ಕರ್ನಾಟಕದಲ್ಲಿ ಬಿಜೆಪಿ ಪ್ರಚಂಡ ಗೆಲುವು ಸಾಧಿಸಲಿದೆ: ಪ್ರಮೋದ್ ಮದ್ವರಾಜ್
ಬೈಂದೂರು: ಪರಿವರ್ತನೆ ಜಗದ ನಿಯಮ, ಸಂಘಟನಾತ್ಮಕ ಹೋರಾಟ ಬಿಜೆಪಿ ಪಕ್ಷದ ಸಾಧನೆಯಾಗಿದೆ. ಉಡುಪಿ ಜಿಲ್ಲೆಯಲ್ಲಿ ನಾಲ್ಕು ಹೊಸ ಅಭ್ಯರ್ಥಿಗಳನ್ನು ಬಿಜೆಪಿ ಪಕ್ಷ ಕಣಕ್ಕಿಳಿಸಿದೆ. ಹೊಸ ಪ್ರಯೋಗದಲ್ಲಿ ಯಸಸ್ಸು ಸಾಧಿಸುತ್ತದೆ. ಕರ್ನಾಟಕದಲ್ಲಿ ಬಿಜೆಪಿ ಪ್ರಚಂಡ ಗೆಲುವು ಸಾಧಿಸುತ್ತದೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಪ್ರಮೋದ್ ಮದ್ವರಾಜ್ ಹೇಳಿದ್ದಾರೆ.
ಅವರು ಬೈಂದೂರು ಬಿಜೆಪಿ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಈ ಮಾತನಾಡಿ, ಮರವಂತೆ ಬಂದರು ಡಿಸೈನ್ ಸರಿಇಲ್ಲದ ಕಾರಣ ಅಪೂರ್ಣಗೊಂಡಿದೆ. ಮೀನುಗಾರರಿಗೆ ಬಿಜೆಪಿ ಪಕ್ಷ ಅನೇಕ ಸವಲತ್ತುಗಳನ್ನು ನೀಡಿದೆ ಎಂದರು.
ಸುಕುಮಾರ ಶೆಟ್ಟಿ ಯವರು ಪ್ರಚಾರಕ್ಕೆ ಬಾರದಿರುವ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಗುರುರಾಜ ಗಂಟಿಹೊಳೆ ಪರ ಅಭಿಮಾನ ಇದೆ ಹಾಗೂ ಪ್ರಚಾರದಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು,ಶೋಭಾ ಪುತ್ರನ್,ಶಿರೂರು ಶಕ್ತಿ ಕೇಂದ್ರದ ಅಧ್ಯಕ್ಷ ಜಗ್ನನಾಥ ಮೊಗವೀರ,ತಾ.ಪಂ ಮಾಜಿ ಉಪಾಧ್ಯಕ್ಷೆ ಮಾಲಿನಿ .ಕೆ,ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಶರತ್ ಕುಮಾರ್ ಶೆಟ್ಟಿ ಉಪ್ಪುಂದ,ಗೋಪಾಲ ಕಾಂಚನ್,ಅನಿತಾ ಆರ್.ಕೆ,ತಾ.ಪಂ ಮಾಜಿ ಸದಸ್ಯೆ ಶ್ಯಾಮಲ ಕುಂದರ್,ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಆನಂದ ಖಾರ್ವಿ,ಭಾಗೀರಥಿ ಸುರೇಶ್,ಬೈಂದೂರು ಮಾಧ್ಯಮ ಸಂಚಾಲಕ ಗಣೇಶ ಗಾಣಿಗ ಉಪ್ಪುಂದ ಉಪಸ್ಥಿತರಿದ್ದರು.