ಬಿಜೆಪಿ ಆಡಳಿತದಲ್ಲಿ ಮೀನುಗಾರರಿಗೆ ಯಾವುದೇ ರೀತಿಯ ಕೆಲಸ ಆಗಿಲ್ಲ: ಪ್ರಸಾದ್ ರಾಜ್ ಕಾಂಚನ್ ಮತ ಯಾಚನೆ ವೇಳೆ ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದ ಮೀನುಗಾರ ಮಹಿಳೆ
ಮಲ್ಪೆ: ಬಿಜೆಪಿ ಸರಕಾರ ಬಂದ ಮೇಲೆ ಮೀನುಗಾರರಿಗೆ ಏನು ನೀಡಿದೆ...? ಕಷ್ಟದಲ್ಲಿರುವ ಮೀನುಗಾರರಿಗೆ ಭರವಸೆ ನೀಡಿ, ಮೋಸವನ್ನಷ್ಟೇ ಮಾಡಿದ್ದು ಎಂದು ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಮತ ಯಾಚನೆಯ ವೇಳೆ ಅವರೇ ಮುಂದೆಯೇ ಮೀನುಗಾರ ಮಹಿಳೆಯರು ಬಿಜೆಪಿ ಸರಕಾರದ ವಿರುದ್ಧ ಹಿಡಿಶಾಪವನ್ನೇ ಹಾಕಿದ್ದಾರೆ.
ಬಿಜೆಪಿಯವರು ಈ ವರೆಗೆ ನಮಗಾಗಿ ಒಂದು ರೂ.ಖರ್ಚು ಮಾಡಿಲ್ಲ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಸೊಸೈಟಿಯಿಂದ ಅಕ್ಕಿ, ಬೇಳೆ ಸೇರಿದಂತೆ ಎಲ್ಲವೂ ಸಿಗುತ್ತಿತ್ತು. ಆದರೆ ಬಿಜೆಪಿ ಬಂದ ಮೇಲೆ ಬರಿಯ ಅಕ್ಕಿ, ಅದು ಕೂಡ ಎಷ್ಟು ಸಿಗುತ್ತಿದೆ ಎಂಬುದು ನಿಮಗೆಲ್ಲ ಗೊತ್ತಿದೆ ಎಂದು ಮೀನುಗಾರ ಮಹಿಳೆಯರು ದೂರಿದರು.
ಅಕ್ಕಿಗೆ, ಉಪ್ಪಿಗೆ, ಗ್ಯಾಸ್ ಸೇರಿದಂತೆ ದಿನ ಬಳಕೆಯ ವಿಸತುಗಳ ಬೇಳೆ ಗಗನಕ್ಕೇರಿದೆ. ನಮ್ಮಂಥ ಬಡವರು ಬಿಜೆಪಿ ಸರಕಾರದಿಂದ ಕಂಗೆಟ್ಟು ಹೋಗಿದ್ದೇವೆ. ಇನ್ನಾದರೂ ಒಳ್ಳೆಯ ಸರಕಾರ ಆಡಳಿತಕ್ಕೆ ಬರಲಿ, ನಮ್ಮ ಕಷ್ಟಕ್ಕೆ ಧ್ವನಿಯಾಗಲಿ ಎಂದು ಪ್ರಸಾದ್ ರಾಜ್ ಕಾಂಚನ್ ಮುಂದೆ ತಮ್ಮ ಅಳಲು ತೋಡಿಕೊಂಡರು.