ಅಪಾರ ಸಂಖ್ಯೆಯ ತಾಯಂದಿರು, ಅಕ್ಕ ತಂಗಿಯರನ್ನು ಕಂಡಾಗ ಬೈಂದೂರಿನಲ್ಲಿ ಈ ಬಾರಿ ಕಮಲ ಅರಳುವುದು ಖಾತ್ರಿ:  ಬಿಜೆಪಿಯ ಸ್ಟಾರ್ ಪ್ರಚಾರಕಿ, ನಟಿ ತಾರಾ ವಿಶ್ವಾಸ

ಅಪಾರ ಸಂಖ್ಯೆಯ ತಾಯಂದಿರು, ಅಕ್ಕ ತಂಗಿಯರನ್ನು ಕಂಡಾಗ ಬೈಂದೂರಿನಲ್ಲಿ ಈ ಬಾರಿ ಕಮಲ ಅರಳುವುದು ಖಾತ್ರಿ: ಬಿಜೆಪಿಯ ಸ್ಟಾರ್ ಪ್ರಚಾರಕಿ, ನಟಿ ತಾರಾ ವಿಶ್ವಾಸ

ಕುಂದಾಪುರ : ಮಹಿಳಾ ಸಮಾವೇಶದಲ್ಲಿ ಪಾಲ್ಗೊಂಡ ಅಪಾರ ಸಂಖ್ಯೆಯ ತಾಯಂದಿರು, ಅಕ್ಕ ತಂಗಿಯರನ್ನು ಕಂಡಾಗ, ಬಿಜೆಪಿ ಬಗ್ಗೆ ಬೈಂದೂರಿನ ಮಹಿಳೆಯರಿಗೆ ನಂಬಿಕೆಯಿರುವುದು ಖಾತ್ರಿ. ಅಪಾರ ಹಾಗಾಗಿ ಮುಂಬರುವ ಚುನಾವಣೆಯಲ್ಲಿ ಬೈಂದೂರಲ್ಲಿ ಗುರುರಾಜ್ ಗಂಟೆಹೊಳೆ ಅವರ ಗೆಲುವು ನಿಶ್ಚಿತ ಎಂದು ಬಿಜೆಪಿಯ ಸ್ಟಾರ್ ಪ್ರಚಾರಕಿ, ನಟಿ ತಾರಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅವರು ಹೆಮ್ಮಾಡಿಯ ಜಯಶ್ರೀ ಸಭಾಂಗಣದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಬೈಂದೂರು ಮಂಡಲದ ವತಿಯಿಂದ ನಡೆದ ಮಹಿಳಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದರು.

ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಬೈಂದೂರಿಗೆ ಹೊಸತನ, ಹೊಸ ಉತ್ಸಾಹ, ಹೊಸಚೈತನ್ಯ ಬೇಕಾಗಿದ್ದು, ಅದಕ್ಕಾಗಿ ಬಿಜೆಪಿಯು ಸಾಮಾನ್ಯ ಕಾರಕರ್ತನಾಗಿದ್ದ ಗುರುರಾಜ್‌ ಗಂಟೆಹೊಳೆ ಅವರನ್ನು ಆಯ್ಕೆ ಮಾಡಿದೆ. ಅವರನ್ನು ಗೆಲ್ಲಿಸುವ ಮಹತ್ತರ ಜವಾಬ್ದಾರಿ ನಿಮ್ಮೆಲ್ಲರದು ಎಂದರು.

ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಜನರನ್ನು ಮರಳು ಮಾಡುವ ಕಾರ್ಡ್ ಆಗಿದ್ದು, ಅದನ್ನು ನಂಬಬೇಡಿ, ಬಿಜೆಪಿ ಕಳೆದ ಅವಧಿಯಲ್ಲಿ ರಾಜ್ಯ ಹಾಗೂ ದೇಶದಲ್ಲಿ ಮಾಡಿರುವ ಅಭಿವೃದ್ಧಿಯ ರಿಪೋರ್ಟ್ ಕಾರ್ಡನ್ನು ನೋಡಿ ಯಾರು ಉತ್ತಮರು ಎನ್ನುವುದಾಗಿ ಯೋಚಿಸಿ ಎಂದು ವಿಧಾನ ಪರಿಷತ್‌ ಸದಸ್ಯೆ ಭಾರತಿ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಅಭ್ಯರ್ಥಿ ಗುರುರಾಜ್ ಗಂಟೆಹೊಳೆ ಮಾತನಾಡಿ, ನನಗೆ ಗೊತ್ತಿಲ್ಲದೆ ಕ್ಷೇತ್ರದಲ್ಲಿ ಅನೇಕ ಮಂದಿ ತಾಯಂದಿರು ಬಿಜೆಪಿಯನ್ನು ಗೆಲ್ಲಿಸಲು ಶ್ರಮಿಸುತ್ತಿದ್ದಾರೆ. ಅವರೆಲ್ಲರ ಶ್ರಮವನ್ನು ವ್ಯರ್ಥವಾಗಲು ಬಿಡುವುದಿಲ್ಲ. ಮಹಿಳೆ ಯರೆಲ್ಲರ ರಕ್ಷಣೆಗೆ ಪ್ರಥಮ ಆದ್ಯತೆ ಎಂದರು.

ಈ ಸಮಾವೇಶದಲ್ಲಿ ಬೈಂದೂರು ಕ್ಷೇತ್ರದ ಬೇರೆ ಬೇರೆ ಕಡೆಗಳಿಂದ ಸಹಸ್ರಾರು ಮಂದಿ ಮಹಿಳೆಯರು ಆಗಮಿಸಿದ್ದರು.

ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಒಬಿಸಿ ಮೋರ್ಚಾಕಾರದರ್ಶಿ ಗೋವಿಂದ ಬಾಬು ಪೂಜಾರಿ, ಉಸ್ತುವಾರಿ ಬ್ರಿಜೇಶ್‌ ಚೌಟ, ಮಂಡಲದ ಅಧ್ಯಕ್ಷ ದೀಪಕ್‌ ಶೆಟ್ಟಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ವೀಣಾ ಶೆಟ್ಟಿ, ಬೈಂದೂರು ಮಹಿಳಾ ಅಧ್ಯಕ್ಷೆ ಭಾಗೀರಥಿ ಸುರೇಶ್‌, ಪ್ರಮುಖರಾದ ದೀಪಾ, ಶೋಭಾ ಜಿ. ಪುತ್ರನ್ ಮತ್ತಿತರರು ಉಪಸ್ಥಿತರಿದ್ದರು. ಪ್ರಿಯದರ್ಶಿನಿ  ದೇವಾಡಿಗ, ಅನಿತಾ R ಕಾರ್ಯಕ್ರಮವನ್ನು ನಿರೂಪಿಸಿದರು.

Ads on article

Advertise in articles 1

advertising articles 2

Advertise under the article