ಉಚ್ಚಿಲ: ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಮಂಗಳವಾರ ಬೆಳಗ್ಗೆ ಉಚ್ಚಿಲ ಪೇಟೆಯಲ್ಲಿ ನಡೆದಿದೆ.
ಬೈಕ್ ಸವಾರನ ಗುರುತು ಪತ್ತೆಯಾಗಿಲ್ಲ. ಬೈಕ್ ಪುತ್ತೂರಿನದ್ದೆಂದು ಹೇಳಲಾಗುತ್ತಿದೆ. ಈ ಘಟನೆ ಬೆಳಗ್ಗೆ 6 ಸುಮಾರಿಗೆ ಬೆಳಕಿಗೆ ಬಂದಿದೆ.
ಉಡುಪಿಯಿಂದ ಮಂಗಳೂರು ಕಡೆ ಹೋಗುತ್ತಿದ್ದ ಬೈಕ್ ಗೆ ಉಚ್ಚಿಲ ಪೇಟೆಯ ಕೆನರಾ ಬ್ಯಾಂಕಿನ ATM ಮುಂದೆ ಅಪರಿಚಿತ ವಾಹನ ಡಿಕ್ಕಿ ಹೊಡೆಡಿದ್ದು, ಈ ವೇಳೆ ಬೈಕ್ ಸವಾರನ ಮೇಲೆ ಬೇರೆ ವಾಹನ ಕೂಡ ಹರಿದು ಹೋಗಿದೆ ಎನ್ನಲಾಗಿದೆ.
ಘಟನೆಯ ಸ್ಥಳಕ್ಕೆ ಆಗಮಿಸಿದ ಸಾಮಾಜಿಕ ಕಾರ್ಯಕರ್ತ ಜಲಾಲುದ್ದೀನ್ ಜಲ್ಲು ಉಚ್ಚಿಲ ಹಾಗು ಮೂಳೂರು SDPI ಅಂಬ್ಯುಲೆನ್ಸ್ ಚಾಲಕ ಹಮೀದ್ NH ಅವರು, ರಝಾಕ್, ರಹೀಫ್, ಸಾದಿಕ್, ಮುಜೀಬ್ ಅವರ ಸಹಾಯದಿಂದ ಮೃತದೇಹವನ್ನು ಮೇಲಕ್ಕೆತ್ತಿ SDPI ಅಂಬ್ಯುಲೆನ್ಸ್ ಮೂಲಕ ಪಡುಬಿದ್ರೆ ಶವಾಗಾರಕ್ಕೆ ಸಾಗಿಸಿದರು. ಈ ವೇಳೆ ಪಡುಬಿದ್ರೆ ಪೊಲೀಸರು ಹಾಜರಿದ್ದರು.

