
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷತೆಗೆ ಸಾಹಿತಿ ಡಿ.ಐ.ಅಬೂಬಕರ್ ಕೈರಂಗಳ ಅವರನ್ನು ಪರಿಗಣಿಸಬೇಕು !
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಹಿರಿಯ ಸಾಹಿತಿ, ಸಾಧಕ ಡಿ.ಐ.ಅಬೂಬಕರ್ ಕೈರಂಗಳ ಅವರನ್ನು ಆಯ್ಕೆ ಮಾಡುವುದು ಅತ್ಯಂತ ಸೂಕ್ತವಾಗಿದೆ.
ಕಳೆದ ಹಲವಾರು ವರ್ಷಗಳಿಂದ ಸಾಹಿತ್ಯ ಕ್ಷೇತ್ರದಲ್ಲಿರುವ ವರ್ಣರಂಜಿತ ವ್ಯಕ್ತಿತ್ವದ ಡಿ.ಐ.ಅಬೂಬಕರ್ ಕೈರಂಗಳ ಅವರು ವಿಭಿನ್ನ ರೀತಿಯ ಚಿಂತನೆಯುಳ್ಳ ಒಬ್ಬ ಚಿಂತಕ ಕೂಡ ಹೌದು!
ಇವರು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದರೆ ಹಿರಿಯ ಬ್ಯಾರಿ ಸಾಹಿತಿಗೆ ಗೌರವ ನೀಡಿದಂತಾಗುತ್ತದೆ ಮತ್ತು ಬ್ಯಾರಿ ಭಾಷೆಯ ಬೆಳವಣಿಗೆಗೆ ಅವರ ಅಪೂರ್ವ ಚಿಂತನೆಯನ್ನು ಬಳಸಿದಂತಾಗುತ್ತದೆ.
ಮಂಗಳೂರು ಶಾಸಕ, ವಿಧಾನ ಸಭಾಧ್ಯಕ್ಷ ಯು.ಟಿ.ಅಬ್ದುಲ್ ಖಾದರ್ ಅವರೊಂದಿಗೆ ನಿಕಟ ಸಂಪರ್ಕವಿಟ್ಟಿರುವ ಡಿ.ಐ.ಅಬೂಬಕರ್ ಕೈರಂಗಳ ಅವರಿಗೆ ರಾಜ್ಯದ ಬಹುತೇಕ ಸಾಹಿತಿಗಳು, ರಾಜಕೀಯ ನಾಯಕರು ಪರಿಚಿತರಾಗಿದ್ದಾರೆ.
ಬ್ಯಾರಿ ಸಾಹಿತ್ಯಕ್ಕೆ ಉತ್ತೇಜನ ಮತ್ತು ಬ್ಯಾರಿ ಸಾಹಿತಿಗಳು, ಬರಹಗಾರರು, ಸಾಹಿತ್ಯಾಸಕ್ತರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸಾಹಿತಿ ಡಿ.ಐ.ಅಬೂಬಕರ್ ಕೈರಂಗಳ ಅವರಿಗೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಹುದ್ದೆ ನೀಡಬೇಕೆಂಬುದು ನಮ್ಮೆಲ್ಲರ ಆಗ್ರಹವೂ ಆಗಿದೆ.
ಕೆ.ಎ.ಅಬ್ದುಲ್ ಅಝೀಝ್ ಪುಣಚ(ಹವ್ಯಾಸಿ ಪತ್ರಕರ್ತ)