ನಾಳೆ ಸಿದ್ದರಾಮಯ್ಯ ಸರಕಾರದ ಸಂಪುಟ ವಿಸ್ತರಣೆ ಸಿದ್ಧತೆ; ಯಾರಿಗೆಲ್ಲ ಸಚಿವ ಸ್ಥಾನ ಸಿಕ್ಕಿದೆ ನೋಡಿ...

ನಾಳೆ ಸಿದ್ದರಾಮಯ್ಯ ಸರಕಾರದ ಸಂಪುಟ ವಿಸ್ತರಣೆ ಸಿದ್ಧತೆ; ಯಾರಿಗೆಲ್ಲ ಸಚಿವ ಸ್ಥಾನ ಸಿಕ್ಕಿದೆ ನೋಡಿ...

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರದ ಸಂಪುಟ ವಿಸ್ತರಣೆಗೆ ಸಿದ್ಧತೆ ನಡೆಯುತ್ತಿದ್ದು, ಶನಿವಾರ 24 ಮಂದಿ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ.

ನಾಳೆ ಬೆಳಗ್ಗೆ 11:45ಕ್ಕೆ ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದ್ದು ರಾಜ್ಯಪಾಲರ ಕಚೇರಿಯಿಂದ ಸಿಎಂ ಕಚೇರಿ ಸಮಯ ಪಡೆದಿದೆ. ಮುಂದಿನ ಎರಡೂವರೆ ವರ್ಷ ಯಾವುದೇ ತಕರಾರುಗಳಿಲ್ಲದೇ ಸರ್ಕಾರ ನಡೆಸಲು ಕಾಂಗ್ರೆಸ್‌ ಪ್ಲ್ಯಾನ್‌ ಮಾಡಿಕೊಂಡಿದೆ.

ಪ್ರಸ್ತುತ ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್‌ ಸೇರಿದಂತೆ 10 ಮಂದಿ ಸಂಪುಟದಲ್ಲಿದ್ದು 34 ಸದಸ್ಯ ಬಲದ ಸಂಪುಟದಲ್ಲಿ 24 ಸ್ಥಾನಗಳು ಖಾಲಿಯಿದೆ. ಗುರುವಾರ ಸುದೀರ್ಘ ಸಭೆ ಬಳಿಕ ಅಂತಿಮ ಪಟ್ಟಿಗೆ ಮುದ್ರೆ ಬಿದ್ದಿದೆ. ವೇಣುಗೋಪಾಲ್ ನೇತೃತ್ವದಲ್ಲಿ ಇಂದು ಸಭೆ ನಡೆಸಿ ಖಾತೆಯನ್ನು ಹಂಚಿಕೆ ಮಾಡಲಾಗುತ್ತದೆ. ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾಗಾಂಧಿ ಅವರನ್ನು ಭೇಟಿಯಾದ ಬಳಿಕ ಸಚಿವಕಾಂಕ್ಷಿಗಳಿಗೆ ಕರೆ ಹೋಗಲಿದೆ. 

ಸಂಭವನೀಯ ಸಚಿವರು:

ಈಶ್ವರ ಖಂಡ್ರೆ, ಲಕ್ಷ್ಮಿ ಹೆಬ್ಬಾಳ್ಕರ್‌, ಶಿವಾನಂದ ಪಾಟೀಲ್, ದರ್ಶನಾಪುರ, ಬಸವರಾಜ್ ರಾಯರೆಡ್ಡಿ, ಡಾ. ಮಹಾದೇವಪ್ಪ, ಪಿರಿಯಾಪಟ್ಟಣ ವೆಂಕಟೇಶ್, ಎಸ್.ಎಸ್. ಮಲ್ಲಿಕಾರ್ಜುನ, ಬೈರತಿ ಸುರೇಶ್, ಕೃಷ್ಣ ಬೈರೇಗೌಡ, ರಹೀಂ ಖಾನ್, ಅಜಯ್ ಸಿಂಗ್, ಪುಟ್ಟರಂಗ ಶೆಟ್ಟಿ, ನರೇಂದ್ರ ಸ್ವಾಮಿ, ಹಿರಿಯೂರು ಸುಧಾಕರ್, ಎಚ್.ಕೆ. ಪಾಟೀಲ್, ಚೆಲುವರಾಯಸ್ವಾಮಿ, ಸಂತೋಷ ಲಾಡ್, ಎಂ ಕೃಷ್ಣಪ್ಪ, ಮಧು ಬಂಗಾರಪ್ಪ, ಮಾಂಕಾಳ ವೈದ್ಯ, ಶಿವರಾಜ್ ತಂಗಡಗಿ, ಮಧುಗಿರಿ ರಾಜಣ್ಣ, ನಾಗೇಂದ್ರ.

Ads on article

Advertise in articles 1

advertising articles 2

Advertise under the article