ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐದು ಮಂದಿ ಶವವಾಗಿ ಪತ್ತೆ; ಕೊಲೆ-ಆತ್ಮಹತ್ಯೆ ಶಂಕೆ

ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐದು ಮಂದಿ ಶವವಾಗಿ ಪತ್ತೆ; ಕೊಲೆ-ಆತ್ಮಹತ್ಯೆ ಶಂಕೆ

  

ಕಣ್ಣೂರು: ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ಬುಧವಾರ ಬೆಳಗ್ಗೆ ಕಣ್ಣೂರು ಚೆರುಪುಳದ ಅವರ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ಕಳೆದ ವಾರವಷ್ಟೇ ಮದುವೆಯಾಗಿದ್ದ ದಂಪತಿ ಮಕ್ಕಳನ್ನು ಕೊಂದು ನಂತರ ತಾವು ನೇಣು ಹಾಕಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಮಕ್ಕಳು ಮೆಟ್ಟಿಲಿನ ಮೇಲೆ ಹಾಗೂ ದಂಪತಿ ಮನೆಯಲ್ಲಿದ್ದ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಮಹಿಳೆಗೆ ಎರಡನೇ ಮದುವೆಯಾಗಿದ್ದು, ಮೂವರು ಮಕ್ಕಳು ಮೊದಲ ಮದುವೆಯಿಂದ ಜನಿಸಿದವರು ಎಂದು ಮಾಹಿತಿ ಲಭ್ಯವಾಗಿದೆ. ಈ ಘಟನೆಯು ಮೇ 23-24ರ ಮಧ್ಯರಾತ್ರಿ ಸಂಭವಿಸಿದೆ ಎಂದು ಅವರು ಹೇಳಿದರು.

ಇಂದು ಬೆಳಗ್ಗೆ ಘಟನೆ ನಡೆದಿರುವ ಬಗ್ಗೆ ಅಲ್ಲಿನ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article