ಇಡೀ ಜಗತ್ತು ಮೋದಿಯನ್ನು ಹೊಗಳುತ್ತಿದ್ದರೆ ಕಾಂಗ್ರೆಸ್ ಮಾತ್ರ ಹಾವು, ಅನಕ್ಷರಸ್ಥ, ಚಾಯ್ ವಾಲಾ ಎಂದು ಟೀಕಿಸುತ್ತಿದೆ: ಜೆಪಿ ನಡ್ಡಾ
Thursday, June 22, 2023
ನವದೆಹಲಿ: ಇಡೀ ಜಗತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳುತ್ತಿದೆ, ಆದರೆ ಕಾಂಗ್ರೆಸ್ ಅವರನ್ನು ಹಾವು, ಅನಕ್ಷರಸ್ಥ, ಚಾಯ್ ವಾಲಾ ಎಂದು ಟೀಕಿಸುತ್ತಿದೆ ಎಂದು ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಅಧ್ಯಕ್ಷ ಜೆಪಿ ನಡ್ಡಾ ಅವರು ಗುರುವಾರ ವಾಗ್ದಾಳಿ ನಡೆಸಿದ್ದಾರೆ.
"ಇಡೀ ಜಗತ್ತು ಪ್ರಧಾನಿ ಮೋದಿಯನ್ನು ಹೊಗಳುತ್ತದೆ. ಆದರೆ ಕಾಂಗ್ರೆಸ್ ಅವರನ್ನು ಹಾವು, ಅನಕ್ಷರಸ್ಥ, ಚಾಯ್ ವಾಲಾ ಎಂದು ಕರೆಯುತ್ತಿದೆ. ಇಂದು ಅಮೆರಿಕ, ಯುರೋಪ್ ಮತ್ತು ಆಸ್ಟ್ರೇಲಿಯಾದಲ್ಲಿ ಆರ್ಥಿಕ ಮಂದಗತಿ ಇದೆ. ಆದರೆ ಭಾರತದ ಆರ್ಥಿಕತೆ ಸದೃಢವಾಗಿದೆ" ಎಂದು ಜಾರ್ಖಂಡ್‌ನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಹೇಳಿದ್ದಾರೆ.
ಕಳೆದ ಮೇ ತಿಂಗಳಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮೋದಿಯನ್ನು ವಿಷಪೂರಿತ ಹಾವಿಗೆ ಹೋಲಿಸಿ ವಾಗ್ದಾಳಿ ನಡೆಸಿದ್ದರು.
ಆದಾಗ್ಯೂ, ನಂತರ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದ ಖರ್ಗೆ ಅವರು, ತಮ್ಮ ಹೇಳಿಕೆಯು ಯಾರನ್ನೂ ನೋಯಿಸುವ ಉದ್ದೇಶ ಹೊಂದಿಲ್ಲ ಎಂದು ಸ್ಪಷ್ಟಿಕರಣ ನೀಡಿದ್ದರು.