ಬ್ರಹ್ಮಾವರ ಮೀನು ಮಾರುಕಟ್ಟೆ, ಕೆಮ್ಮಣ್ಣು ಭದ್ರಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿ ಮತ ಯಾಚಿಸಿದ ಉಡುಪಿ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್
Monday, May 1, 2023
ಉಡುಪಿ: ಈ ಬಾರಿ ತನಗೆ ಮತ ನೀಡುವ ಮೂಲಕ ಗೆಲ್ಲಿಸುವಂತೆ ಕೋರಿ ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಅವರು ಕ್ಷೇತ್ರದ ವಿವಿಧ ಕಡೆ ತೆರಳಿ ಇಂದು ಮತ ಯಾಚನೆ ನಡೆಸಿದರು.
ಕೆಮ್ಮಣ್ಣು ಗುಡ್ಯಾಂ ನ ಭದ್ರಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು, ಅಲ್ಲಿದ್ದ ಭಕ್ತಾದಿಗಳನ್ನು ಭೇಟಿಯಾಗಿ ತನಗೆ ಮತ ಹಾಕುವಂತೆ ಮನವಿ ಮಾಡಿದರು.
ಅನಂತರ ಬ್ರಹ್ಮಾವರ ಮೀನು ಮಾರುಕಟ್ಟೆಗೆ ಭೇಟಿ ನೀಡಿದ ಪ್ರಸಾದ್ ರಾಜ್ ಕಾಂಚನ್, ನನ್ನ ಗೆಲುವಿಗೆ ಸಹಕರಿಸಿದರೆ ಮುಂದೆ ಮೀನುಗಾರರಿಗೆ ಹಾಗು ಮೀನುಗಾರ ಮಹಿಳೆಯರಿಗೆ ಎಲ್ಲ ರೀತಿಯಿಂದಲೂ ಸ್ಪಂದಿಸುವ ಭರವಸೆ ನೀಡಿದರು.