ಮೇ 6ರಂದು ಕಾರ್ಕಳದಲ್ಲಿ ಯೋಗಿ ಆದಿತ್ಯನಾಥ್ 'ಬೃಹತ್ ರೋಡ್ ಶೋ'; ಸುನಿಲ್ ಕುಮಾರ್ ಪರ ಮತಯಾಚನೆ
Thursday, May 4, 2023
ಕಾರ್ಕಳ: ಕಾರ್ಕಳ ನಗರದಲ್ಲಿ ಮೇ 6 ಶನಿವಾರದಂದು ಮಧ್ಯಾಹ್ನ 1 ಗಂಟೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ, ಹಿಂದುತ್ವದ ಫಯರ್ ಬ್ರಾಂಡ್ ಲೀಡರ್, ಕ್ಷ್ಯಾತ್ರತೇಜದ ನಾಥಪಂಥದ ಸಂತ ಶ್ರೀ ಯೋಗಿ ಆದಿತ್ಯನಾಥ್ 'ಬೃಹತ್ ರೋಡ್ ಶೋ' ನಡೆಸಲಿದ್ದಾರೆ.
'ಬೃಹತ್ ರೋಡ್ ಶೋ' ಅನಂತಶಯನ ವೃತ್ತದಿಂದ ನಗರದ ಮುಖ್ಯರಸ್ತೆಯಲ್ಲಿ ಸಾಗಿ ಶ್ರೀ ವೆಂಕಟರಮಣ ದೇವಸ್ಥಾನದ ವರೆಗೆ ಬರಲಿದೆ ಎಂದು ಕಾರ್ಕಳ ಬಿಜೆಪಿ ಕ್ಷೇತ್ರ ಅಧ್ಯಕ್ಷರಾದ ಮಹಾವೀರ ಹೆಗಡೆಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.