ಧರ್ಮವನ್ನಿಟ್ಟುಕೊಂಡು ರಾಜಕೀಯ ಮಾಡುವವ ನಾನಲ್ಲ, ನನಗೆ ಧರ್ಮದ ಬಗ್ಗೆ ಕಲಿಸಿಕೊಡುವ ಅಗತ್ಯವೂ ಇಲ್ಲ: ಬೃಹತ್ ಕಾಲ್ನಡಿಗೆ ಜಾಥ-ಬೃಹತ್ ಸಮಾವೇಶದಲ್ಲಿ ಉದಯ್ ಕುಮಾರ್ ಶೆಟ್ಟಿ

ಧರ್ಮವನ್ನಿಟ್ಟುಕೊಂಡು ರಾಜಕೀಯ ಮಾಡುವವ ನಾನಲ್ಲ, ನನಗೆ ಧರ್ಮದ ಬಗ್ಗೆ ಕಲಿಸಿಕೊಡುವ ಅಗತ್ಯವೂ ಇಲ್ಲ: ಬೃಹತ್ ಕಾಲ್ನಡಿಗೆ ಜಾಥ-ಬೃಹತ್ ಸಮಾವೇಶದಲ್ಲಿ ಉದಯ್ ಕುಮಾರ್ ಶೆಟ್ಟಿ

ಕಾರ್ಕಳ(Headlines Kannada): ಧರ್ಮವನ್ನಿಟ್ಟುಕೊಂಡು ರಾಜಕೀಯ ಮಾಡುವವ ನಾನಲ್ಲ. ಧರ್ಮ  ನಮ್ಮ ಹೃದಯದಲ್ಲಿ ಇರಬೇಕು. ನನಗೆ ಧರ್ಮದ ಬಗ್ಗೆ ಕಲಿಸಿಕೊಡುವ ಅಗತ್ಯ ಇಲ್ಲ ಎಂದು ಕಾರ್ಕಳ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಬಿಜೆಪಿತೇ ಠಕ್ಕರ್ ನೀಡಿದ್ದಾರೆ.

ಸೋಮವಾರ ಕಾರ್ಕಳ ಕಾಂಗ್ರೆಸ್ ವಿಧಾನ ಸಭಾ ಕ್ಷೇತ್ರದ ಕಾಲ್ನಡಿಗೆ ಜಾಥ ಹಾಗೂ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಿಂದೂ ಧರ್ಮದ ಬಗ್ಗೆ ನನಗೆ ಕಲಿಸಿಕೊಡುವ ಅಗತ್ಯವಿಲ್ಲ. ನಾನು ಹುಟ್ಟಿನಿಂದಲೇ ಎಲ್ಲ ಧರ್ಮಗಳನ್ನು ಪ್ರೀತಿಸುತ್ತ ಬಂದವನು ಎಂದರು.

ಸುವರ್ಣ ಕಾರ್ಕಳ, ಸುಂದರ ಕಾರ್ಕಳ ಬರೇ ಪತ್ರಿಕೆಯಲ್ಲಿ ಇದ್ದರೆ ಸಾಕಾಗಲ್ಲ ಅದು ನಿಜಾರ್ಥದಲ್ಲಿ ಆಗಬೇಕು. ಸುಂದರ ಕಾರ್ಕಳ ಅಂದ್ರೆ ಬರೇ ರಸ್ತೆ, ಸೇತುವೆ ಅಲ್ಲ. ಸರಕಾರಿ ಆಸ್ಪತ್ರೆ ಕಟ್ಟಡ ಇದ್ರೆ ಸಾಕಾಗಲ್ಲ, ಅಲ್ಲಿ ಎಷ್ಟು ವೈದ್ಯರು, ನರ್ಸ್ ಗಳು ಇದ್ದಾರೆ ಎಂದು ಪರಿಶೀಲಿಸಿ ನೋಡ ಬೇಕು. ಶಾಸಕರಾದವರು 95 ಶೇ. ದಷ್ಟಿರುವ ಬಡವರ ಜೊತೆಗೆ ಇರಬೇಕು. ಅವರ ಕಷ್ಟ ಅರಿತಿರಬೇಕು ಎಂದರು. ಹಾಗೂ ಕಾರ್ಕಳದಲ್ಲಿ ಅಲ್ಲಲ್ಲಿ ಕೈಗಾರಿಕಾ ವಸಾಹತು ಮಾಡಿ ಕನಿಷ್ಟ ಹತ್ತು ಸಾವಿರ ಉದ್ಯೋಗ ಸೃಷ್ಟಿ ಹಾಗೂ ಸರಕಾರಿ ಸ್ಪೋರ್ಟ್ಸ್  ಹಾಸ್ಟೆಲ್ ಆಗಬೇಕು ಎಂಬುದು ನನ್ನ ಕನಸು ಎಂದರು.

ಅತಿಥಿಯಾಗಿ ಭಾಗವಹಿಸಿದ ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ  ಮಾತನಾಡಿ, ಕಾಂಗ್ರೇಸ್ ಪಕ್ಷವೇ ಈ ಬಾರಿ ರಾಜ್ಯದಲ್ಲಿ ಹಾಗು ಕಾರ್ಕಳದಲ್ಲಿ ಅಧಿಕಾರಕ್ಕೆ ಬರುತ್ತದೆ ಇದು ನನ್ನ ಶಪಥ. ನ್ಯಾಯ ಸತ್ಯ ಕ್ಕೋಸ್ಕರ ಕಾಂಗ್ರೇಸ್ ಪಕ್ಷ ಹೋರಾಡಿದೆ. ಉಳುವವನೆ ಭೂಮಿಯೊಡೆಯ ಕಾನೂನು ಜಾರಿಗೊಳಿಸುವ  ಮೂಲಕ ಬಡವರಿಗೆ  ಜಾಗ ಒದಗಿಸಿ ಮನೆಯನ್ನು ಒದಗಿಸಿದೆ. ಆಸ್ಪತ್ರೆ , ರಸ್ತೆ ಶಾಲೆಗಳು ಮೂಲಸೌಕರ್ಯ ಗಳನ್ನು ಒದಗಿಸುವ ಮೂಲಕ ಕಾಂಗ್ರೆಸ್  ಜನರ ಪಾಲಿಗೆ ವರವಾಗಿತ್ತು ಎಂದರು.

ವಿಧಾನ ಪರಿಷತ್ ಸದಸ್ಯ  ಮಂಜುನಾಥ ಭಂಡಾರಿ, ಕೆಪಿಸಿಸಿ  ಪ್ರಧಾನ ಕಾರ್ಯದರ್ಶಿ ಪದ್ಮರಾಜ್  ರಾಮಯ್ಯ, ವಾಗ್ಮಿ ಸುಧೀರ್ ಕುಮಾರ್ ಮರೋಳಿ , ಸಂಜೀವ ಮಡಿವಾಳ, ಕುಡುಪುಲಾಜೆ ಗಿರೀಶ್ ಶೆಟ್ಟಿ, ಜಿ. ಎ ಬಾವ ,  ಹರ್ಷಾ ಮೊಯ್ಲಿ , ಸುಭಿತ್ ಎನ್ ಆರ್ , ಎಂಜಿ ಹೆಗಡೆ , ಎಂ ಎ ಗಫೂರ್ , ನೀರೆ ಕೃಷ್ಣ ಶೆಟ್ಟಿ , ಮುದ್ರಾಡಿ ಮಂಜುನಾಥ್ ಪೂಜಾರಿ ,ರಾಕೇಶ್ ಶೆಟ್ಟಿ , ಬೆಳಪು ದೇವಿಪ್ರಸಾದ್ ಶೆಟ್ಟಿ, ನವೀನ ಅಡ್ಯಾಂತಾಯ , ಸುರೇಂದ್ರ ಶೆಟ್ಟಿ , ಬ ದೀಪಕ್ ಕೋಟ್ಯಾನ್ , ಅನಿತಾ ಡಿಸೋಜ ,ಪ್ರೇಮ ಕುಮಾರ್ ಹೊಸ್ಮಾರ್  , ವಿಶ್ವಾಸ್ ಅಮೀನ್ ,ನವೀನ್ ದೇವಾಡಿಗ ರಜನಿ ಹೆಬ್ಬಾರ್ ,ಚಂದ್ರಶೇಖರ್ ಬಾಯರಿ , ಅಣ್ಣಪ್ಪ ನಕ್ರೆ, ಶುಭಧರಾವ್, ಉಪಸ್ಥಿತರಿದ್ದರು. 

Ads on article

Advertise in articles 1

advertising articles 2

Advertise under the article