ಗೆದ್ದಲು ತಿನ್ನುತ್ತಿರುವ 2000 ಮನೆ ನಿವೇಶನದ ಅರ್ಜಿಗಳನ್ನು ಮತ್ತೆ ಓಪನ್ ಮಾಡ್ತಿನಿ: ಪೆರ್ಡೂರುನ ಚುನಾವಣಾ ಪ್ರಚಾರ ಸಭೆಯಲ್ಲಿ ವಿನಯ ಕುಮಾರ್ ಸೊರಕೆ
ಉಡುಪಿ: ನಾನು ಶಾಸಕನಾಗಿದ್ದ ಕಾಲದಲ್ಲಿ 94 ಸಿ ಕಾನೂನು ಮತ್ತು ಅಕ್ರಮ ಸಕ್ರಮ ಯೋಜನೆಯಡಿ 2 ಸಾವಿರ ಅರ್ಜಿಯನ್ನು ಈ ಭಾಗದಲ್ಲಿ ಶಿಫಾರಸು ಮಾಡಿದ್ದೇನೆ..ನಾನು ಶಿಫಾರಸು ಮಾಡಿದ ಅರ್ಜಿಯನ್ನು ಸಂಪೂರ್ಣ ವಾಗಿ ತಿರಸ್ಕರಿಸಲಾಗಿದೆ ಎಂದು ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.
ಪೆರ್ಡೂರು ಪೇಟೆಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ನಾನು ಶಿಫಾರಸು ಮಾಡಿದ ಎಲ್ಲಾ ಅರ್ಜಿಗಳು ಗೆದ್ದಲು ಹಿಡಿದಿದ್ದು ಅರ್ಜಿಯ ಕಟ್ಟನ್ನು ಮತ್ತೆ ಓಪನ್ ಅದಕ್ಕೆ ಮರುಜೀವ ಕೊಟ್ಟು ಬಡವರಿಗೆ ಮನೆ ಮಂಜೂರಾತಿ ಮಾಡುವ ಕೆಲಸವನ್ನು ಮಾಡ್ತಿನಿ ಅಂತಾ ಅವರು ಹೇಳಿದರು.
ರಸ್ತೆ ಅಗಲೀಕರಣಕ್ಕೆ ಸಂಬಂಧಪಟ್ಟಂತೆ ಬೈಪಾಸ್ ರಸ್ತೆ ಮೂಲಕ ಪೆರ್ಡೂರು ದೇವಸ್ಥಾನಕ್ಕೆ ಹಾನಿ ಆಗದ ಹಾಗೇ ರಸ್ತೆ ಅಗಲೀಕರಣ ಮಾಡಬೇಕಿದೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಬಹಳಷ್ಟು ರಾಜಕೀಯ ಮಾಡ್ತಾ ಇದೆ.ಈಗಿನ ವ್ಯವಸ್ಥೆ ಯಲ್ಲಿ ಮಾಡೋದಾದಲ್ಲಿ ದೇವಸ್ಥಾನದ ಅರ್ಚಕರು ತಿಳಿಸಿದಂತೆ ಪಾಣಿಗ್ರಹದಲ್ಲಿ ಕಂಪನ ಬರುತ್ತದೆ. ಕೆರೆ, ರಥಬೀದಿ ಎಲ್ಲಾನು ನಾಶವಾಗುತ್ತದೆ. ದೇವಸ್ಥಾನಕ್ಕೆ ಧಕ್ಕೆ ಆಗುತ್ತದೆ... ಬೈಪಾಸ್ ರಸ್ತೆ ಮೂಲಕ ಈ ಕಾಮಗಾರಿ ಆದರೆ ದೇವಸ್ಥಾನ ಕ್ಕೆ ಯಾವುದೇ ಧಕ್ಕೆ ಆಗುವುದಿಲ್ಲ ದೇವಸ್ಥಾನಕ್ಕೆ ಧಕ್ಕರ ಆಗದೇ ರಸ್ತೆ ಅಗಲೀಕರಣಕ್ಕೆ ನಮ್ಮ. ಮುಂದುವರಿಸುತ್ತೇವೆ ಅಂತಾ ಸೊರಕೆ ಹೇಳಿದ್ದಾರೆ.ಬಿಜೆಪಿ ದೇವಸ್ಥಾನ ದ ವಿಚಾರದಲ್ಲಿ ರಾಜಕೀಯ ಶುರುಮಾಡಿ ದೇವಸ್ಥಾನವನ್ನೆ ನಾಶ ಮಾಡಲು ಪ್ರಯತ್ನ ಮಾಡುತ್ತಿದೆ ಅಂತಾ ಸೊರಕೆ ಅಕ್ರೋಶ ವ್ಯಕ್ತಪಡಿಸಿದರು.
ನನ್ನ ಕ್ಷೇತ್ರದಾದ್ಯಂತ ಕುಡಿಯುವ ನೀರಿನ ಸಮಸ್ಯೆ ಬಹಳಷ್ಟು ಇದೆ. ಚುನಾವಣಾ ಸಂದರ್ಭದಲ್ಲಿ ಕುಡಿಯುವ ನೀರಿಗೆ ಆದ್ಯತೆ ಕೊಡ್ತಾ ಇಲ್ಲ. ಮೂಲಭೂತ ಸೌಕರ್ಯದಿಂದ ಜನರನ್ನು ವಂಚಿತರಾಗುವ ಕೆಲಸವನ್ನು ಬಿಜೆಪಿ ಮಾಡ್ತಾ ಇದೆ.ಕುಡಿಯುವ ನೀರಿನ ಮೂಲ ಹುಡುಕುವ ಬದಲು ಪೈಪ್ ಲೈನ್ ಮಾತ್ರ ಹಾಕುವ ಕೆಲಸ ಆಗ್ತಿದೆ ಅಂತಾ ಸೊರಕೆ ವ್ಯಂಗ್ಯವಾಡಿದರು.
ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮರೊಳಿ ಮಾತನಾಡಿ ಈಗಿನ ಬಿಜೆಪಿ ಅಭ್ಯರ್ಥಿಯ ಮೇಲೆ ಎರಡು ಕ್ರಿಮಿನಲ್ ಕೇಸ್ ದಾಖಲಾಗಿದೆ ಎಂದು ಅವರೇ ಸಲ್ಲಿಸಿದ ಅಫಿದಾವಿತ್ ದಾಖಲಾಗಿದೆ.ಗಣಿ ಲೂಟಿಯಲ್ಲಿ ಸರಕಾರಕ್ಕೆ 81 ಕೋಟಿ ವಂಚಿಸಿದ ಪ್ರಕರಣ ಇದರಲ್ಲಿ ಮುಖ್ಯವಾದದ್ದು.ಈ ಬಗ್ಗೆ ಜನರು ಯೋಚಿಸಬೇಕಾಗಿದೆ.ಆಲೋಚಿಸಿ ಮತ ಹಾಕಬೇಕಾಗಿದೆ. ಕಮಲ ಕೆರೆಯಲ್ಲಿದ್ದರೆ ಚಂದ, ತೆನೆ ಗದ್ದೆಯಲ್ಲಿದ್ದರೆ ಚಂದ, ಪ್ರಾಮಾಣಿಕವಾದ ಕೈ ಅಧಿಕಾರದಲ್ಲಿದ್ದರೆ ಚಂದ ಅಂತೆ. ಹಾಗಾಗಿ ಪ್ರಾಮಾಣಿಕ ರಾಜಕಾರಣಿ ಸೊರಕೆಯವರಿಗೆ ಉತ್ತಮ ಆಯ್ಕೆ ಮರೋಳಿ ಅಭಿಪ್ರಾಯ ಪಟ್ಟರು.
ಕಾಂಗ್ರೆಸ್ ಮುಖಂಡರಾದ ಶಾಂತಾರಾಮಸೂಡ, ಚರಣ್ ವಿಠಲ್ ಕುದಿ, ಜಿತೇಂದ್ರ ಫುಟಾರ್ಡೊ, ಸಂತೋಷ್ ಕುಲಾಲ್ ಉಪಸ್ಥಿತರಿದ್ದರು.