ನನಗೆ ಮತ ನೀಡಿ ಗೆಲ್ಲಿಸಿದಲ್ಲಿ ಮುಂದಿನ 5 ವರ್ಷ ಜನತೆಯ ಸೇವೆಗೆ ತಮ್ಮ ಬದುಕು ಪಣವಾಗಿಡುತ್ತೇನೆ: ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ
Monday, May 1, 2023
ಕಾಪು: ಕಾಪು ವಿಧಾನಸಭೆಗೆ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿರುವ ಗುರ್ಮೆ ಸುರೇಶ್ ಶೆಟ್ಟಿ ಅವರಿಂದು ಕಾಪು ಪುರಸಭೆ ವ್ಯಾಪ್ತಿಯಲ್ಲಿ ಬಿರುಸಿನ ಮತ ಯಾಚನೆ ನಡೆಸಿದರು.
ದೇಶವಿಂದು ಸ್ವಾತಂತ್ರ್ಯದ ಅಮೃತಕಾಲದಲ್ಲಿದೆ. ಪ್ರಧಾನ ಮಂತ್ರಿ ಅವರು ದೇಶವನ್ನು ಮುಂಚೂಣಿಗೆ ಕೊಂಡೊಯ್ಯಲು ಅನೇಕ ಸಂಕಲ್ಪ, ದೃಢ ನಿರ್ಧಾರಗಳನ್ನು ಮಾಡಿದ್ದಾರೆ. ಇವೆಲ್ಲವನ್ನು ಈಡೇರಿಸಲು ಅವರ ಕೈ ಬಲಪಡಿಸುವುದು ಅಗತ್ಯ. ಆದುದರಿಂದ ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಮರಳುವಂತೆ ಮಾಡಲು ಪಕ್ಷದ ಅಭ್ಯರ್ಥಿಗಳು ಗೆಲ್ಲಬೇಕಾಗಿದ್ದು, ಈ ಹಿನ್ನೆಲೆಯಲ್ಲಿ ತಮಗೆ ಮತ ನೀಡಿ ಗೆಲ್ಲಿಸಿದಲ್ಲಿ ಮುಂದಿನ ಐದು ವರ್ಷ ಜನತೆಯ ಸೇವೆಗೆ ತಮ್ಮ ಬದುಕು ಪಣವಾಗಿಡುತ್ತೇನೆ ಎಂದು ಗುರ್ಮೆ ಸುರೇಶ್ ಶೆಟ್ಟಿ ಭರವಸೆ ನೀಡಿದರು.
ಮತ ಯಾಚನೆಯ ವೇಳೆ ಮಟ್ಟಾರ್ ರತ್ನಾಕರ್ ಹೆಗ್ಡೆ, ಸಂದೀಪ್ ಶೆಟ್ಟಿ, ಸುರೇಶ್ ದೇವಾಡಿಗ, ಲತಾ ದೇವಾಡಿಗ, ಅನಿಲ್ ಕುಮಾರ್, ಮೋಹನ್ ಕಾಪು, ಗಾಂಧಾರ ಸುವರ್ಣ, ರಂಜಿತ್ ಸುವರ್ಣ ಸೇರಿದಂತೆ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿರಿದ್ದರು.