೆಯನ್ನು ಕಳಚಿ ಬಿಸಾಡುತ್ತದೆ ,ವಾಸ್ತವದಲ್ಲಿ ಬಿಜೆಪಿ ಮುಂದಿನ ದಿನಗಳಲ್ಲಿಯೂ ಅವರನ್ನು ಮೂಲೆಗುಂಪು ಮಾಡುವುದು ಖಂಡಿತ ಎಂಬುದು ಬಿಜೆಪಿಯ ಈ ಹಿಂದಿನ ಅನೇಕ ನಡವಳಿಕೆ ನೋಡಿದರೆ ಗೊತ್ತಾಗುತ್ತದೆ ಎಂದು ಕೀರ್ತಿ ಶೆಟ್ಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.