ಉಡುಪಿ: ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ರವರು ಇಂದು ಅಂಬಲಪಾಡಿ ವಾರ್ಡ್, ಉಡುಪಿ ನಗರ ಭಾಗ, ಆದಿಉಡುಪಿಯಲ್ಲಿ ಮತಯಾಚಿಸಿದರು.
ಅಂಬಲಪಾಡಿಯಲ್ಲಿ ಮನೆ-ಮನೆ ಪ್ರಚಾರ, ಉಡುಪಿ ನಗರ ಭಾಗದಲ್ಲಿ ಆಭರಣ ಜ್ಯುವೆಲ್ಲರಿ ಶಾಪ್,ಆದಿ ಉಡುಪಿಯ ತಿಮ್ಮಪ್ಪ ಹೋಟೆಲ್ ಮೊದಲಾದೆಡೆ ಬಿರುಸಿನ ಪ್ರಚಾರ ನಡೆಸಿ ಜನರಲ್ಲಿ ಭರವಸೆಯನ್ನು ಮೂಡಿಸಿದರು.
ಈ ಸಂದರ್ಭದಲ್ಲಿ ಸಂಯೋಜಕರಾದ ಕೀರ್ತಿ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.











