ಜಗದ್ಗುರು ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳ ಆಶೀರ್ವಾದ ಪಡೆದ ವಿನಯ್ ಕುಮಾರ್ ಸೊರಕೆ; ಸೋತರೂ ಜನರ ಜೊತೆಗಿದ್ದ ನಿಮ್ಮ ಜೊತೆ ನಾವೀದಿವಿ ಎಂದು ಅಭಯ ನೀಡಿದ ಕಾಳಹಸ್ತೇಂದ್ರ ಮಹಾಸ್ವಾಮಿಗಳು
Wednesday, May 3, 2023
ಉಡುಪಿ: ಸೋತರೂ ಎದೆಗುಂದದೆ ಜನರ ಜೊತೆ ಇದ್ದು ಬಹಳಷ್ಟು ಜನಸೇವೆಯನ್ನು ಮಾಡಿದ್ದೀರಿ.ಈ ಬಾರಿ ಜನ ಬದಲಾವಣೆ ಬಯಸುತ್ತಿದ್ದಾರೆ. ಯಾವುದೇ ಕಪ್ಪು ಚುಕ್ಕೆ ಇಲ್ಲದೇ 40 ವರ್ಷಗಳ ಕಾಲ ರಾಜಕೀಯ ಮಾಡಿ ಜನರ ಸೇವೆ ಮಾಡುತ್ತಿರುವ ನಿಮ್ಮೊಂದಿಗೆ ಈ ಬಾರಿ ನಮ್ಮ ಸಮಾಜ ಇದೆ ಅಂತಾ ಜಗದ್ಗುರು ಆನೆಗೊಂದಿ ಮಹಾಸಂಸ್ಥಾನ ಸರಸ್ವತಿ ಪೀಠ ಪಡುಕುತ್ಯಾರು ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳು ಹೇಳಿದ್ದಾರೆ.
ಪಡುಕುತ್ಯಾರಿನಲ್ಲಿ ಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ವಿನಯ್ ಕುಮಾರ್ ಸೊರಕೆ ತಮ್ಮ ಅಭಿವೃದ್ಧಿ ಯೋಜನೆಗಳ ಬಗ್ಗೆ, ಸರಕಾರದ ಯೋಜನೆಗಳ ಬಗ್ಗೆ
ಸ್ವಾಮೀಜಿಯವರೊಂದಿಗೆ ಸಮಾಲೋಚನೆ ಮಾಡಿದರು.ಕಾಂಗ್ರೆಸ್ ದಿವಾಕರ ಡಿ ಶೆಟ್ಟಿ, ರಾಜೇಶ್ ಕುಲಾಲ್, ದಿವಾಕರ ಬಿ. ಶೆಟ್ಟಿ,ಜಾನ್ಸನ್ ಕಾರ್ಕಡ, ಶಶಿಕಾಂತ್ ಆಚಾರ್ಯ, ಪ್ರಭಾಕರ ಆಚಾರ್ಯ, ರತನ್ ಶೆಟ್ಟಿ ಉಪಸ್ಥಿತರಿದ್ದರು.