ಬಿರುಸಿನ ಮತ ಯಾಚನೆ; ಸ್ಥಳೀಯರು ನೀಡುತ್ತಿರುವ ಸ್ಪಂದನೆ, ಅಭಿಮಾನವೇ ನನ್ನ ಗೆಲುವಿಗೆ ಮುನ್ನುಡಿ ಎಂದ ಇನಾಯತ್ ಅಲಿ
Wednesday, May 3, 2023
ಸುರತ್ಕಲ್: ಚುನಾವಣೆಗೆ ದಿನ ಹತ್ತಿರವಾಗುತ್ತಿದ್ದಂತೆಯೇ ಮಂಗಳೂರು ಉತ್ತರ ಕ್ಷೇತದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಅಲಿ ತಮ್ಮ ಕಾರ್ಯಕರ್ತರೊಂದಿಗೆ ಇಂದು ಬಿರುಸಿನ ಮತ ಯಾಚನೆ ಮಾಡಿದರು.
ಬೈಕಂಪಾಡಿಯ ಇಂಡಸ್ಟ್ರಿಯಲ್ ಎಸ್ಟೇಟ್‌ನಲ್ಲಿರುವ ಶ್ರೀಗುರುಚರಣ್ ಇಂಡಸ್ಟ್ರೀಸ್ ಹಾಗೂ ಡೆಕ್ಕನ್ ಪ್ಲಾಸ್ಟಿಕ್ ಫ್ಯಾಕ್ಟರಿಗೆ ಭೇಟಿ ನೀಡಿ, ಕೈಗಾರಿಕಾ ಸಿಬ್ಬಂದಿಗಳ ಕುಂದುಕೊರತೆ ಆಲಿಸಿ, ಅವರಿಗೆ ಸ್ಪಂದಿಸುವ ಭರವಸೆ ನೀಡಿದ ಇನಾಯತ್ ಅಲಿ, ಬಳಿಕ ಕಾಂಗ್ರೆಸ್ ಗ್ಯಾರಂಟಿಗಳ ಪ್ರಯೋಜನವನ್ನು ವಿವರಿಸಿ, ಕಾಂಗ್ರೆಸ್‌ಗೆ ಬೆಂಬಲಿಸುವಂತೆ ಮತಯಾಚಿಸಿದರು.
ಇದಕ್ಕೂ ಮೊದಲು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುಳಾಯಿ ಗ್ರಾಮದ ಮನೆ ಮನೆಗೆ ಭೇಟಿ ನೀಡಿ, ಕಾಂಗ್ರೆಸ್ ಗ್ಯಾರಂಟಿಗಳ ಕುರಿತು ಮಾಹಿತಿ ನೀಡಿ ಕಾಂಗ್ರೆಸ್‌ಗೆ ಬೆಂಬಲಿಸುವಂತೆ ಇನಾಯತ್ ಅಲಿ ಮನವಿ ಮಾಡಿದರು. ಈ ವೇಳೆ ಸ್ಥಳೀಯರು ನೀಡಿದ ಸ್ಪಂದನೆ, ಅಭಿಮಾನವೇ ನನ್ನ ಗೆಲುವಿಗೆ ಮುನ್ನುಡಿಯಾಗಿದೆ. ಕಾಂಗ್ರೆಸ್ ಬದಲಾವಣೆ ತರುವುದು ನಿಶ್ಚಿತ ಎಂದರು.