ಉಡುಪಿಯ LIC ಮತ್ತು ವಿವಿಧ ಬ್ಯಾಂಕುಗಳಿಗೆ ತೆರಳಿ ಮಾಜಿ CM ವೀರಪ್ಪ ಮೊಯ್ಲಿ ಸಾರಥ್ಯದಲ್ಲಿ ಮತಯಾಚನೆ ನಡೆಸಿದ ಪ್ರಸಾದ್ ರಾಜ್ ಕಾಂಚನ್
Wednesday, May 3, 2023
ಉಡುಪಿ: ಉಡುಪಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಅವರು ಇಂದು ಉಡುಪಿಯ LIC ಮತ್ತು ವಿವಿಧ ಬ್ಯಾಂಕುಗಳಿಗೆ ಹೋಗಿ ಮತಯಾಚನೆ ಮಾಡಿದರು.
ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಸನ್ಮಾನ್ಯ ವೀರಪ್ಪ ಮೊಯ್ಲಿಯವರು ಮತಯಾಚನೆಯಲ್ಲಿ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ರವರಿಗೆ ಜೊತೆಯಾದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ ಗಪೂರ್, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಮೊದಲಾದವರು ಉಪಸ್ಥಿತರಿದ್ದರು.