ಕಾರ್ಕಳ ಕಾಂಗ್ರೆಸ್ ಅಭ್ಯರ್ಥಿ ಉದಯ ಕುಮಾರ್ ಶೆಟ್ಟಿ ನೇತೃತ್ವದಲ್ಲಿ ನಡೆದ ಬೃಹತ್ ಕಾಲ್ನಡಿಗೆ ಜಾಥಾಕ್ಕೆ ಹರಿದುಬಂದ ಜನಸಾಗರ
ಸ್ವರಾಜ್ ಮೈದಾನದಿಂದ ಹೊರಟ ಮೆರವಣಿಗೆಯೂ ಬಂಡೀಮಠ ಬಸ್ ನಿಲ್ದಾಣ ತಲುಪಿದ್ದು, ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಳ್ಳುವ ಮೂಲಕ ಉದಯ ಕುಮಾರ್ ಶೆಟ್ಟಿಗೆ ಸಾಥ್ ನೀಡಿದರು.
ಚೆಂಡೆ, ಹುಲಿವೇಷ ಹಾಗೂ ಡಿಜೆ ಸೌಂಡ್ ಮೆರವಣಿಯಲ್ಲಿ ಕಂಡು ಬಂತು. ಪಕ್ಷದ ಹಾಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮುನಿಯಾಳ ಉದಯಕುಮಾರ್ ಶೆಟ್ಟಿ ಪರ ಘೋಷಣೆಗಳು ದಾರಿಯುದ್ದಕ್ಕೂ ಮೊಳಗಿದವು. ಪಕ್ಷದ ರಾಜ್ಯ ಮತ್ತು ರಾಷ್ಟ್ರಮಟ್ಟದ ಮುಖಂಡರ ಭಾವಚಿತ್ರಗಳು ಜಾಥದಲ್ಲಿ ರಾರಾಜಿಸುತ್ತಿದ್ದವು.
ಕಾಲ್ಮಡಿಗೆ ಅನಂತಶಯನ ದೇವಸ್ಥಾನ ತಲುಪುತ್ತಿದ್ದಂತೆ ಹಲವು ಹಿರಿಯರು ನಾಗರಿಕರು ಅಭ್ಯರ್ಥಿ ಮುನಿಯಾಲು ಉದಯಕುಮಾರ್ ಶೆಟ್ಟಿ ಅವರಿಗೆ ಆಶೀರ್ವದಿಸಿದರು. ಗ್ರಾಮೀಣ ಪ್ರದೇಶಗಳಿಂದ ಅತ್ಯಧಿಕ ಸಂಖ್ಯೆಯಲ್ಲಿ ಕಾರ್ಯಕರ್ತರು ಅಗಮಿಸಿದರು.
ಕಾಲ್ಮಡಿಗೆ ಅನಂತಶಯನ ದೇವಸ್ಥಾನ ತಲುಪುತ್ತಿದ್ದಂತೆ ಹಲವು ಹಿರಿಯರು ನಾಗರಿಕರು ಅಭ್ಯರ್ಥಿ ಮುನಿಯಾಲು ಉದಯಕುಮಾರ್ ಶೆಟ್ಟಿ ಅವರಿಗೆ ಆಶೀರ್ವದಿಸಿದರು. ಗ್ರಾಮೀಣ ಪ್ರದೇಶಗಳಿಂದ ಅತ್ಯಧಿಕ ಸಂಖ್ಯೆಯಲ್ಲಿ ಕಾರ್ಯಕರ್ತರು ಅಗಮಿಸಿದರು.
ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಜಾಥದಲ್ಲಿ ಉದಯ ಕುಮಾರ್ ಶೆಟ್ಟಿ, ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಡಿ ಆರ್ ರಾಜು, ಕೇರಳ ಸಂಸದ ಪ್ರತಾಪನ್, ಜಿಲ್ಲಾ ಯವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್, ಮಾಜಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂಎ ಗಫೂರ್, ಉದ್ಯಮಿ ಗಿರೀಶ್ ಶೆಟ್ಟಿ ಕುಡುಪುಲಾಜೆ, ಮಂಜುನಾಥ ಪೂಜಾರಿ, ಸುರೇಂದ್ರ ಶೆಟ್ಟಿ, ಪವರ್ ಟಿವಿ ಸಂಸ್ಥಾಪಕ ರಾಕೇಶ್ ಶೆಟ್ಟಿ, ಪ್ರಚಾರ ಸಮಿತಿ ಅಧ್ಯಕ್ಷ ಶುಭದ ರಾವ್, ಕಾರ್ಕಳ ಮಹಿಳಾ ಕಾಂಗ್ರೆಸ್ ಅಧ್ಯಕ್ಪೆ ಅನಿತಾ ಡಿಸೋಜ, ದೇವಿಪ್ರಸಾದ್ ಶೆಟ್ಟಿ, ಅಣ್ಣಪ್ಪ ನಕ್ರೆ, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ಬಾಯಾರಿ, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ, ಉದ್ಯಮಿ ರಹೀಂ ಎಣ್ಣೆಹೊಳೆ, ನೀರೆ ಕ್ರಷ್ಣ ಶೆಟ್ಟಿ, ಪ್ರೇಮ್ ಕುಮಾರ್ ಹೊಸ್ಮಾರ್ ಉಪಸ್ಥಿತರಿದ್ದರು.