ಮಲ್ಪೆ ಬಂದರಿನಲ್ಲಿ ಮೀನುಗಾರರನ್ನು ಭೇಟಿಯಾದ ಉಡುಪಿ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್; ಈ ಬಾರಿ ತನ್ನ ಗೆಲುವಿಗೆ ಸಹಕರಿಸುವಂತೆ ಮತಯಾಚನೆಯ ವೇಳೆ ಮನವಿ
Tuesday, May 2, 2023
ಮಲ್ಪೆ: ಮೀನುಗಾರರು ಕಷ್ಟದಿಂದ ಜೀವನ ಸಾಗಿಸುತ್ತಿದ್ದಾರೆ. ಬಂದರಿನಲ್ಲಿ ಸರಿಯಾದ ಶೌಚಾಲಯದ ವ್ಯವಸ್ಥೆ ಇಲ್ಲ. ಬಂದರಿನಲ್ಲಿ ಡ್ರಜ್ಜಿಂಗ್ ಆಗದೆ ಐದಾರು ವರ್ಷಗಳಾಗಿವೆ. ಈಗಿನ ಪಕ್ಷ ಜನರಿಗೆ ಮೋಸ ಮಾಡಿದೆ ಎಂದು ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಆರೋಪಿಸಿದ್ದಾರೆ.
ಅವರು ಮಂಗಳವಾರ ಮಲ್ಪೆಯಲ್ಲಿ ಮೀನುಗಾರರೊಂದಿಗೆ ಮತ ಯಾಚನೆಯ ವೇಳೆ ಮಾಯಣಾದಿದ್ದಾರೆ.
ಲೋಕಸಭಾ ಸದಸ್ಯ ಮತ್ತು ಉಡುಪಿ - ಚಿಕ್ಕಮಗಳೂರು ಕ್ಷೇತ್ರಗಳ ಉಸ್ತುವಾರಿಗಳಾದ ಪ್ರತಾಪನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಎಂ ಎ. ಗಪೂರ್ ಹಾಗೂ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಹಾಗೂ ಮಲ್ಪೆಯ ನಾಗರಿಕರು ಉಪಸ್ಥಿತರಿದ್ದರು.