ಕರಂಬಳ್ಳಿ ನೇಕಾರರ ಕಾಲೋನಿಗೆ, ಮಣಿಪಾಲದ ಎಂಸಿಟಿ ಕಾರ್ಡ್ಸ್ ಎಂಡ್ ಟೆಕ್ನಾಲಜಿ ಪ್ರೈವೆಟ್ ಲಿಮಿಟೆಡ್ ಸಂಸ್ಥೆಗೆ ಭೇಟಿ ನೀಡಿ ಮತಯಾಚಿಸಿದ ಪ್ರಸಾದ್ ರಾಜ್ ಕಾಂಚನ್
Friday, May 5, 2023
ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ರವರು ಇಂದು ಕರಂಬಳ್ಳಿ ನೇಕಾರರ ಕಾಲೋನಿಗೆ ಭೇಟಿ ನೀಡಿ ಮತಯಾಚಿಸಿದರು.
ಈ ಸಂದರ್ಭದಲ್ಲಿ ಸಂಯೋಜಕರಾದ ಯಾದವ ಆಚಾರ್ಯ ಉಪಸ್ಥಿತರಿದ್ದರು.
ಇದಕ್ಕೂ ಮೊದಲು ಮಣಿಪಾಲದ ಎಂಸಿಟಿ ಕಾರ್ಡ್ಸ್ ಎಂಡ್ ಟೆಕ್ನಾಲಜಿ ಪ್ರೈವೆಟ್ ಲಿಮಿಟೆಡ್ ಸಂಸ್ಥೆಗೆ ಭೇಟಿ ನೀಡಿ ಸಂಸ್ಥೆಯ ಸಿಬ್ಬಂದಿ ವರ್ಗದೊಡನೆ ಮತ ಯಾಚಿಸಿದರು.
ಈ ವೇಳೆ ಮಾತನಾಡಿದ ಅವರು, ವಾರಾಹಿ ನೀರು ಯೋಜನೆಯನ್ನು ಕಾಂಗ್ರೆಸ್ 2014 ರಲ್ಲಿ ಉಡುಪಿ ಜಿಲ್ಲೆಯಲ್ಲಿ ಸ್ಥಾಪಿಸಿತ್ತು. ಹತ್ತು ವರ್ಷದಲ್ಲಿ ವಾರಾಹಿ ಯೋಜನೆಯಿಂದ ನೀರು ದೊರಕಿಸಿಕೊಡಲು ಬಿಜೆಪಿಗೆ ಸಾಧ್ಯವಾಗಿಲ್ಲ ದೂರಿದರು.