ಕರಾವಳಿಯ ಪ್ರವಾಸೋದ್ಯಮವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊಂಡೊಯ್ಯಲು ನನಗೊಂದು ಅವಕಾಶ ಕೊಡಿ: ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್
Tuesday, May 2, 2023
ಉಡುಪಿ: ಕರಾವಳಿಗರ ಮುಂದಿನ ಜೀವನವನ್ನು ಉತ್ತಮವಾಗಿಸಲು ಇಲ್ಲಿರುವ ಪ್ರವಾಸೋದ್ಯಮವನ್ನು ಬಳಸಿಕೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬಹುದಾಗಿದೆ. ಇದರಿಂದ ಇಲ್ಲಿನ ಯುವಕರು ಮೇಲೆ ಬರಲು ಒಂದು ವೇದಿಕೆ ಒದಗಿಸಿದಂತಾಗುತ್ತದೆ. ಇದಕ್ಕೆಲ್ಲ ಒಂದು ನಾಯಕತ್ವದ ಅಗತ್ಯತೆಯಿದ್ದು, ಈ ನಿಟ್ಟಿನಲ್ಲಿ ಕಾಂಗ್ರೆಸ್ ನನ್ನನ್ನು ಚುನಾವಣೆಗೆ ನಿಲ್ಲಿಸಿದ್ದು, ನನಗೆ ನಿಮ್ಮ ಸಹಕಾರದ ಅಗತ್ಯವಿದೆ ಎಂದು ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಹೇಳಿದ್ದಾರೆ.
ಅವರು ಸೋಮವಾರ ಮಲ್ಪೆಯ ಶನೀಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಮತಯಾಚನೆಯ ಹಿನ್ನೆಲೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು.
ಕರಾವಳಿ ಭಾಗದಲ್ಲಿ ಅಭಿವೃದ್ಧಿಯಾದರೆ ಇಲ್ಲಿನ ಯುವಕ-ಯುವತಿಯರಿಗೆ ಮೇಲೆ ಬರಲು ಹಲವಾರು ಅವಕಾಶಗಳು ತೆರೆದುಕೊಳ್ಳುತ್ತೆ. ಈ ನಿಟ್ಟಿನಲ್ಲಿ ಈ ಬಾರಿಯ ಚುನಾವಣೆಯಲ್ಲಿ ನನಗೆ ಮತ ನೀಡುವ ಮೂಲಕ ಜನರ ಸೇವೆಗೆ ಅವಕಾಶ ಮಾಡಿಕೊಡುವಂತೆ ಮತದಾರರಲ್ಲಿ ಮನವಿ ಮಾಡಿದರು.