'ಮೈಸೂರು ಹುಲಿ' ಟಿಪ್ಪು ಸುಲ್ತಾನ್‌ ಖಡ್ಗ 145 ಕೋಟಿ. ರೂ.ಗೆ ಹರಾಜು

'ಮೈಸೂರು ಹುಲಿ' ಟಿಪ್ಪು ಸುಲ್ತಾನ್‌ ಖಡ್ಗ 145 ಕೋಟಿ. ರೂ.ಗೆ ಹರಾಜು

ಲಂಡನ್‌: ಭಾರತದಿಂದ ಪಲಾಯನಗೊಂಡಿರುವ ಸುಸ್ತಿದಾರ, ಮದ್ಯದ ದೊರೆ ವಿಜಯ್‌ ಮಲ್ಯ ಬಳಿಯಿದ್ದ 'ಮೈಸೂರು ಹುಲಿ' ಟಿಪ್ಪು ಸುಲ್ತಾನ್‌ ಖಡ್ಗ 145 ಕೋಟಿ. ರೂ.ಗೆ ಮತ್ತೊಮ್ಮೆ ಹರಾಜಾಗಿದೆ.

ವಿಜಯ್‌ ಮಲ್ಯ ಬಳಿ ಇದ್ದ ಟಿಪ್ಪು ಖಡ್ಗವನ್ನು ಮಂಗಳವಾರ ಲಂಡನ್‌ನಲ್ಲಿಹರಾಜು ಮಾಡಲಾಗಿದ್ದು, ಅನಾಮಧೇಯ ವ್ಯಕ್ತಿಯ ಪರವಾಗಿ ಬೋನ್‌ಹ್ಯಾಮ್‌ ಹರಾಜು ಸಂಸ್ಥೆ 145 ಕೋಟಿ ರೂ.ಗೆ ಖರೀದಿಸಿದೆ.

ಬ್ರಿಟಿಷರ ರಾಜಮನೆತನದ ವಸ್ತು ಸಂಗ್ರಹಾಲಯದಲ್ಲಿದ್ದ ಟಿಪ್ಪು ಖಡ್ಗವನ್ನು 2004 ರಲ್ಲಿ ವಿಜಯ್‌ ಮಲ್ಯ 1.57 ಕೋಟಿ ರೂ.ಗೆ ಹರಾಜಿನಲ್ಲಿ ಖರೀದಿ ಮಾಡಿದ್ದರು. ಅದೇ ಖಡ್ಗ ಇಂದು 145 ಕೋಟಿ ರೂ.ಗೆ ಮಾರಾಟವಾಗಿದೆ.

ಜನತಾ ಪಕ್ಷ ಕಟ್ಟಿಕೊಂಡು 2004ರಲ್ಲಿಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿಸ್ಪರ್ಧೆಗೆ ಇಳಿದಿದ್ದ ಮಲ್ಯ ಪ್ರಚಾರದ ತಂತ್ರವಾಗಿ ಖಡ್ಗವನ್ನು ಬಳಸಿಕೊಂಡಿದ್ದರು. ಅವರ ಪ್ರಯತ್ನ ಕೈಗೂಡದೇ ಅವರ ಸಮೇತ ಜನತಾ ಪಕ್ಷದ ಎಲ್ಲಾಅಭ್ಯರ್ಥಿಗಳು ಸೋಲು ಅನುಭವಿಸಿದ್ದರು.

2016ರಲ್ಲಿಲಂಡನ್‌ ಹೈಕೋರ್ಟ್‌ ಮೆಟ್ಟಿಲೇರಿದ್ದ ಭಾರತೀಯ ಬ್ಯಾಂಕ್‌ಗಳ ಒಕ್ಕೂಟವು ಮಲ್ಯ ಅವರ ಯಾವುದೇ ಚರ, ಸ್ಥಿರ ಆಸ್ತಿ ಮಾರಾಟ ಮಾಡದಂತೆ ನಿರ್ಬಂಧ ವಿಧಿಸಲು ಕೋರಿದ್ದವು. ಈ ವೇಳೆ ಉತ್ತರ ನೀಡಿದ್ದ ಮಲ್ಯ ನಮ್ಮ ಕುಟುಂಬಕ್ಕೆ ದುರಾದೃಷ್ಟವಾಗಿ ಕಾಡಿದ್ದ ಖಡ್ಗವನ್ನು ಮಾರಾಟ ಮಾಡಿರುವುದಾಗಿ ಹೇಳಿಕೆ ನೀಡಿದ್ದರು.

ಖಡ್ಗ ಖರೀದಿದಾರರ ಮಾಹಿತಿ ಹಂಚಿಕೊಳ್ಳಲು ಬೋನ್‌ಹ್ಯಾಮ್‌ ನಿರಾಕರಿಸಿದೆ. ಗೌಪ್ಯತೆ ಹಾಗೂ ಸುರಕ್ಷತೆ ದೃಷ್ಟಿಯಿಂದ ಖಡ್ಗ ಮಾರಿದವರು, ತೆಗೆದುಕೊಂಡವರ ಹೆಸರನ್ನು ಪ್ರಕಟಿಸಲು ಸಾಧ್ಯವಿಲ್ಲಎಂದು ಹರಾಜು ನಡೆಸುವ ಬೋನ್‌ಹ್ಯಾಮ್‌ ಹೌಸ್‌ ಸಂಯೋಜಕ ಎನ್ರಿಕಾ ಮೆಡುಗ್ನೊ ಹೇಳಿದ್ದಾರೆ.

1799ರಲ್ಲಿನಡೆದ 4ನೇ ಆಂಗ್ಲೋ-ಮೈಸೂರು ಯುದ್ಧದಲ್ಲಿಟಿಪ್ಪು ಸುಲ್ತಾನ್‌ ಮರಣ ಹೊಂದಿದಾಗ ಅವರ ಅರಮನೆಯಲ್ಲಿಪತ್ತೆಯಾಗಿದ್ದ ಖಡ್ಗವನ್ನು ತೆಗೆದುಕೊಂಡು ಹೋಗಿದ್ದ ಬ್ರಿಟಿಷ್‌ ಸೇನೆ ಮೆಜರ್‌ ಜನರಲ್‌ ಬೇರ್ಡೆಗೆ ಅರ್ಪಿಸಿತ್ತು.

Ads on article

Advertise in articles 1

advertising articles 2

Advertise under the article