ಕಾಪು ಕಾಂಗ್ರೆಸ್'ಗೆ ಆನೆ ಬಲ: ಪಂಚಾಯತ್ ಸದಸ್ಯ ರೋಶನ್ ನೇತೃತ್ವದಲ್ಲಿ ಕಾಂಗ್ರೆಸ್ 'ಕೈ' ಹಿಡಿದ ಯುವಕರ ಪಡೆ

ಕಾಪು ಕಾಂಗ್ರೆಸ್'ಗೆ ಆನೆ ಬಲ: ಪಂಚಾಯತ್ ಸದಸ್ಯ ರೋಶನ್ ನೇತೃತ್ವದಲ್ಲಿ ಕಾಂಗ್ರೆಸ್ 'ಕೈ' ಹಿಡಿದ ಯುವಕರ ಪಡೆ

ಕಾಪು: ಯುವ ನಾಯಕ ಮೊಗವೀರ ಮುಂದಾಳು ಹೆಜಮಾಡಿ ಗ್ರಾಮ ಪಂಚಾಯತ್ ಪಕ್ಷೇತರ  ಸದಸ್ಯ ರೋಶನ್ ನೇತ್ರತ್ವದಲ್ಲಿ ನೂರಾರು ಯುವಕರು ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ‌.


ಕಾಪು ರಾಜೀವ ಭವನದಲ್ಲಿ ನಡೆದ ಯುವ ಕಾಂಗ್ರೆಸ್ ಸಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು ಮಾತನಾಡಿದ  ರೋಶನ್, ಯಾವುದೇ ಕಪ್ಪು ಚುಕ್ಕೆ ಇಲ್ಲದ ಪ್ರಾಮಾಣಿಕ ರಾಜಕಾರಣಿ ವಿನಯ ಕುಮಾರ್ ಸೊರಕೆಯವರ ವ್ಯಕ್ತಿತ್ವಕ್ಜೆ ಮನಸೋತು ಕಾಂಗ್ರೆಸ್ ಸೇರ್ಪಡೆ ಯಾಗ್ತಿದ್ದೀವಿ.  ರಾಜ್ಯದಲ್ಲಿ 40 % ಸರ್ಕಾರ ಇದ್ರೆ ಬಿಜೆಪಿ ನೇತ್ರತ್ವದ ಹೆಜಮಾಡಿ ಪಂಚಾಯತ್ ನಲ್ಲಿ 20 % ಕಮಿಷನ್ ಸರ್ಕಾರದ  ಆಡಳಿತ ನಡೀತಾ ಇದೆ. ಕೇವಲ noc ಗಾಗಿ ಪಂಚಾಯತ್ ಸದಸ್ಯನಾದ ನನ್ನ ಹತ್ರನೇ ಲಂಚ ಕೇಳಿದ್ದಾರೆ... ಪಂಚಾಯತ್ ನಲ್ಲೂ ಭ್ರಷ್ಟಾಚಾರ ತಾಂಡವವಾಡ್ತಾ ಇದೆ.. ಪಕ್ಷೇತರನಾಗಿ ನನ್ನನ್ನು ಗೆಲ್ಲಿಸಿದ ನನ್ನ ಗ್ರಾಮಸ್ಥರ ಕೆಲಸ ಆಗ್ತಾ ಇಲ್ಲ.. ಇದರಿಂದ ರೋಸಿ ಹೋಗಿ ಕಾಂಗ್ರೆಸ್ ಪಕ್ಷಕ್ಕೆ ನಾನು ನನ್ನ ಸ್ನೇಹಿತರು ಸ್ವ ಇಚ್ಛೆಯಿಂದ ಸೇರ್ಪಡೆ ಗೊಂಡಿದ್ದೀವಿ. ಕರಾವಳಿ ಉದ್ದಕ್ಕೂ ಪಕ್ಷ ಸಂಘಟನೆ ಮಾಡಿ  ಸೊರಕೆಯವರನ್ನು ಭಾರೀ ಅಂತರದ ಗೆಲುವಿಗಾಗಿ ನನ್ನ ತಂಡ ಇಂದಿನಿಂದಲೇ ಕೆಲಸ ಮಡುತ್ತೆ ಅಂತಾ ರೋಶನ್ ಹೇಳಿದರು.

ಕಾಪು ಭಾಗದ ಕ್ರೀಯಾಶೀಲ ಸಮಾಜಮುಖಿ‌ ಕಾರ್ಯಕರ್ತೆ ಫರ್ಜಾನ ಕಾಪು ಇಂದು ಕಾಂಗ್ರೆಸ್ ಪಕ್ಷಕ್ಕೆ  ಸೇರ್ಪಡೆಯಾಗಿದ್ದಾರೆ.

ಯುವ ಜನತೆಯ ಆಶೋತ್ತರಗಳಿಗೆ ತುರ್ತು ಸ್ಪಂದಿಸುವ ಕೆಲಸಕ್ಕೆ ನನ್ನ ಮೊದಲ ಆದ್ಯತೆ.ಈಗಾಗಲೇ ನನ್ನ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಕೈಗಾರಿಕಾ ವಲಯವನ್ನು ಸ್ಥಾಪಿಸಿ ಪ್ರತೀ ಮನೆಯಲ್ಲಿ ಒಬ್ವರಿಗೆ ಉದ್ಯೋಗ ನೀಡುವ ಕೆಲಸವನ್ನು ನಾನು ಮಾಡ್ತಿನಿ ಅಂತಾ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ, ಯುವ ಶಕ್ತಿಯ ಸದ್ಭಳಕೆಯಾಗಬೇಕು.ಯುವಶಕ್ತಿ  ಹೆಚ್ಚು ಕೆಲಸ ಮಾಡಿದಷ್ಟು ಗೆಲುವಿನ  ವೇಗ ಜಾಸ್ತಿಯಾಗುತ್ತದೆ.ಸ್ವಚ್ಚ ಮನಸ್ಸಿನ ರಾಜಕಾರಣಿ ವಿನಯ ಕುಮಾರ್ ಸೊರಕೆಯವರಭಾರೀ ಅಂತರದ ಗೆಲುವಿಗಾಗಿ ಯುವಶಕ್ತಿ ಪ್ರಯತ್ನಿಸಬೇಕಾಗಿದೆ‌.

ಕಾಂಗ್ರೆಸ್ ವಕ್ತಾರ ಸುಧೀರ್ ಕುಮಾರ್ ಮರೋಳಿ ಮಾತನಾಡಿ, ಕಾಂಗ್ರೆಸ್ ಕತ್ತಿ ತಲವಾರನ್ನು ಕೊಡುವುದಿಲ್ಲ. ಲ್ಯಾಪ್‌ಟಾಪ್ ಕೊಡುತ್ತೆ.ಯುವಶಕ್ತಿಗೆ ಶಕ್ತಿ ತುಂಬೋ ಕೆಲಸವನ್ನು ಮಾಡುತ್ತೆ.ಯಾರು ಕ್ಷೇತ್ರವನ್ನು ಪ್ರೀತಿಸುತ್ತಾರೋ ಅವರು  ಕ್ಷೇತ್ರದ ಅಭಿವ್ರದ್ಧಿಗೆ ಶ್ರಮಿಸುತ್ತಾರೆ. ಸೊರಕೆಯವರು ಈ ಹಿನ್ನೆಲೆಯಲ್ಲಿ ಕೆಲಸ ಮಾಡುವ ಅಪರೂಪದ ರಾಜಕಾರಣಿ .  ಎಸ್ ಡಿಪಿ ಐ ಯವರ ಬಾವುಟ ಇರೋದೇ ಬಿಜೆಪಿಯವರ ಕಚೇರಿಯಲ್ಲಿ... ಬಿಜೆಪಿ ಪ್ರತಿಭಟನೆ ಮಾಡಿ ಅಂದ್ರೆ ಎಸ್ ಡಿಪಿಯವರು  ಮಾಡ್ತಾರೆ. ಎಸ್ ಡಿಪಿಯವರಿಗೆ ಎಲ್ಲಾ ಸೌಕರ್ಯವನ್ನು ಬಿಜೆಪಿ ಒದಗಿಸಿಕೊಡುತ್ತೆ .ವಿನಯ ಕುಮಾರ್ ಅವರನ್ನು ಸೋಲಿಸಲು ಯಾವುದೇ ದೇವರು ಬಿಡಲ್ಲ. ರಾಜ್ಯದಲ್ಲಿರುವ  ಜನನ ಬೆರಳೆಣಿಕೆಯಷ್ಟು ಪ್ರಾಮಾಣಿಕ ರಾಜಕಾರಣಿಗಳಲ್ಲಿ ವಿನಯ ಕುಮಾರ್ ಸೊರಕೆಯೊಬ್ಬರು ಅಂತಾ ಸುಧೀರ್ ಕುಮಾರ್ ಮರೋಳಿ ಹೇಳಿದ್ದಾರೆ.

ಕೆ.ಪಿ.ಸಿ.ಸಿ ಕಾರ್ಯದರ್ಶಿ  ರಾಜಶೇಖರ ‌ಕೋಟ್ಯಾನ್ ,  ದೇವಿಪ್ರಸಾದ್ ಶೆಟ್ಟಿ ‌ಬೆಳಪು , ಕೆಪಿಸಿಸಿ ಸಂಯೋಜಕ ನವೀನಚಂದ್ರ ಜೆ ಶೆಟ್ಟಿ. ಕೆಪಿಸಿಸಿ ಸಂಯೋಜಕ ಅಬ್ದುಲ್ ಅಜೀಜ್ ‌, ರಾಜ್ಯ ಮೀನುಗಾರರ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಅಖೀಲೇಶ್ ಕೋಟ್ಯಾನ್ , ಜಿಲ್ಲಾ‌ ಕಾಂಗ್ರೆಸ್ ಮೀನುಗಾರರ ಸಮಿತಿ ಅಧ್ಯಕ್ಷ ವಿಶ್ವಾಸ್ ಅಮೀನ್ ‌,‌ ಪ್ರಚಾರ ಸಮಿತಿ ಅಧ್ಯಕ್ಷ ಜಿತೇಂದ್ರ ಪೂರ್ಟಾಡು ,  ಕಾಪು‌‌ ಬ್ಲಾಕ್  ಯುವ ಕಾಂಗ್ರೆಸ್ ‌ಅಧ್ಯಕ್ಷ ರಮೀಜ್‌ ಹುಸೇನ್ ,  ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ  ಶಾಂತಲತಾ ಶೆಟ್ಟಿ ,  ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ‌ವೈ ಸುಕುಮಾರ್ , ದಲಿತ ಮುಖಂಡ ಶೇಖರ್ ಹೆಜಮಾಡಿ , ಕಾಪು ಬ್ಲಾಕ್ ‌ಹಿಂದುಳಿದ ವರ್ಗದ ‌ಅಧ್ಯಕ್ಷ ದೀಪಕ್ ಎರ್ಮಾಳ್ ಉಪಸ್ಥಿತರಿದ್ದರು..ಸಂತೋಷ್ ಪಡುಬಿದ್ರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Ads on article

Advertise in articles 1

advertising articles 2

Advertise under the article