ವರುಣಾದಲ್ಲಿ ಸಿದ್ದರಾಮಯ್ಯ ಪರ ಪ್ರಚಾರ ನಡೆಸಿ ಮತ ಯಾಚಿಸಿದ ನಟ ದುನಿಯಾ ವಿಜಯ್, ಯೋಗಿ, ನಟಿ ನಿಶ್ವಿಕಾ ನಾಯ್ಡು

ವರುಣಾದಲ್ಲಿ ಸಿದ್ದರಾಮಯ್ಯ ಪರ ಪ್ರಚಾರ ನಡೆಸಿ ಮತ ಯಾಚಿಸಿದ ನಟ ದುನಿಯಾ ವಿಜಯ್, ಯೋಗಿ, ನಟಿ ನಿಶ್ವಿಕಾ ನಾಯ್ಡು

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಪರವಾಗಿ ವರುಣಾ ಕ್ಷೇತ್ರದಲ್ಲಿ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು ಭರ್ಜರಿ ಪ್ರಚಾರ ನಡೆಸಿ ಮತ ಹಾಕುವಂತೆ ತಮ್ಮ ಅಭಿಮಾನಿಗಳಿಗೆ ಕರೆ ನೀಡಿದ್ದಾರೆ.

ಖ್ಯಾತ ಚಲನಚಿತ್ರ ನಟರಾದ ದುನಿಯಾ ವಿಜಯ್, ‘ಲೂಸ್ ಮಾದ’ ಯೋಗಿ ಹಾಗೂ ನಟಿ ನಿಶ್ವಿಕಾ ನಾಯ್ಡು, ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಹಾಗೂ ಪಕ್ಷದ ಮುಖಂಡರು ಸಾಥ್ ನೀಡಿದರು.
ಸಿದ್ದರಾಮಯ್ಯ ಅವರು ಚಿಕ್ಕಹಳ್ಳಿ ಗ್ರಾಮಕ್ಕೆ ಪ್ರವೇಶಿಸುತ್ತಿದ್ದಂತೆ ಅಭಿಮಾನಿಗಳು ಹಾಗೂ ಕಾರ್ಯಕರ್ತರಿಂದ ಭರ್ಜರಿ ಸ್ವಾಗತ ದೊರೆಯಿತು. ಪಟಾಕಿ ಸಿಡಿಸಿ, ಹೂವಿನ ಸುರಿಮಳೆ ಮೂಲಕ ಬರಮಾಡಿಕೊಂಡರು.

ದುನಿಯಾ ವಿಜಯ್ ಮಾತನಾಡಿ, ಸಿದ್ದರಾಮಯ್ಯನವರು ತಮ್ಮ ಅಧಿಕಾರ ಅವಧಿಯಲ್ಲಿ ಬಡವರಿಗಾಗಿ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅವರು ಮತ್ತೆ ಮುಖ್ಯಮಂತ್ರಿಯಾಗಿ ಕಾಣಬೇಕು ಎಂಬುದು ತಮ್ಮ ಆಸೆ ಎಂದರು.

5 ವರ್ಷ ಪೂರ್ಣ ಆಡಳಿತ ಮಾಡಿದ್ದಾರೆ ಅಂದ್ರೆ ಭ್ರಷ್ಟರಹಿತ ಆಡಳಿತ ಅನ್ನೋದು ಗೊತ್ತಾಗುತ್ತೆ. ಹೊರಗಿನವರಿಗಿಂತ ನಮ್ಮೂರಿನವರು, ನಮ್ಮವರನ್ನ ಗೆಲ್ಲಿಸಬೇಕು. ಎಲ್ಲರೂ ಕೂಡ ಸಿದ್ದರಾಮಯ್ಯ ನವರಿಗೆ ಮತ ಹಾಕಿ. ಅವರು ಮತ್ತೆ ಸಿಎಂ ಆಗ್ಬೇಕು ಎಂದು ಮನವಿ ಮಾಡಿದ್ದಾರೆ.

‘ಸಿದ್ದರಾಮಯ್ಯ ಅವರು ಒಳ್ಳೆಯ ವ್ಯಕ್ತಿ. ಮತದಾರರು ಈ ಬಾರಿಯೂ ಅವರನ್ನು ಗೆಲ್ಲಿಸಬೇಕು’ ಎಂದು ಯೋಗಿ ಕೇಳಿಕೊಂಡರು.

Ads on article

Advertise in articles 1

advertising articles 2

Advertise under the article