ಮಲ್ಪೆ ಬಂದರು, ಸುತ್ತಮುತ್ತ ಮಿಂಚಿನ ಮತ ಯಾಚನೆ ಮಾಡಿದ ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿ ಪ್ರಭಾಕರ ಪೂಜಾರಿ
Monday, May 8, 2023
ಉಡುಪಿ: ಉಡುಪಿ ವಿಧಾನ ಸಭಾ ಕ್ಷೇತ್ರದ ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿ ಪ್ರಭಾಕರ ಪೂಜಾರಿ ಸೋಮವಾರ ಮಲ್ಪೆಯಲ್ಲಿ ಕಾರ್ಯಕರ್ತರೊಂದಿಗೆ ಬಿರುಸಿನ ಮತ ಪ್ರಚಾರ ನಡೆಸಿದರು.
ಮಲ್ಪೆ, ಮಲ್ಪೆ ಬಂದರು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಕ್ಕೆ ಪಾದಯಾತ್ರೆ ಮೂಲಕ ಮನೆಮನೆಗೆ ತೆರಳಿ, ಸಾರ್ವಜನಿಕರು ಸೇರುವ ಸ್ಥಳಕ್ಕೆ ಭೇಟಿ ನೀಡಿ ಪ್ರಭಾಕರ ಪೂಜಾರಿ ಮತಯಾಚನೆ ಮಾಡಿದರು.
ಈಗಾಗಲೇ ಕ್ಷೇತ್ರದ ಬಹುತೇಕ ಕಡೆಗಳಲ್ಲಿ ಚುನಾವಣಾ ಪ್ರಚಾರ ನಡೆಸಿರುವ ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿ ಪ್ರಭಾಕರ ಪೂಜಾರಿ, ತಮಗೆ ಮತ ನೀಡಿ ಅಭಿವೃದ್ಧಿಗೆ ಸಹಕರಿಸುವಂತೆ ಮಾನ್ವಿ ಮಾಡುತ್ತಿದ್ದಾರೆ.