ದುಬೈ: ಮೂಳೂರು ಜಮಾತ್ ವೆಲ್ಫೇರ್ ಫೋರಮ್( MJWF) ನೂತನ ಅಧ್ಯಕ್ಷರಾಗಿ ಇಲ್ಯಾಸ್ ಉಮ್ಮರ್ ಆಯ್ಕೆ

ದುಬೈ: ಮೂಳೂರು ಜಮಾತ್ ವೆಲ್ಫೇರ್ ಫೋರಮ್( MJWF) ನೂತನ ಅಧ್ಯಕ್ಷರಾಗಿ ಇಲ್ಯಾಸ್ ಉಮ್ಮರ್ ಆಯ್ಕೆ

 


ದುಬೈ: ವೈದ್ಯಕೀಯ, ಶಿಕ್ಷಣ, ದೈನಂದಿನ ಮೂಲಭೂತ ಅವಶ್ಯಕತೆಗಳು ಪೂರೈಕೆ ಮೊದಲಾದ  ಕ್ಷೇತ್ರದಲ್ಲಿ ಮಾನವೀಯ ಸೇವೆಯನ್ನು ನೀಡುತ್ತಾ ಸಮಾಜ ಸೇವಾ ರಂಗದಲ್ಲಿ ಜನಪ್ರಿಯವಾದ ಸಮಾಜ ಸೇವಾ ಸಂಸ್ಥೆ ಮೂಳೂರು ಜಮಾತ್ ವೆಲ್ಫೇರ್ ಫೋರಮ್ ಇದರ 5 ನೇ ವಾರ್ಷಿಕ ಮಹಾ ಸಭೆಯು ಇತ್ತೀಚಿಗೆ ಸಂಸ್ಥೆಯ ಅಧ್ಯಕ್ಷರಾದ ಉಮ್ಮರ್ ಮೂಳೂರು ಇವರ ದುಬೈ ನಿವಾಸದಲ್ಲಿ ಜರುಗಿತು. 





ಸಂಸ್ಥೆಯ ಗೌರವ ಅಧ್ಯಕ್ಷರಾದ ಎಂ.ಈ.ಮೂಳೂರು ಹಾಗೂ ಸಂಸ್ಥೆಯ ಸ್ಥಾಪಕಾಧ್ಯಕ್ಷರೂ ಪ್ರಸ್ತುತ ಪ್ರಧಾನ ಸಲಹೆಗಾರರೂ ಆದ  ಉಮ್ಮರ್ ಮೂಳೂರು ಇವರ ಘನ ಉಪಸ್ಥಿತಿಯಲ್ಲಿ ನಡೆದ ಈ ಸಭೆಯಲ್ಲಿ  ಆಬ್ದುಲ್ ಹಮೀದ್ ಉಮ್ಮರ್, ಎಂ.ಈ.ಉಸ್ಮಾನ್, ಮೊಹಮದ್ ದಾವೂದ್,  ಸಮದ್ ಬೀರಾಲಿ, ಶಾಬಾನ್ ಅಬ್ದುಲ್ ರಜಾಕ್,   ಅಬ್ದುಲ್ ರಹ್ಮಾನ್ ಮಹಮೂದ್,  ಬಾಬಾ ಮೂಸಬ್ಬ, ಇಸ್ಮಾಯಿಲ್ ಅಬ್ದುಲ್ ರಾಝಕ್,   ಸಿರಾಜ್ ಮೂಳೂರು, ನವೀದ್, ಜಮಾಲ್  ಮೊದಲಾದ  ಹಿರಿಯ ನೇತಾರರು ಭಾಗವಹಿಸಿದ್ದರು. 

ಮಾಸ್ಟರ್ ಉಮ್ಮರ್ ಬಿನ್ ಅಬ್ದುಲ್ ಹಮೀದ್ ರವರ ಕಿರಾತ್ ನೊಂದಿಗೆ ಹಾಗೂ ಉಸ್ತಾದ್ ಮೊಹಮ್ಮದ್ ಇಬ್ರಾಹಿಂ ಸಖಾಫಿ ರವರ  ದುವಾ ದುವಾದೊಂದಿಗೆ ಪ್ರಾರಂಭಗೊಂಡ ಸಭಾ ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿಯವರಾದ  ಇಬ್ರಾಹಿಂ ಕಲತೂರು ರವರು ಅತಿಥಿಗಳನ್ನು ವೇದಿಕೆಗೆ ಬರಮಾಡಿ ಕೊಂಡರು. 

ಸಂಸ್ಥೆಯ ಗೌರವಾಧ್ಯಕ್ಷರಾದ ಎಂ ಈ ಮೂಳೂರು ರವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಸಂಸ್ಥೆಯ ಧ್ಯೇಯ, ಧೋರಣೆ ಮತ್ತು ಸಾಧನೆಗಳ ಬಗ್ಗೆ ವಿವರಣೆ ನೀಡುತ್ತಾ ಉತ್ತಮ ಧ್ಯೇಯ, ನಾಯಕತ್ವ ಮತ್ತು ಐಕ್ಯತೆ ಇದ್ದಲ್ಲಿ ಸಮಾಜದ ಒಳಿತಿಗಾಗಿ ಖಂಡಿತ ದೊಡ್ಡ ರೀತಿಯಲ್ಲಿ ಉಪಯುಕ್ತ ಸಮಾಜ ಮುಖೀ ಸೇವಾ ಕಾರ್ಯವನ್ನು ಮಾಡಲು ಸಾಧ್ಜ್ಯ ಎಂಬುವುದಕ್ಕೆ MJWF ಮಾದರಿ ಎಂದು ತಿಳಿಸುತ್ತಾ,  ಇಂದಿನ ಅತೀ ಮುಖ್ಯ ಅಗತ್ಯ ವಿದ್ಯೆ, ಇಂದು ಸಮಾಜವು ಎದುರಿಸುತ್ತಿರುವ ಎಲ್ಲ ಸಮಸ್ಯೆಗಳಿಗೆ ವಿದ್ಯಾ ಕ್ಷೇತ್ರದಲ್ಲಿ ಸಮಾಜದ ಸಬಲೀಕರಣವೇ ಪರಿಹಾರ ಎಂದು ಹೇಳಿದರು.

ಪ್ರಧಾನ ಸಲಹೆಗಾರರಾದ ಯೂಸುಫ್ ಉಮ್ಮರ್ ಮೂಳೂರು ರವರು ಮಾತನಾಡುತ್ತಾ MJWF ಬಂದ ದಾರಿಯ ಹೆಗ್ಗುರುತು ಮತ್ತು ಮೈಲಿಗಲ್ಲುಗಳನ್ನು ಉಲ್ಲೇಖಿಸುತ್ತಾ ಇನ್ನು ಮುಂದಕ್ಕೂ ಇದಕ್ಕಿಂತ ಹೆಚ್ಚಿನ ರೀತಿಯಲ್ಲಿ ಸಮಾಜದ ಸೇವೆ ಮಾಡುವಂತಾಗಲಿ ಎಂದು ಹಾರೈಸಿದರು. 

ಅಧ್ಯಕ್ಷರಾದ ಇಲ್ಯಾಸ್ ಉಮ್ಮರ್ ರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಸಂಸ್ಥೆಯ ಕಳೆದ ಒಂದು ವರ್ಷದ ಸಾಧನೆಯ ಸ್ಥೂಲ ಪರಿಚಯವನ್ನು ನೀಡಿ ಅದಕ್ಕಾಗಿ ಸಹಕರಿಸಿದ ಎಲ್ಲರಿಗೆ ಧನ್ಯವಾದ ಗೈದರು. 

ಕ್ಯಾನ್ಸರ್ , ಕಿಡ್ನಿ ಫೇಲ್ಯೂರ್ ಮೊದಲಾದ ಮಾರಣಾತಿಕ ಕಾಯಿಲೆಗಳಿಂದ ಬಳಲುತ್ತಿರುವವರ ಚಿಕಿತ್ಸೆಗೆ ಕ್ಷಿಪ್ರವಾಗಿ ಸಹಾಯ ಮಾಡುವಲ್ಲಿ ಸಹಕರಿಸಿದ ಸಹ್ರದಯಯಿಗಳನ್ನು ವಿಶೇಷವಾಗಿ ಸ್ಮರಿಸಿದರು.

ತವಕ್ಕ ಓವರ್ಸೀಸ್ ಅಧ್ಯಕ್ಷರಾದ ಮೊಹಮ್ಮದ್ ದಾವೂದ್ ಮತ್ತು ಅಲ್ ಕಮರ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷರಾದ ಸಿರಾಜ್ ಮೂಳೂರು ರವರು ಸಂಸ್ಥೆಯ ಸಾಧನೆಗಳನ್ನು ಶ್ಲಾಘಿಸುತ್ತಾ  ತಮ್ಮ ತಮ್ಮ ಸಂಸ್ಥೆಗಳ  ಪರವಾಗಿ ಶುಭ ಕೋರಿದರು.

ಹಾಲಿ ಕಾರ್ಯಕಾರೀ ಸಮಿತಿಯನ್ನು ಬರ್ಖಾಸ್ತು ಗೊಳಿಸಿ ಮೊಹಮ್ಮದ್ ದಾವೂದ್ ರವರ ನೇತೃತ್ವದಲ್ಲಿ 2023 -2024 ಸಾಲಿಗೆ ನೂತನ ಕಾರ್ಯಕಾರೀ ಸಮಿತಿಯನ್ನು ಆರಿಸಲಾಯಿತು.

ಹೊಸ ಕಾರ್ಯಕಾರಿ ಸಮಿತಿ: 

ಗೌರವಾಧ್ಯಕ್ಷರು: ಎಂ.ಈ.ಮೂಳೂರು

ಪ್ರಧಾನ ಸಲಹೆಗಾರರು : ಯೂಸುಫ್ ಉಮ್ಮರ್ ಮೂಳೂರು 

ಸಲಹಾ ಮಂಡಳಿ ಸದಸ್ಯರು : 

ಎಂ.ಈ.ಉಸ್ಮಾನ್ 

ಬಾವಾ ಮೂಸಬ್ಬ 

ಅಬ್ದುಲ್ ರಹ್ಮಾನ್ ಮಹಮೂದ್

ಮೊಹಮ್ಮದ್ ದಾವೂದ್

ಬಾರೂದ್ ಇಸ್ಮಾಯಿಲ್

ಅಬ್ದುಲ್ ಹಮೀದ್ ಉಮ್ಮರ್ 

ಅಧ್ಯಕ್ಷರು : ಇಲ್ಯಾಸ್ ಉಮ್ಮರ್ ಮೂಳೂರು 

ಉಪಾಧ್ಯಕ್ಷರುಗಳು : ನವೀದ್ , ಇಬ್ರಾಹಿಂ ಕಲತೂರು 

ಪ್ರಧಾನ ಕಾರ್ಯದರ್ಶಿ : ಜಮಾಲ್ ಮೂಳೂರು 

ಜೊತೆ ಕಾರ್ಯದರ್ಶಿ : ಸಮದ್ ಬೀರಾಲಿ, ಔಸಾಫ್ ಅಹ್ಮದ್ ಮೂಳೂರು 

ಕೋಶಾಧಿಕಾರಿ : ಇಸ್ಮಾಯಿಲ್ ಬಾಬಾ 

ಲೆಕ್ಕ ಪರಿಶೋಧಕ : ಅಬ್ದುಲ್ ರಶೀದ್ ಮಹಮೂದ್

ಸಂಚಾಲಕರು : ಶಾಬಾನ್ ಅಬ್ದುಲ್ ರಜಾಕ್, ನೌಫಾಲ್, ಮೊಹಮದ್ ಅತೀಫ್

MJWF ಸಂಸ್ಥೆಗಾಗಿ ಮತ್ತು ಸಮಾಜಕ್ಕಾಗಿ ಎಂದೂ  ತೆರೆದ ಮನಸ್ಸಿನಿಂದ ಸಹಾಯ ಮಾಡುವ ಕೊಡುಗೈ ದಾನಿ ಇಕ್ಬಾಲ್ ಸಿದ್ದಕಟ್ಟೆಯವರ ಅನುಪಸ್ಥಿತಿಯಲ್ಲಿ ಅವರನ್ನು ಗೌರವ ಪೂರ್ವಕವಾಗಿ ಸ್ಮರಿಸಲಾಯಿತು. 

ಸುಮಾರು 40 ಕ್ಕೂ ಅಧಿಕ ಊರಿನ ಯುವಕರಿಗೆ ನೌಕರಿ ಒದಗಿಸಿ ಕೊಟ್ಟು ದೊಡ್ಡ ರೀತಿಯಲ್ಲಿ ಸಮಾಜ ಸೇವೆಯನ್ನು ಮಾಡುತ್ತಾ ಸದಾ ಸಮುದಾಯದ ಬಗ್ಗೆ ತುಡಿತುವ ಮಾನವೀಯ ಹ್ರದಯದ ಸಜ್ಜನ, ಸಂಸ್ಥೆಯ ಹಿತೈಷಿ ಇಸ್ಮಾಯಿಲ್ ಬಾರೂದ್ ರವರನ್ನು ಸ್ಮರಣಿಕೆ ನೀಡಿ ಆದರಪೂರ್ವಕವಾಗಿ ಈ ಸಂಧರ್ಭದಲ್ಲಿ  ಸನ್ಮಾನಿಸಲಾಯಿತು.

ತಮ್ಮ ವಾರ್ಷಿಕ  ವರದಿ ವಾಚನದಲ್ಲಿ ಇಬ್ರಾಹಿಂ ಕಲತೂರು  ಸಂಸ್ಥೆಯು ಸಾಧಿಸಿದ ಎಲ್ಲ ಸಾಧನೆಗಳ ವಿವರ ಹಾಗೂ ಅದು ಮಾಡಿದ ವಿವಿಧ ರೀತಿಯ ಸೇವಾ ಕಾರ್ಯಗಳ ವಿವರ ನೀಡಿದರು. ಸಂಸ್ಥೆಯ ವಿಶೇಷ ಸಾಧನೆಗಳಲ್ಲಿ ಒಂದಾದ ವಾರ್ಷಿಕ ಕ್ಯಾಲೆಂಡರ್ ಮತ್ತು ಹಲವಾರು ಬಡ ಹೆಣ್ಣು ಮಕ್ಕಳ ಮದುವೆಗೆ ಸಹಾಯ ಮಾಡಿದ ವಿವರ ನೀಡುತ್ತಾ ಅದಕ್ಕಾಗಿ ಸಹಾಯ ಮಾಡಿದವರಿಗೆ ಧನ್ಯವಾದ ಅರ್ಪಿಸಿದರು. 

ಮೂಳೂರು ಜುಮ್ಮಾ ಮಸೀದಿಯ ಹೊಸ ಭವ್ಯವಾದ ಮಸೀದಿ ಸಂಕೀರ್ಣದ ಆಡಿಯೋ ವಿಶುಯಲ್ ಅನ್ನು ಇಸ್ಮಾಯಿಲ್ ಅಬ್ದುಲ್ ರಜಾಕ್ ರವರು ಪ್ರದರ್ಶಿಸಿದರು. 

ಮಾಸ್ಟರ್ ಉಮ್ಮರ್ ಅಬ್ದುಲ್ ಹಮೀದ್ ರ ಪ್ರತಿಭೆಯನ್ನು ಗುರುತಿಸಿ ಅವರನ್ನು ವಿಶೇಷವಾಗಿ ಈ ಸಂದ ದಲ್ಲಿ ಸನ್ಮಾನಿಸಲಾಯಿತು. ಇಬ್ರಾಹಿಂ ಕಲತೂರು ಧನ್ಯವಾದ ಸಮರ್ಪಿಸಿದರು. ಭೋಜನದ ವ್ಯವಸ್ಥೆಯನ್ನು ಇಲ್ಯಾಸ್ ಉಮ್ಮರ್ ಮೂಳೂರು ರವರು ಒದಗಿಸಿದ್ದರು. 


Ads on article

Advertise in articles 1

advertising articles 2

Advertise under the article