ದುಬೈನಲ್ಲಿ ಪಾಸ್ ಪೋರ್ಟ್ ಕಸಿಯಲ್ಪಟ್ಟು ವಂಚನೆಗೊಳಗಾಗಿದ್ದ ಕನ್ನಡತಿಯ ರಕ್ಷಣೆ ಮಾಡಿದ ಹೆಮ್ಮೆಯ ದುಬೈ ಕನ್ನಡ ಸಂಘ
ದುಬೈ: ದುಬೈಗೆ ಕೆಲಸ ಹುಡುಕಲು ಬಂದ ಯುವತಿಯೊಬ್ಬಳ ಪಾಸ್ ಪೋರ್ಟ್ ಅನ್ನು ಕೇರಳ ಮೂಲದ ಯುವತಿಯೊಬ್ಬಳು ಪಡೆದು ಹಿಂದುರುಗಿಸಲು ಸತಾಯಿಸಿದ್ದು, ಇದನ್ನು ಅರಿತ ಹೆಮ್ಮೆಯ ದುಬೈ ಕನ್ನಡ ಸಂಘ ಕೊನೆಗೂ ಹಿಂದಿರುಗಿಸುವ ಮೂಲಕ ಯುವತಿಯನ್ನು ರಕ್ಷಿಸಿದೆ.
ಬೆಂಗಳೂರು ಮೂಲದ ಕನ್ನಡತಿ ಯುವತಿ ವಂದನಾ ಕೆಲವು ತಿಂಗಳ ಹಿಂದೆ ದುಬೈಗೆ ಕೆಲಸ ಹುಡುಕಲು ಎಂದು ಆಗಮಿಸಿ ಕೇರಳ ಮೂಲದ ಯುವತಿ ಇರುವ ರೂಮಿನಲ್ಲಿ ಜೊತೆಗೆ ವಾಸವಿದ್ದಳು, ಕೆಲವು ದಿನಗಳ ನಂತರ ವಂದನಾ ಅವಳ ಪಾಸ್ಪೋರ್ಟ್ ಕೇರಳ ಮೂಲದ ಯುವತಿ ಪಡೆದುಕೊಂಡು ನಂತರ ಅದನ್ನು ಹಿಂದಿರುಗಿಸಲು ಬಹಳ ಸತಾಯಿಸುತ್ತಿದ್ದಳು. ಬೇರೆ ರೀತಿಯಲ್ಲೇ ಮೋಸ ಮಾಡಲು ಯೋಚಿಸಿದ ಕೇರಳ ಮೂಲದ ಯುವತಿ ವಾಸಿಸುತ್ತಿದ್ದ ಸ್ಥಳದಿಂದ ದುಬೈಯ ಅಬುಹೈಲ್ ಬಳಿ ರೂಮ್ ಬದಲಿಸಿ ಕನ್ನಡತಿ ಯುವತಿಯನ್ನು ಅಲ್ಲಿಗೆ ಆಹ್ವಾನಿಸುತ್ತಿದ್ದಳು.
ತನ್ನ ಪಾಸ್ಪೋರ್ಟ್ ಮೋಸ ಮಾಡಲು ಯೋಚಿಸಿದ ಯುವತಿ ಬಳಿ ಇದೆ ಎಂದು ಅದನ್ನು ಪಡೆದುಕೊಡಿ ಎಂದು ನಮ್ಮ ಹೆಮ್ಮೆಯ ದುಬೈ ಕನ್ನಡ ಸಂಘದ ಮುಖ್ಯ ಕಾರ್ಯದರ್ಶಿ ರಫೀಕಲಿ ಕೊಡಗು ಅವರಿಗೆ ಕನ್ನಡತಿ ಯುವತಿ ಕೇಳಿಕೊಂಡಿದ್ದರು. ರಫೀಕಲಿ ಅವರು ಸಂಘದ ಇತರರಿಗೆ ವಿಷಯ ತಿಳಿಸಿ ಸಹಾಯ ಮಾಡಲು ಮುಂದಾದರು. ಸಂಘದ ಸಲಹಾ ಸಮಿತಿ ಸದಸ್ಯರಾದ ನದೀಮ್ ಮುರುಡೇಶ್ವರ ಅವರು ವಂದನಾ ಯುವತಿಯನ್ನು ಭೇಟಿಯಾಗಿ ಊಟದ ವ್ಯವಸ್ಥೆ ಮಾಡಿಕೊಟ್ಟರು. ನಂತರ ಸಂಘದ ಸಮಿತಿ ಸದಸ್ಯರಾದ ಅಕ್ರಮ್ ಕೊಡಗು, ನಜೀರ ಮಂಡ್ಯ ಅವರು ಸೇರಿ ಇನ್ನೊಂದು ರೂಮಿಗೆ ವಂದನಾ ಅವರನ್ನು ವರ್ಗಾಯಿಸಿ ಇರಲು ಸ್ಥಳಾವಕಾಶ ಮಾಡಿಕೊಟ್ಟರು.
ಪಾಸ್ಪೋರ್ಟ್ ಪಡೆಯಲು ಮೋಸ ಮಾಡಲು ಯೋಚಿಸಿದ ಯುವತಿಯ ಸ್ಥಳಕ್ಕೆ ಹೋಗಲು ಹೇಳಿದ್ದರಿಂದ ತಂಡದ ರಫೀಕಲಿ, ಅಕ್ರಮ್ ಮತ್ತು ನಜೀರ ಅವರು ಉಪಾಯದೊಂದಿಗೆ ಕೇರಳ ಯುವತಿಗೆ ಗೊತ್ತಿಲ್ಲದೆ ವಂದನಾ ಅವರ ಜೊತೆ ಅವಳ ವಿಳಾಸ ತಲುಪಿ ಕೇರಳದ ಯುವತಿಗೆ ಕಾಣದ ರೀತಿಯಲ್ಲಿ ಅವಿತುಕೊಂಡು ವಂದನಾ ಅವರನ್ನು ಮಾತ್ರ ನಿಲ್ಲಿಸಿ ಅವಳನ್ನು ವಂದನಾ ಬಳಿ ತಲುಪಿಸದ್ದೆವು, ಮೋಸಮಾಡಲು ಯೋಚಿಸಿದ ಯುವತಿ ವಂದನಾ ಬಳಿ ಬರುತ್ತಿದ್ದಂತೆ ಸಿನಿಮಾ ರೀತಿ ಮೂರು ಕಡೆಯಿಂದ ರಫೀಕಲಿ ಅಕ್ರಮ್ ಮತ್ತು ನಜೀರ ಬಂದು ಸುತ್ತುವರೆದು ರಫೀಕಲಿ ಅವರು ಮೊದಲು ಅವಳ ಮೊಬೈಲ್ ಕಸಿದುಕೊಂಡು ಯುವತಿಯನ್ನು ತಮ್ಮ ಹತೋಟಿಯಲ್ಲಿ ಇಟ್ಟು ಮೋಸಮಾಡಲು ಯೋಚಿಸಿದ ಯುವತಿ ಜೊತೆ ಬಂದಿದ್ದ ಇನ್ನೊಂದು ಕೇರಳ ಮೂಲದ ಮಹಿಳೆಯನ್ನು ಪಾಸ್ಪೋರ್ಟ್ ಕೊಡದಿದ್ದರೆ ಪೊಲೀಸರನ್ನು ಕರೆಸುತ್ತೇವೆ ಎಂದು ಹೇಳಿ ಬೆದರಿಸಿ ರಫೀಕಲಿ ಜೊತೆಗೆ ರೂಮಿಗೆ ಕರೆದುಕೊಂಡು ಹೋಗಿ ಪಾಸ್ಪೋರ್ಟ್ ರಫೀಕಲಿ ಅವರ ಕೈಗೆ ಸಿಕ್ಕಿದ ಮೇಲೆ ವಂದನಾ ಅವರನ್ನು ಕರಾಮ ಮನೆಗೆ ಕರೆದುಕೊಂಡು ಸೇರಿಸಿದ್ದು, ವಂದನಾರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.