ಆನ್​ಲೈನ್ ಗೇಮ್ ಚಟದಿಂದ 65 ಲಕ್ಷ ರೂ. ಹೆಚ್ಚು ಸಾಲ; ಯುವಕ ಆತ್ಮಹತ್ಯೆ

ಆನ್​ಲೈನ್ ಗೇಮ್ ಚಟದಿಂದ 65 ಲಕ್ಷ ರೂ. ಹೆಚ್ಚು ಸಾಲ; ಯುವಕ ಆತ್ಮಹತ್ಯೆ

ಶಿರಸಿ: ಆನ್​ಲೈನ್​ ಗೇಮ್ ಗಾಗಿ ಲಕ್ಷ ಲಕ್ಷ ಸಾಲ ಮಾಡಿದ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆನ್​ಲೈನ್​ಗೇಮ್ ಚಟದಿಂದ 65 ಲಕ್ಷ ರೂ. ಹೆಚ್ಚು ಸಾಲ ಮಾಡಿಕೊಂಡು ತೀರಿಸಲಾಗದೇ ಆನ್​ಲೈನ್​ ಗೇಮ್ ಚಟನೂ ಬಿಡಲಾಗದೇ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಬಾಳೆತೋಟ ಗ್ರಾಮದಲ್ಲಿ ನಡೆದಿದೆ. 37 ವರ್ಷದ ಶಾಂತರಾಮ ಹೆಗಡೆ ಆತ್ಮಹತ್ಯೆಗೆ ಶರಣಾದ ವ್ಯಕ್ತಿ.

ಶಾಂತರಾಮ ಹೆಗಡೆ ಮದುವೆಯಾಗಿ ಕೇವಲ 2ವರ್ಷ ಅಷ್ಟೇ ಆಗಿತ್ತು. ಇದು ಬದುಕಿ ಬಾಳಬೇಕಾದ ಸಮಯದಲ್ಲಿ ಆನ್​ಲೈನ್​ ಗೇಮ್​ನ ಚಟಕ್ಕೆ ಬಿದ್ದು ಜೀವವನ್ನೇ ಕಳೆದುಕೊಂಡಿದ್ದಾನೆ. ಈತ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತಿದ್ದ. ತಾಯಿ ಕಳೆದುಕೊಂಡು ಚಿಕ್ಕಮ್ಮನ ಆಸರೆಯಲ್ಲಿ ಬೆಳೆದಿದ್ದ ಈತ ಕಳೆದ ಎರಡು ವರ್ಷದ ಹಿಂದೆ ವಿವಾಹವಾಗಿದ್ದು, ಅದ್ಭುತ ಜೀವನ ಮಾಡುತ್ತಿದ್ದ,

ಆದ್ರೆ ಸಮಯ ಕಳೆಯಲು ಆನ್ ಲೈನ್ ಗೇಮ್ ಶುರುಮಾಡಿದ್ದಾತ ಲಕ್ಷ ಲಕ್ಷ ಹಣವನ್ನೇ ಸುರಿದಿದ್ದಾನೆ. ತಾನೂ ಮಾಡಿದ ಸಾಲವೇ 65 ಲಕ್ಷ ರೂ. ದಾಟಿ ಹೋಗಿತ್ತು. ಸಾಲಗಾರರ ಕಾಟ ತಾಳಲಾರದೇ ಮನೆಯಿಂದ ಹೊರಟವನು ಶಿರಸಿಯ ಕೊಳವೆ ಅರಣ್ಯದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಡೆತ್ ನೋಟ್ ನಲ್ಲಿ ಸಹ ತಾನು ಆನ್ ಲೈನ್ ಗೇಮ್ ಗೀಳಿನಿಂದ ಹೊರಬರಲಾಗದೇ, ಸಾಲ ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿ ನೇಣಿಗೆ ಶರಣಾಗಿದ್ದಾನೆ.

Ads on article

Advertise in articles 1

advertising articles 2

Advertise under the article