ಸಮರ್ಥ ನಾಯಕನನ್ನು ಬಿಟ್ಟು ಅಸಮರ್ಥ ನಾಯಕನಿಗೆ ಮತ ಹಾಕಿ, ನಿಮ್ಮ ಮಕ್ಕಳ ಭವಿಷ್ಯವನ್ನು ಹಾಳು ಮಾಡಬೇಡಿ: ಪ್ರಸಾದ್ ರಾಜ್ ಕಾಂಚನ್

ಸಮರ್ಥ ನಾಯಕನನ್ನು ಬಿಟ್ಟು ಅಸಮರ್ಥ ನಾಯಕನಿಗೆ ಮತ ಹಾಕಿ, ನಿಮ್ಮ ಮಕ್ಕಳ ಭವಿಷ್ಯವನ್ನು ಹಾಳು ಮಾಡಬೇಡಿ: ಪ್ರಸಾದ್ ರಾಜ್ ಕಾಂಚನ್

 

ಉಡುಪಿ: ನೌಕರರಿಗೆ ಸಾಮಾಜಿಕ ನ್ಯಾಯ ದೊರಕಿಸಿಕೊಡಲು  ಕಾಂಗ್ರೆಸ್ ಪಕ್ಷ ನನಗೊಂದು ಅವಕಾಶ ಮಾಡಿಕೊಟ್ಟಿದೆ. ಕೌಶಲ್ಯ-ಪ್ರತಿಭೆ ಇರುವವರನ್ನು ಮೇಲೆತ್ತುವ ಯೋಜನೆಯನ್ನು ಹಮ್ಮಿಕೊಂಡಿದ್ದೇನೆ. ಸಮರ್ಥ ನಾಯಕನನ್ನು ಬಿಟ್ಟು ಅಸಮರ್ಥ ನಾಯಕನಿಗೆ ಮತ ಹಾಕಿದರೆ ನಮ್ಮ ಮಕ್ಕಳ ಭವಿಷ್ಯ ತೊಂದರೆಯಲ್ಲಿ ಸಿಲುಕುತ್ತದೆ ಎಂದು ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಹೇಳಿದ್ದಾರೆ. ಅವರು ಇಂದು  ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಇಂದು ಮಣಿಪಾಲದ ಉದಯವಾಣಿ ಯುನಿಟ್ 4ಗೆ ಭೇಟಿ ನೀಡಿ ಸಿಬ್ಬಂದಿ ವರ್ಗದವರಲ್ಲಿ ಮತಯಾಚಿಸಿದರು. 

ಈ ಸಂದರ್ಭದಲ್ಲಿ ಪತ್ನಿ ಸುಕನ್ಯಾ ಕಾಂಚನ್, ಭಾವ ಪ್ರದೀಪ್, ಸಂದ್ಯಾ, ಉದಯವಾಣಿ ಸಂಸ್ಥೆಯ ಗೌತಮ ಪೈ, ಪ್ರಸಾದ್, ಸಂಯೋಜಕರಾದ ಭರತ್ ಕುಮಾರ್, ನೀತಿ, ಸದಾನಂದ ಮೂಲ್ಯ, ಕೀರ್ತಿ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article