ಜೆಡಿಎಸ್ ಅಭ್ಯರ್ಥಿ ಮೊಹಿದೀನ್ ಬಾವಾಗೆ ಬಿಗ್ ಶಾಕ್..!! ತನ್ನ ಆಪ್ತ ಸಹಾಯಕನೇ ಕಾಂಗ್ರೆಸ್ ಸೇರ್ಪಡೆ; ಅನಾವರಣವಾಗಲಿದೆಯೇ ಬಾವ ನೈಜ ಮುಖ?!! ಬಿಜೆಪಿ-ಜೆಡಿಎಸ್ ಒಳ ಒಪ್ಪಂದದ ಬಗ್ಗೆ ಕ್ಷೇತ್ರದಲ್ಲಿ ಬಾರಿ ಗುಸು ಗುಸು!
Monday, May 1, 2023
ಮಂಗಳೂರು: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮೊಹಿದೀನ್ ಬಾವ ಆಪ್ತ ಸಹಾಯಕ ಸಹಿತ ಹಲವಾರು ಯುವಕರು ಇಂದು ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಅಲಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.
ಇದು ಸಹಜವಾಗಿ ಕ್ಷೇತ್ರದಾದ್ಯಂತ ಮೊಹಿದೀನ್ ಬಾವ ವಿರುದ್ಧ ಕೇಳಿ ಬರುತ್ತಿರುವ ಬಿಜೆಪಿ ಒಳ ಒಪ್ಪಂದದ ಆರೋಪಕ್ಕೆ ಪುಷ್ಟಿ ನೀಡಲಿದೆಯೇ ಎಂದು ಕಾದು ನೋಡಬೇಕಾಗಿದೆ.
ಕಾಂಗ್ರೆಸ್ ಟಿಕೆಟ್ ವಂಚಿತರಾದ ನಂತರ ಜೆಡಿಎಸ್ ಸೇರಿದ ಬಾವ ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಅಲಿ ಯನ್ನು ಸೋಲಿಸಿಯೇ ತೀರುತ್ತೇನೆ ಎಂದು ಕ್ಷೇತ್ರದಾದ್ಯಂತ ಜನರ ಜೊತೆ ಸವಾಲೆಸೆಯುತ್ತಿದ್ದು, ಪ್ರಬಲ ಸ್ಪರ್ಧಿಯಾದ ಬಿಜೆಪಿ ಅಭ್ಯರ್ಥಿಯ ಬಗ್ಗೆ ತುಟಿಪಿಟಿಕ್ ಎನ್ನದ ಬಾವ ಬಗ್ಗೆ ಜನರಲ್ಲಿ ಸಹಜವಾಗಿ ಸಂಶಯ ಮೂಡಿದೆ.
ಇದೀಗ ಆಪ್ತ ಸಹಾಯಕ ನಿಝಾಮ್ ಕಾಂಗ್ರೆಸ್ ಸೇರ್ಪಡೆಯಾಗಿ ಬಾವ ಅವರ ನೈಜ ಮುಖವಾಡವನ್ನು ಕಳಚಲಿದ್ದಾನೆಯೇ ಚರ್ಚೆಗಳು ಶುರುವಾಗಿದೆ.