ಶಾಸಕನಾದ ಕೂಡಲೇ ಪ್ರಣಾಳಿಕೆಯಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ಈಡೇರಿಸುವೆ: ಉಚ್ಚಿಲ ನಾರಾಯಣಗುರು ರಸ್ತೆಯಲ್ಲಿ ಮತಯಾಚಿಸಿದ ಗುರ್ಮೆ ಸುರೇಶ್ ಶೆಟ್ಟಿ
ಕಾಪು: ಕಾಪು ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿರುವ ಗುರ್ಮೆ ಸುರೇಶ್ ಶೆಟ್ಟಿಯವರು ಇಂದು ಉಚ್ಚಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾರಾಯಣಗುರು ರಸ್ತೆಯಲ್ಲಿ ಮಾತಾಯಾಚನೆ ಮಾಡಿದರು.
ಈ ಸಂಧರ್ಭ ನೆರೆದಿದ್ದ ಸಭೆಯನ್ನು ಉದ್ದಶಿಸಿ ಮಾತನಾಡಿದ ಗುರ್ಮೆ ಸುರೇಶ್ ಶೆಟ್ಟಿ, ವ್ಯಕ್ತಿಗಿಂತ ಪಕ್ಷ ಮುಖ್ಯ ಪಕ್ಷಗಿಂತ ರಾಷ್ಟ್ರ ಮುಖ್ಯ, ನಿಮ್ಮ ಅಮೂಲ್ಯವಾದ ಮತವನ್ನು ನೀಡಿ ಕಾಪು ವಿಧಾನ ಸಭಾ ಕ್ಷೇತ್ರದಲ್ಲಿ ನನಗೆ ಸೇವೆ ಮಾಡಲು ಅವಕಾಶ ಮಾಡಿಕೊಡಿ, ಹಾಗೆ ಬಿಡುಗಡೆಗೊಂಡಿರುವ ಪ್ರಣಾಳಿಕೆಯ ಅಭಿವೃದ್ಧಿ ಕಾರ್ಯಗಳನ್ನು ನಡೆಸಿಕೊಡುವುದಾಗಿ ಭರವಸೆ ನೀಡಿದರು.
ಈ ಸಂಧರ್ಭ ಕರಾವಳಿ ಪ್ರಾಧಿಕಾರ ಉಪಾಧ್ಯಕ್ಷರಾದ ಕೇಸರಿ ಯುವರಾಜ್, ಬಿಲ್ಲವ ಮುಖಂಡರಾದ ಸದಾಶಿವ ಪೂಜಾರಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಶಕುಂತಲಾ ಕೋಟ್ಯಾನ್, ಉಚ್ಚಿಲ, ಗ್ರಾಮ ಪಂಚಾಯತ್ ಸದಸ್ಯರು ಹರಿಪ್ರಸಾದ್ ಸಾಲ್ಯಾನ್, ಪಂಚಾಯತ್ ಸದಸ್ಯರಾದ ಮೋಹಿನಿ ವಿ ಸುವರ್ಣ, ಚಂದ್ರಶೇಖರ್ ಕೋಟ್ಯಾನ್, ಹಾಗೂ ಉಚ್ಚಿಲ ಗ್ರಾಮಸ್ಥರು, ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.