ಉಡುಪಿ ಕ್ಷೇತ್ರಾದ್ಯಂತ ಬಿರುಸಿನ ಪ್ರಚಾರ ನಡೆಸಿದ ಆಮ್ ಆದ್ಮಿ ಪಾರ್ಟಿ; ಮತ ಯಾಚನೆ ನಡೆಸಿದ ಅಭ್ಯರ್ಥಿ ಪ್ರಭಾಕರ ಪೂಜಾರಿ
Monday, May 8, 2023
ಉಡುಪಿ: ಉಡುಪಿ ವಿಧಾನ ಸಭಾ ಕ್ಷೇತ್ರದ ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿ ಪ್ರಭಾಕರ ಪೂಜಾರಿ ಹಲವು ದಿನಗಳಿಂದ ತಮ್ಮ ಕ್ಷೇತ್ರದಲ್ಲಿ ಬಿರುಸಿನ ಮತ ಪ್ರಚಾರದಲ್ಲಿ ತೊಡಗಿದ್ದಾರೆ.
ಕ್ಷೇತ್ರದ ಬಹುತೇಕ ಕಡೆಗಳಲ್ಲಿ ಚುನಾವಣಾ ಪ್ರಚಾರ ನಡೆಸಿದ್ದು, ಮನೆ ಮನೆ ತೆರಳಿ ಮತಯಾಚಿಸಿದರು. ಇವರಿಗೆ ಕಾರ್ಯಕರ್ತರು ಸಾಥ್ ನೀಡಿದ್ದರು.
ಈ ವೇಳೆ ಆಮ್ ಆದ್ಮಿ ಪಾರ್ಟಿಯ ತತ್ವ, ಸಿದ್ಧಾಂತ, ಅಭಿವೃದ್ಧಿಯ ಕಾರ್ಯದ ಬಗ್ಗೆ ಮತದಾರರಿಗೆ ಮನವರಿಕೆ ಮಾಡಿಕೊಟ್ಟ ಪ್ರಭಾಕರ ಪೂಜಾರಿ, ಈ ಬಾರಿ ತನ್ನನ್ನು ಬೆಂಬಲಿಸಿ ಮತಹಾಕುವಂತೆ ಮನವಿ ಮಾಡಿದರು.