ಮೂಳೂರು ಜಮಾತ್ ವೆಲ್ಫೇರ್ ಫೋರಮ್ ದುಬೈ ವತಿಯಿಂದ 'ಆಪತ್ಬಾಂಧವ' ಇಸ್ಮಾಯಿಲ್ ಬಾರೂದ್ ಹುಸೈನ್'ರವರಿಗೆ ಸನ್ಮಾನ

ಮೂಳೂರು ಜಮಾತ್ ವೆಲ್ಫೇರ್ ಫೋರಮ್ ದುಬೈ ವತಿಯಿಂದ 'ಆಪತ್ಬಾಂಧವ' ಇಸ್ಮಾಯಿಲ್ ಬಾರೂದ್ ಹುಸೈನ್'ರವರಿಗೆ ಸನ್ಮಾನ


 ದುಬೈ: ಕಳೆದ ಹಲವಾರು ವರ್ಷಗಳಿಂದ ದುಬೈ ಯಲ್ಲಿ ದುಡಿಯುತ್ತಿರುವ ಅನಿವಾಸಿ ಕನ್ನಡಿಗ, ಆಪದ್ ಭಾಂಧವರಾಗಿ ಸಂಕಷ್ದ್ತಕ್ಕೀಡಾದವರ ನೆರವಿಗೆ ಸದಾ ಸಿದ್ಧ ಹಸ್ತರಾಗಿ ಸಂವಹಿಸುತ್ತಾ ಜನಪ್ರಿಯ ಸಮಾಜ ಸೇವಕರೆಂದು ಗುರುತಿಸಿ ಕೊಂಡಿರುವ ಬಾರೂದ್ ಇಸ್ಮಾಯಿಲ್ ಹುಸೈನ್ ರವರನ್ನು ಮೂಳೂರು ಜಮಾತ್ ವೆಲ್ಫೇರ್ ಫೋರಮ್ ( MJWF ) ವತಿಯಿಂದ ಸನ್ಮಾನಿಸಲಾಯಿತು. 

ಬಾರೂದ್ ಇಸ್ಮಾಯಿಲ್ ಹುಸೈನ್ ರವರು ಮಾಡುತ್ತಿರುವ ವಿವಿಧ ಸಮಾಜ ಸೇವಾ ಕಾರ್ಯಗಳಲ್ಲಿ ವಿಶೇಷವಾಗಿ ಅವರು ಊರಿಂದ ಜೀವನ ಮಾರ್ಗವನ್ನು ಅರಸಿ UAE ಗೆ ಬರುವ ಕನ್ನಡಿಗರಿಗೆ ನೌಕರಿ ಒದಗಿಸಿ ಕೊಡುವ ಕಾರ್ಯದಲ್ಲಿ ವಿಶೇಷ ಮುತುವರ್ಜಿ ವಹಿಸಿ ಇದುವರೆಗೆ ಸುಮಾರು 50  ಕ್ಕೂ ಮಿಕ್ಕಿ ಅನಿವಾಸಿ ಕನ್ನಡಿಗರಿಗೆ ನೌಕರಿ ಸಿಗಲು ಸಹಾಯ ಮಾಡಿದ ಮಹತ್ಕಾರ್ಯವನ್ನು ಗುರುತಿಸಿ ಈ ವಿಶೇಷ ಸನ್ಮಾನವನ್ನು ನೀಡಲಾಯಿತು. 

ಮ್ಜwಫ್ ಅಧ್ಯಕ್ಷರಾದ ಇಲ್ಯಾಸ್ ಉಮ್ಮರ್ ಮೂಳೂರು, ಗೌರವಾಧ್ಯಕ್ಷರಾದ ಎಂ. ಈ . ಮೂಳೂರು , ಪ್ರಧಾನ ಸಲಹೆಗಾರ ಯೂಸುಫ್ ಉಮ್ಮರ್ ಮೂಳೂರು ಮೊದಲಾದ ವರ ಉಪಸ್ಥಿತಿಯಲ್ಲಿ MJWF ನ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರ ವತಿಯಿಂದ ಬಾರೂದ್ ಇಸ್ಮಾಯಿಲ್ ಹುಸೈನ್ ರವರನ್ನು ವಿಶೇಷ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಗೌರವಾಧ್ಯಕ್ಷರಾದ ಎಂ ಈ ಮೂಳೂರು ರವರು ಬಾರೂದ್ ಇಸ್ಮಾಯಿಲ್ ಹುಸೈನ್ ರವರ ಮಾನವೀಯ ಸೇವೆಯ ಬಗ್ಗೆ ಮಾತಾಡುತ್ತ ಕಷ್ಟದಲ್ಲಿರುವ ಓರ್ವನಿಗೆ ನೌಕರಿ ಒದಗಿಸಿ ಕೊಡುವುದು ಉಳಿದ ಎಲ್ಲ ಬಗೆಯ ಸೇವೆಗಿಂತ ಉತ್ತಮ , ಅವನು ನೌಕರಿ ದೊರೆತು ದುಡಿಯಲು ಪ್ರಾರಂಭಿಸಿದಲ್ಲಿ ಅವನ ಮತ್ತು  ಅವನ ಕುಟುಂಬದ ಇತರ ಎಲ್ಲ ಸಮಸ್ಯೆಗಳು ದೂರ ಆಗುತ್ತದೆ. ಅವನು ಸ್ವಾವಲಂಬಿಯಾಗಿ ತನ್ನ ಉಟುಂಬವನ್ನು ಸಲಹುವುದು ಮಾತ್ರವಲ್ಲದೆ ಇತರರಿಗೆ ಸಹಾಯ ಮಾಡುವ ಸ್ಥಿತಿಗೆ ತಲುಪಿ ಒಂದು ಆರೋಗ್ಯ ದಾಯಕ ಉತ್ತಮ ಸಮಾಜದ ನಿರ್ಮಾಣಕ್ಕೆ ಕಾರಣ ಆಗುತ್ತಾನೆ. ಆ ನಿಟ್ಟಿನಲ್ಲಿ ಬಾರೂದ್ ಇಸ್ಮಾಯಿಲ್ ಹುಸೈನ್ ಇತರರಿಗೆ ಒಂದು ಮಾದರಿ ಯಾಗಿದ್ದಾರೆ. ಎಂದರು. 

MJWF ಇದರ ಅಧ್ಯಕ್ಷರಾದ ಇಲ್ಯಾಸ್ ಉಮ್ಮರ್ ಮೂಳುರ್ ರವರು  ಬಾರೂದ್ ಇಸ್ಮಾಯಿಲ್ ಹುಸೈನ್ ರವರ ಸೇವೆಯನು ಶ್ಲಾಘಿಸುತ್ತ ಅವರಿಗೆ ದೇವರು ಉತ್ತಮ ಆರೋಗ್ಯ , ಧೀರ್ಘಾಯುಷ್ಯ ಮತ್ತು ಶ್ರೇಯಸ್ಸನ್ನು ಕರುಣಿಸಿ ಇನ್ನಷ್ಟು ಹೆಚ್ಚಿನ ರೀತಿಯಲ್ಲಿ ಸಮಾಜ ಸೇವೆ ಮಾಡುವಂತಾಗಲಿ ಎಂದು ಹಾರೈಸಿದರು. ಬಾರೂದ್ ಇಸ್ಮಾಯಿಲ್ ಹುಸೈನ್ ರವರು ತಮಗೆ ಸನ್ಮಾನ ಮಾಡಿದ MJWF ಗೆ ಧನ್ಯವಾದ ಸಮರ್ಪಿಸುತ್ತಾ ನಾವು ಆದಷ್ಟು ಹೆಚ್ಚಿನ ರೀತಿಯಲ್ಲಿ ನಮ್ಮ ಪರಿಚಯದವರನ್ನು ಸಂಪರ್ಕಿಸುವುದರ ಮೂಲಕ ಮತ್ತು ನೌಕರಿಗಾಗಿ ಊರಿಂದ UAE ಗೆ ಬರುತ್ತಿರುವ  ಅನಿವಾಸಿ ಕನ್ನಡಿಗರಿಗೆ ತಮ್ಮ ಕೈಲಾದ ಸಹಾಯ ಮತ್ತು ಮಾರ್ಗದರ್ಶನ ನೀಡುವುದರ ಮೂಲಕ  ಉತ್ತಮ ಸಮಾಜದ ನಿರ್ಮಾಣಕ್ಕೆ ಪರಿಣಾಮಕಾರಿಯಾಗಿ ನಾವು ಸಹಕಾರ ನೀಡ ಬಹುದು, ಆದುದರಿಂದ ಪ್ರತಿಯೊಬ್ಬರೂ ಸಾಧ್ಯವಾದಷ್ಟು ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತ ರಾಗ ಬೇಕು ತಂದರು. MJWF ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಕಲತೂರು ಧನ್ಯವಾದ ವಿತ್ತರು,


Ads on article

Advertise in articles 1

advertising articles 2

Advertise under the article