ಬಿಜೆಪಿ ಆಡಳಿತದಿಂದ ರಿಕ್ಷಾ ಚಾಲಕರಿಗಿಂದು ಒಂದು ಹೊತ್ತಿನ ಊಟಕ್ಕೂ ಕಷ್ಟಪಡುವಂತಾಗಿದೆ: ಮಣಿಪಾಲ ಆಟೋ ನಿಲ್ದಾಣದಲ್ಲಿ ಚಾಲಕರೊಂದಿಗೆ ಮತ ಯಾಚಿಸಿದ ಪ್ರಸಾದ್ ರಾಜ್ ಕಾಂಚನ್

ಬಿಜೆಪಿ ಆಡಳಿತದಿಂದ ರಿಕ್ಷಾ ಚಾಲಕರಿಗಿಂದು ಒಂದು ಹೊತ್ತಿನ ಊಟಕ್ಕೂ ಕಷ್ಟಪಡುವಂತಾಗಿದೆ: ಮಣಿಪಾಲ ಆಟೋ ನಿಲ್ದಾಣದಲ್ಲಿ ಚಾಲಕರೊಂದಿಗೆ ಮತ ಯಾಚಿಸಿದ ಪ್ರಸಾದ್ ರಾಜ್ ಕಾಂಚನ್

ಉಡುಪಿ: ರಿಕ್ಷಾ ಚಾಲಕರಿಗಿಂದು ಒಂದು ಹೊತ್ತಿನ ಊಟಕ್ಕೂ ಕಷ್ಟಪಡುವಂತಾಗಿದೆ. ಪೆಟ್ರೋಲ್, ಡೀಸೆಲ್, ಆಟೋ ರಿಕ್ಷಾದ ಮೇಲಿನ ಬೆಲೆ ಏರಿಕೆ,  ಇನ್ಶುರೆನ್ಸ್, ತೆರಿಗೆಗಳು ಐದು ಪಟ್ಟು ಹೆಚ್ಚಾಗಿದೆ. ಬಡವರಿಗೆ ಬೆಂಗಾವಲಾಗಿ ಇರುವ ಕಾಂಗ್ರೆಸ್ ಪಕ್ಷವನ್ನು ಈ ಬಾರಿ ಬೆಂಬಲಸುವಂತೆ ಉಡುಪಿ ಜಲ್ಲಾ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಮನವಿ ಮಾಡಿದ್ದಾರೆ.

ಅವರು ಬುಧವಾರ ಮಣಿಪಾಲ ಆಟೋ ನಿಲ್ದಾಣದ ಬಳಿ ಆಟೋ ರಿಕ್ಷಾ ಚಾಲಕರೊಂದಿಗೆ ಮತ ಯಾಚಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಇಂದ್ರಾಳಿ 192 ರ ಬೂತ್ ಅಧ್ಯಕ್ಷ ರಾಘವೇಂದ್ರ ನಾಯಕ್ ಇಂದ್ರಾಳಿ, ರಿಕ್ಷಾ ಚಾಲಕರು ಮೊದಲಾದವರು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article