ಪ್ರಶಸ್ತಿಗಳು ಹುಡುಕಿಬರುತ್ತಿರುವ ಡಾ.ಯು.ಕೆ.ಮೋನು ಹಾಜಿಯವರಿಗೆ ಅಭಿನಂದನೆಗಳು...

ಪ್ರಶಸ್ತಿಗಳು ಹುಡುಕಿಬರುತ್ತಿರುವ ಡಾ.ಯು.ಕೆ.ಮೋನು ಹಾಜಿಯವರಿಗೆ ಅಭಿನಂದನೆಗಳು...

ನನ್ನ ಸನ್ಮಿತ್ರ ಡಾ. ಮೋನು ಹಾಜಿಯವರು! ಹೌದು ಹೆಮ್ಮೆಯಿಂದಲೇ ಈ ಮಾತು ಹೇಳುತ್ತಿದ್ದೇನೆ. ಹಣವಂತರನ್ನೆಲ್ಲ ಮಿತ್ರ ಎಂದು ಹೇಳುವ ಸ್ವಭಾವ ನನ್ನದಾಗಿದ್ದರೆ ಮಂಗಳೂರಲ್ಲಿ ಹಣವಂತರು ಧಾರಾಳ ಇದ್ದಾರಲ್ಲ? ಅವರನ್ನೂ ಹೇಳಬೇಕಾಗಿತ್ತಲ್ಲ? 

ಡಾ. ಮೋನು ಹಾಜಿಯವರನ್ನು ನಾನು ಮನಸಾರೆ ಇಷ್ಟಪಡುವುದು ಅವರ ಹಣವಂತಿಕೆಗಲ್ಲ, ಗುಣವಂತಿಕೆಗೆ.  ಆರ್ಥಿಕತೆ, ಉದ್ಯಮವಿಸ್ತಾರ, ಜನಪ್ರಿಯತೆ, ಕೀರ್ತಿ, ವಯಸ್ಸು ಮುಂತಾದ ಹಲವು ವಿಷಯಗಳಲ್ಲಿ ನನಗಿಂತ ಎಷ್ಟೋ ಎತ್ತರದಲ್ಲಿದ್ದರೂ ಆ ಎತ್ತರದ ತಲೆಭಾರ ಇಟ್ಟುಕೊಳ್ಳದೆ ಆತ್ಮೀಯ ಮಿತ್ರನಂತೆ ನನ್ನೊಡನೆ ಒಡನಾಡುವ ಆ ಒಡನಾಟವೇ ನನಗೆ ಅವರಲ್ಲಿರುವ ಅಭಿಮಾನದ ಸೆಲೆ. 

ನಮ್ಮಿಬ್ಬರದು ಹಲವು ಕಾಲದ ಆತ್ಮಿಕ ನಂಟು. ನಿಷ್ಕಳಂಕ ಗೆಳೆತನ. ಹಾಗಾಗಿ ಅವರಿಗೆ ಪುರಸ್ಕಾರ ದೊರೆತಾಗೆಲ್ಲ ನನಗೇ ದೊರೆತಷ್ಟು ಸಂತಸ. ಇತ್ತೀಚೆಗೆ ಮಂಗಳೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪದವಿ ಬಂದ ನಂತರ ಇದೀಗ ಇನ್ನೊಂದು ಮಹತ್ವದ ಪ್ರಶಸ್ತಿ ಅವರನ್ನು ಹುಡುಕಿಕೊಂಡು ಬಂದಿದೆ. ಅವರ ಲಕ್ಷಾಂತರ ಅಭಿಮಾನಿಗಳನ್ನು ಸಂತಸದ ಕಡಲಲ್ಲಿ ತೇಲಿಸಿದೆ.

2023 ರ ಸಾಲಿನ ಮದರ್ ತೆರೇಸಾ ಮೆಮೋರಿಯಲ್ ನ್ಯಾಶನಲ್ ಅವಾರ್ಡ್ ಗೆ ಇದೀಗ ಡಾ. ಯು.ಕೆ. ಮೋನು ಹಾಜಿಯವರು ಆಯ್ಕೆಯಾಗಿದ್ದು ಜೂನ್ 6 ರಂದು ಬೆಂಗಳೂರು ರವೀಂದ್ರ ಕಲಾ ಮಂದಿರದಲ್ಲಿ ಹಲವಾರು ಗಣ್ಯರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. 

ಡಾ. ಯು. ಕೆ. ಮೋನು ಹಾಜಿಯವರಿಗೆ ಯಾವುದೇ ಪ್ರಶಸ್ತಿ ಬಂದರೂ ಅದು ಅವರ ಸಾಮಾಜಿಕ, ಶೈಕ್ಷಣಿಕ ಸೇವೆಗೆ ಸಲ್ಲುವ ಅರ್ಹ ಪುರಸ್ಕಾರವಾಗಿದೆ. ಪ್ರಶಸ್ತಿಗಳು ಇನ್ನೂ ಬರುತ್ತಾ ಇರಲಿ, ಅವರ ಪ್ರಸಕ್ತಿ ಇನ್ನೂ ಎತ್ತರದಿಂತೆತ್ತರಕ್ಕೆ ಏರುತ್ತಾ ಇರಲಿ ಎಂಬುದು ನನ್ನ ಹಾರೈಕೆ, ಪ್ರಾರ್ಥನೆ.

  

- ಡಿ‌. ಐ. ಅಬೂಬಕರ್ ಕೈರಂಗಳ 

Ads on article

Advertise in articles 1

advertising articles 2

Advertise under the article