ದೇವರು ಧರ್ಮದ ವಿಷಯ ಬಿಜೆಪಿ ರಾಜಕೀಯ ಮಾಡುತ್ತಿದೆ: ಸೊರಕೆ ಅಕ್ರೋಶ

ದೇವರು ಧರ್ಮದ ವಿಷಯ ಬಿಜೆಪಿ ರಾಜಕೀಯ ಮಾಡುತ್ತಿದೆ: ಸೊರಕೆ ಅಕ್ರೋಶ

ಕಾಪು:  ದೇವರು ಧರ್ಮ ಅಂತಾ ಮಾತಾಡೋ ಬಿಜೆಪಿ ನಾಯಕರು ಇಂದು ದೇವಸ್ಥಾನದ ವಿಷಯದಲ್ಲಿ ಹೀನಾಯ  ರಾಜಕೀಯ ಮಾಡೋಕೆ ಶುರು ಮಾಡಿದ್ದಾರೆ  ಎಂದು  ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿರಿಯಡ್ಕ ಪೇಟೆಯಲ್ಲಿ ನಡೆದ ಬಹಿರಂಗ ಪ್ರಚಾರ ಸಭೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.



ದೇವಸ್ಥಾನ ಧರ್ಮ ಅಂತಾ ಯುವಜನತೆಗೆ ಪಾಠ ಹೇಳುವ ಬಿಜೆಪಿ ರಾಜಕೀಯ ನಾಯಕರು  ಹಿರಿಯಡ್ಕ ವೀರಭದ್ರ ಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ ವಿಚಾರದಲ್ಲಿ  ಮತ್ತು ಪೆರ್ಡೂರು ಅನಂತ ಪದ್ಮನಾಭ  ದೇವಸ್ಥಾನದ ರಸ್ತೆ ಅಗಲೀಕರಣ  ವಿಷಯದಲ್ಲಿ   ರಾಜಕೀಯ ಮಾಡಿ ದೇವಸ್ಥಾನದ ವಾಸ್ತುವಿಗೆ  ಧಕ್ಕೆ ತರುವ ಕೆಲಸ ಮಾಡಿದ್ದಾರೆ  ಅಂತಾ ವಿಷಾದ ವ್ಯಕ್ತಪಡಿಸಿದರು. 

ನನ್ನ ಶಾಸಕತ್ವದ ಅವಧಿಯಲ್ಲಿ ಹಿರಿಯಡ್ಕ ವ್ಯಾಪ್ತಿಯಲ್ಲಿ  800 ಅಕ್ರಮ ಸಕ್ರಮದ ಮನೆ ನಿವೇಶನ ಶಿಫಾರಸು  ಅರ್ಜಿಯನ್ನು ತಿರಸ್ಕರಿಸಲಾಗಿದೆ.ಪ್ರತೀ ಪಂಚಾಯತ್ ನಲ್ಲಿ ಬಹಳಷ್ಟು ಅರ್ಜಿಯ ಗಂಟಿದೆ. ಆ ಗಂಟು ಬಿಚ್ಚೋ ಕೆಲಸವನ್ನು ಮಾಡಬೇಕಿದೆ.ಹಿರಿಯಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸುವ ಯೋಜನೆಯನ್ನು ಹಮ್ಮಿಕೊಂಡಿದ್ದೇನೆ.ಹಿರಿಯಡ್ಕದಲ್ಲಿ  ನಾಡ ಕಚೇರಿ ಸ್ಥಾಪನೆಯ ಅಗತ್ಯತೆ ಇದೆ. ಕಾಪು ಕ್ಷೇತ್ರದಲ್ಲಿ ನೀರಿನ‌ ಸಮಸ್ಯೆ ಇರಬಾರದು ಅನ್ನೋ‌ ಮಹದಾಸೆ ನನ್ನದು   ಹೀಗಾಗಿ ಮಣಿಪುರದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕೆಲಸ ಆರಂಭವಾಗಿದೆ ಅಂತಾ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.

 ಹಿರಿಯಡ್ಕ  ವೀರಭದ್ರ ದೇವಸ್ಥಾನದ  ಜೀರ್ಣೋದ್ಧಾರ ಸಮಯದಲ್ಲಿ ಒಂದು ಆಡಳಿತ ಸಮಿತಿ ಸುಮಾರು 30 ಕೋಟಿ‌ ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡುವ ಕಾರ್ಯವನ್ನು ಹಮ್ಮಿಕೊಂಡಿತ್ತು.. ಜೀರ್ಣೋದ್ಧಾರ ಆದ ನಂತರ ಜೀರ್ಣೋದ್ಧಾರ ಮಾಡಿದ ಕಮಿಟಿಯನ್ನು ಹೊರಗಿಟ್ಟು ಜೀರ್ಣೋದ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ  ಕಮಿಟಿಯನ್ನು ಧಾರ್ಮಿಕ ಧತ್ತಿ ಇಲಾಖೆ ಮೂಲಕ ಆಡಳಿತದಲ್ಲಿ ಕೂರಿಸಲಾಗಿದೆ ಅಂತಾ ವಿಷಾಧ ವ್ಯಕ್ತಪಡಿಸಿದರು.

ಪೆರ್ಡೂರು ಅನಂತ ಪದ್ಮನಾಭ ದೇವಸ್ಥಾನ ವಿಷಯದಲ್ಲಿ ಬಿಜೆಪಿ ನಾಯಕರು ರಾಜಕೀಯ ಶುರುಮಾಡಿದ್ದು ದೇವಸ್ಥಾನದ ಹಿಂಭಾಗದ ರಸ್ತೆ ಮೂಲಕ ಹೆದ್ದಾರಿ  ಅಗಲೀಕರಣ ಪ್ರಸ್ತಾಪ ಮಾಡಿದ್ದು  ಇದರಿಂದ ದೇವಸ್ಥಾನದ ವಾಸ್ತು ವಿಗೆ ಹಾನಿಯಾಗಲಿದ್ದು ದೇವಸ್ಥಾನ ದ ಕೆರೆ , ರಥಬೀದಿ ಮತ್ತು ಪಾಣಿಗ್ರಹಕ್ಕೆ ಹಾನಿಯಾಗಲಿದೆ ಅಂತಾ ದೇವಸ್ಥಾನದ ಅರ್ಚಕರೇ ಅಭಿಪ್ರಾಯ ಪಟ್ಟಿದ್ದಾರೆ. ದೇವಸ್ಥಾನ ಕ್ಕೆ ಹಾನಿಯಾಗದಂತೆ ಬೈಪಾಸ್ ರಸ್ತೆ ಮೂಲಕ ಅಗಲೀಕರಣದ ಪ್ರಸ್ತಾಪವನ್ನು  ಗ್ರಾಮಸ್ಥರು ಮತ್ತು ದೇವಸ್ಥಾನದ ಮುಖಂಡರು ಪ್ರಸ್ತಾಪ ಮಾಡಿದ್ದು ಈ ಬಗ್ಗೆ ಬಿಜೆಪಿ  ನಾಯಕರು ವಿರೋಧ ವಕ್ಯಪಡಿಸಿ ದೇವಸ್ಥಾನದ ವಾಸ್ತುವಿಗೆ ಹಾನಿಯುಂಟು ಮಾಡುವ  ರಾಜಕೀಯ ಮಾಡ್ತಾ ಇರೋದು ದುರದ್ರಷ್ಟಕರ ಅಂತಾ ಸೊರಕೆ ಹೇಳಿದರು.

ವಿನಯಣ್ಣನ ಬಂಡವಾಳ ಪ್ರಾಮಾಣಿಕ‌ ಜನಸೇವೆ ಮಾತ್ರ : ಶಕುಂತಳಾ ಶೆಟ್ಟಿ

ವಿನಯಣ್ಣ ನೋಡೋಕೆ  ಚಂದ, ಪ್ರಾಮಾಣಿಕತೆಯಿಂದ  ಅವರು ಮಾಡೋ  ಕೆಲಸನೂ, ಅವರ ಕ್ಷೇತ್ರನೂ ಚಂದ ಮಾಡೋ ಕೆಲಸವನ್ನು ಮಾಡುತ್ತಿದ್ದಾರೆ ಅಂತಾ ಮಾತು ಆರಂಭಿಸಿದ ,  ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ   ಬಿಜೆಪಿ ಹಿಂದುತ್ವದ  ವಿರುದ್ಧ ಹಿಂದುತ್ವ  ರಾಜಕೀಯ ಮಾಡ್ತಿದೆ. ವಿವಿಧತೆಯಲ್ಲಿ ಏಕತೆಯಲ್ಲಿ ರಾಜಕೀಯ ಮಾಡೋ ಕಾಂಗ್ರೆಸ್ ಪಕ್ಷದ್ದು ನಿಜವಾದ ಹಿಂದುತ್ವ. ವಿನಯಣ್ಣ  ಪುತ್ತೂರಿನಲ್ಲಿ ಶಾಸಕರಾಗಿರುವಾಗ ಕ್ಷೇತ್ರವನ್ನು ಅಭಿವ್ರದ್ಧಿ ಮಾಡೋದರ ಜೊತೆಗೆ ಕ್ಷೇತ್ರದ ಜನತೆಯನ್ನು ಸಮಾನತೆಯಿಂದ  ತೆಗೆದುಕೊಂಡು ಹೋಗುವ ಕೆಲಸ ಮಾಡಿದ್ದಾರೆ. ಕಾಪು ಕ್ಷೇತ್ರದಲ್ಲಿ ಆಗಿರೋ  ಅಭಿವ್ರದ್ಧಿ ಕೆಲಸ ವಿನಯಣ್ಣನ ಕಾಲದಲ್ಲಿ ಆಗಿದ್ದು.. ವಿನಯಣ್ಣನ  ಬಂಡವಾಳ  ಕೇವಲ ಜನಸೇವೆ ಬಿಟ್ರೆ ಏನೂ ಇಲ್ಲ . ಕೆಲಸದಲ್ಲಿ  ಮಾತ್ರ ಅವರದ್ದು ರಾಜಕೀಯ. ವಿನಯಣ್ಣ ಗೆದ್ರೆ ಈ ಬಾರಿ ರಾಜ್ಯ ಸಂಪುಟದಲ್ಲಿ ಮಂತ್ರಿಯಾಗೋದು ಖಚಿತ. ಇದನ್ನು ಕ್ಷೇತ್ರದ ಜನತೆ ಅರ್ಥಮಾಡಿಕೊಂಡು ಮತದಾನ ಮಾಡಬೇಕು. ಅಂತಾ ಶಕುಂತಳಾ‌ ಶೆಟ್ಟಿ ಹೇಳಿದ್ದಾರೆ.

ದೇವಿ ಪ್ರಸಾದ್ ಶೆಟ್ಟಿ, ರಾಜಶೇಖರ ಕೋಟ್ಯಾನ್, ನೀರೆಕ್ರಷ್ಣ ಶೆಟ್ಟಿ, ಸಂತೋಷ್ ಕುಲಾಲ್, ಚರಣ್ ವಿಠಲ್, ಶಶಿಧರ ಜತ್ತನ್, ಸಂದೇಶ್, ದಿಲೀಪ್ ಹೆಗ್ಡೆ,ಜಿತೇಂದ್ರ ಫುಟಾರ್ಡೊ, ಗುರುದಾಸ್ ಭಂಡಾರಿ, ಭಾಸ್ಕರ ಪೂಜಾರಿ, ಉದ್ಯಾವರ ನಾಗೇಶ್, ಹರೀಶ್ ಕಿಣಿ, ಸುರೇಶ್ ನಾಯಕ್, ಪುಷ್ಪ ಅಂಚನ್, ಸಂಧ್ಯಾ, ವಿನೋದ್ ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article